CINE | ಮೊದಲ ದಿನ ಭರ್ಜರಿ ಕಲೆಕ್ಷನ್, ಎರಡನೇ ದಿನ ಒಂದಂಕಿ ಗಳಿಕೆ: ವೀಕೆಂಡ್ ನಲ್ಲಿ ನಿರ್ಧಾರವಾಗುತ್ತಾ ‘ಹರಿ ಹರ ವೀರ ಮಲ್ಲು’ ಭವಿಷ್ಯ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪವನ್ ಕಲ್ಯಾಣ್ ಅಭಿನಯದ ಬಹುನಿರೀಕ್ಷಿತ ಕಾಲ್ಪನಿಕ ಚಿತ್ರ ‘ಹರಿ ಹರ ವೀರ ಮಲ್ಲು’ ಬಿಡುಗಡೆಯಾದ ಮೊದಲ ದಿನವೇ ಭರ್ಜರಿ ಆರಂಭ ಪಡೆದು ಬರೋಬ್ಬರಿ 47 ಕೋಟಿ ಕಲೆಕ್ಷನ್ ಮಾಡಿತ್ತು. ಈ ಮೂಲಕ ಸಿನಿಮಾ ಬಾಕ್ಸ್ ಆಫೀಸ್‌ ನಲ್ಲಿ ದೊಡ್ಡ ನಿರೀಕ್ಷೆ ಹುಟ್ಟಿಸಿತ್ತು. ಆದರೆ, ಎರಡನೇ ದಿನಕ್ಕೆ ಸಿನಿಮಾದ ವೇಗ ಸಂಪೂರ್ಣವಾಗಿ ಕುಂಠಿತವಾಗಿದ್ದು, ಕಲೆಕ್ಷನ್ ಕೇವಲ 8 ಕೋಟಿಗೆ ಇಳಿದಿದೆ.

ಹೀಗಾಗಿ, ಚಿತ್ರದ ಮುಂದಿನ ದಿನಗಳ ಪ್ರದರ್ಶನದ ಕುರಿತು ಅಭಿಮಾನಿಗಳಲ್ಲಿ ಗಂಭೀರ ಚರ್ಚೆಗಳು ಆರಂಭವಾಗಿವೆ. ಬುಕ್ ಮೈ ಶೋನಲ್ಲಿ ಸಿನಿಮಾಗೆ 8.4 ರೇಟಿಂಗ್ ದೊರೆತಿದ್ದರೂ, ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರಕ್ಕೆ ವ್ಯಾಪಕ ಟೀಕೆಗಳು ಹರಿದು ಬರುತ್ತಿವೆ. ಇದರ ನಡುವೆ, ಅಭಿಮಾನಿಗಳು ನಕಲಿ ರೇಟಿಂಗ್‌ಗಳ ಮೂಲಕ ಸಿನಿಮಾವನ್ನು ರಕ್ಷಿಸಲು ಪ್ರಯತ್ನಿಸುತ್ತಿದ್ದಾರೆ ಎಂಬ ಆರೋಪಗಳೂ ಕೇಳಿಬಂದಿವೆ.

ಹರಿ ಹರ ವೀರ ಮಲ್ಲು ಮೊಘಲ್ ಯುಗದ ಹಿನ್ನೆಲೆಯ ಕಥಾಹಂದರ ಹೊಂದಿದ್ದು, ಪವನ್ ಕಲ್ಯಾಣ್ ಡೈಮಂಡ್ ಕದಿಯುವ ನಕಲಿ ರಾಜಪೂತರ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರವನ್ನು ಗ್ರಾಂಡ್ ಸ್ಕೆಲ್‌ನಲ್ಲಿ ನಿರ್ಮಿಸಲಾಗಿದೆ. ಬಜೆಟ್ 250 ಕೋಟಿ ಇರುವ ಈ ಚಿತ್ರ ಪವನ್ ಕಲ್ಯಾಣ್‌ ಅವರ ಬಹುಚರ್ಚಿತ ರಿಟರ್ನ್‌ ಸಿನಿಮಾ ಎನ್ನಲಾಗುತ್ತಿದೆ.

ಗುರುವಾರ ರಿಲೀಸ್ ಆದ ಕಾರಣದಿಂದ ಶುಕ್ರವಾರ ಕಲೆಕ್ಷನ್ ಇಳಿಕೆಯಾಗಿದೆ. ಶನಿವಾರ ಮತ್ತು ಭಾನುವಾರ ಸಿನಿಮಾದ ನಿಜವಾದ ಸಾಮರ್ಥ್ಯ ಹೊರ ಬೀಳಬಹುದು. ಪವನ್ ಕಲ್ಯಾಣ್ ಹಲವು ವರ್ಷಗಳ ನಂತರ ಬೃಹತ್ ಹೂಡಿಕೆಯ ಚಿತ್ರದಲ್ಲಿ ನಟಿಸಿರುವುದರಿಂದ, ಬಾಕ್ಸ್ ಆಫೀಸ್‌ನಲ್ಲಿ ಚುರುಕಾಗುವ ನಿರೀಕ್ಷೆ ಇನ್ನೂ ಜೀವಂತವಾಗಿದೆ.

ಆದಾಗ್ಯೂ, ಹರಿ ಹರ ವೀರ ಮಲ್ಲು ಚಿತ್ರದ ಮುಂದಿನ ಹಂತದ ಪ್ರದರ್ಶನ ನಿರ್ಣಾಯಕವಾಗಿದ್ದು, ಈ ವಾರಾಂತ್ಯದ ಗಳಿಕೆ ಚಿತ್ರತಂಡಕ್ಕೆ ಆತ್ಮವಿಶ್ವಾಸ ತರುವುದೋ ಅಥವಾ ನಿರಾಸೆ ಮೂಡಿಸುವುದೋ ಎಂಬುದನ್ನು ನಿರ್ಧರಿಸಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!