ಪ್ರತಿಯೊಬ್ಬರ ಮನೆಯಲ್ಲಿಯೂ ಈಗ ಫ್ರಿಡ್ಜ್ ಇರೋದು ಸಾಮಾನ್ಯ. ಉಳಿದ ಅಡುಗೆಯನ್ನ ಮತ್ತೆ ಬಳಸಿಕೊಳ್ಳಲು ಬಹುತೇಕ ಜನರು ಅದನ್ನು ರೆಫ್ರಿಜರೇಟರ್‌ನಲ್ಲಿ ಇಡುತ್ತಾರೆ. ಆದರೆ ಕೆಲವೊಂದು ಆಹಾರ ಪದಾರ್ಥಗಳು ಇವುಗಳಲ್ಲಿ 24 ಗಂಟೆಗಳಿಗಿಂತ ಹೆಚ್ಚು ಕಾಲ ರೆಫ್ರಿಜರೇಟರ್‌ನಲ್ಲಿ ಇಟ್ಟರೆ ಆ ಆಹಾರ ವಿಷ ಸಮಾನವಂತೆ ಎಂದು ತಜ್ಞರು ಹೇಳುತ್ತಾರೆ.
ಸಿಪ್ಪೆ ಸುಲಿದ ಬೆಳ್ಳುಳ್ಳಿ:
ಬೆಳ್ಳುಳ್ಳಿಯ ಸಿಪ್ಪೆ ತೆಗೆದು ಫ್ರಿಡ್ಜ್‌ನಲ್ಲಿ ಇಟ್ಟರೆ ಅದು ಬೇಗನೆ ದುರ್ವಾಸನೆ ಹಿಡಿದು ಹಾಳಾಗಬಹುದು. ಇದನ್ನು ಬಳಸಿದರೆ ಉಸಿರಾಟದ ತೊಂದರೆಗಳು, ಆಸ್ತಮಾ ಮತ್ತು ಶ್ವಾಸಕೋಶದ ಸೋಂಕುಗಳ ಸಂಭವ ಹೆಚ್ಚಾಗುತ್ತದೆ.
ಕತ್ತರಿಸಿದ ಈರುಳ್ಳಿ:
ಈರುಳ್ಳಿಯನ್ನು ಕತ್ತರಿಸಿದ ನಂತರ ಅದನ್ನು ಹೆಚ್ಚು ಕಾಲ ಫ್ರಿಡ್ಜ್‌ನಲ್ಲಿ ಇಡಬಾರದು. ಇದರಿಂದ ಬ್ಯಾಕ್ಟೀರಿಯಾ ಬೆಳೆಯುವ ಸಾಧ್ಯತೆ ಇರುತ್ತದೆ. ಈ ಬ್ಯಾಕ್ಟೀರಿಯಾ ಯಕೃತ್ತು ಹಾಗೂ ಕಿಡ್ನಿಗೆ ಹಾನಿ ಮಾಡಬಹುದು ಮತ್ತು ಇಮ್ಯೂನ್ ಸಿಸ್ಟಮ್‌ಗೆ ತೊಂದರೆ ಉಂಟುಮಾಡಬಹುದು.
ಕತ್ತರಿಸಿದ ಶುಂಠಿ:
ಶುಂಠಿಯನ್ನು ಕತ್ತರಿಸಿದ ಮೇಲೆ ಫ್ರಿಡ್ಜ್‌ನಲ್ಲಿ ಇಡುವುದು ಸರಿಯಲ್ಲ. ತೇವಾಂಶದಿಂದ ಇದು ಹಾಳಾಗಬಹುದು. ಇಂತಹ ಶುಂಠಿ ಸೇವಿಸಿದರೆ ಉಸಿರಾಟದ ಸೋಂಕುಗಳು ಉಂಟಾಗಬಹುದು ಮತ್ತು ಮೆದುಳಿನ ಮೇಲೆ ದುಷ್ಪ್ರಭಾವ ಬೀರುತ್ತದೆ.
ಉಳಿದ ಅನ್ನ:
ಉಳಿದ ಅನ್ನವನ್ನು ಫ್ರಿಡ್ಜ್‌ನಲ್ಲಿ ಇಡಬಹುದು, ಆದರೆ ಅದು 24 ಗಂಟೆಗಳಿಗಿಂತ ಹೆಚ್ಚು ಸಮಯ ಉಳಿದರೆ ಸೂಕ್ಷ್ಮ ವಿಷಗಳು ರೂಪುಗೊಳ್ಳಬಹುದು. ಇದರಿಂದ ತೀವ್ರವಾದ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು.
ಆಲೂಗಡ್ಡೆ:
ಫ್ರಿಡ್ಜ್‌ನ ತಂಪು ಮತ್ತು ತೇವಾಂಶ ಆಲೂಗಡ್ಡೆ ಹಾಳಾಗುವ ಸಾಧ್ಯತೆಯನ್ನು ಹೆಚ್ಚಿಸುತ್ತವೆ. ಇದರ ರುಚಿಯೂ ಕೆಡುತ್ತದೆ. ಇದರಿಂದ ಕೂಡ ಆಹಾರ ವಿಷವಾಗಬಹುದು.
ಹೆಚ್ಚಿನ ಕಾಲ ಫ್ರಿಡ್ಜ್‌ನಲ್ಲಿ ಇಡಬಾರದ ಈ ಆಹಾರಗಳನ್ನು 24 ಗಂಟೆ ಒಳಗಾಗಿ ಬಳಸುವುದು ಉತ್ತಮ. ಹಣ್ಣುಗಳು, ಕೆಲವು ತರಕಾರಿಗಳನ್ನು ಹೊರತುಪಡಿಸಿ, ಉಳಿದ ಎಲ್ಲಾ ಆಹಾರಗಳು ಶೀಘ್ರವಾಗಿ ಬಳಸಬೇಕು.(Disclaimer: ಈ ಲೇಖನವು ಸಾರ್ವಜನಿಕ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಯಾಧಾರಿತವಾಗಿದೆ.)