ತೆಂಗಿನ ಎಣ್ಣೆ ಚರ್ಮದ ಆರೈಕೆಯಲ್ಲಿ ಜನಪ್ರಿಯವಾದ ಮನೆಮದ್ದು. ಇದನ್ನು ಹೆಚ್ಚಿನವರು ತಮ್ಮ ಮುಖ, ತುಟಿ, ಕೂದಲಿನ ಆರೈಕೆಗೆ ಬಳಸುತ್ತಾರೆ. ಲಾರಿಕ್ ಆಸಿಡ್, ಬ್ಯಾಕ್ಟೀರಿಯಾ ನಾಶಕ ಗುಣಗಳಿರುವ ಈ ಎಣ್ಣೆ, ಶೀತ ಋತುದಲ್ಲಿಯೂ, ಬೇಸಿಗೆಯಲ್ಲಿಯೂ ಸಮರ್ಪಕವಾಗಿದೆ. ಆದರೆ ಎಲ್ಲರಿಗೂ ತೆಂಗಿನ ಎಣ್ಣೆ ಒಪ್ಪುವುದಿಲ್ಲ. ಕೆಲವರಿಗೆ ಇದು ಚರ್ಮದ ಸಮಸ್ಯೆ ಉಂಟುಮಾಡುವ ಸಾಧ್ಯತೆ ಇದೆ. ಹಾಗಾಗಿ ಈ ಎಣ್ಣೆ ಬಳಕೆಗೂ ಮುನ್ನ ಕೆಲವು ಮುನ್ನೆಚ್ಚರಿಕೆ ಅಗತ್ಯ.
ಮುಕ್ತ ರಂಧ್ರದ (open pore skin) ಚರ್ಮಕ್ಕೆ ಬಳಸಬೇಡಿ:
ಎಣ್ಣೆಯುಕ್ತ ಅಥವಾ ಮೊಡವೆಗಳು ಹೊಂದಿರುವ ಚರ್ಮದವವರು ಈ ಎಣ್ಣೆ ಬಳಸದಿರುವುದು ಉತ್ತಮ. ಏಕೆಂದರೆ ತೆಂಗಿನ ಎಣ್ಣೆಯ ದಪ್ಪ ಘಟಕಗಳು ಮುಖದ ರಂಧ್ರಗಳನ್ನು ಮುಚ್ಚಿ, ಮೊಡವೆ ಅಥವಾ ಇನ್ಫೆಕ್ಷನ್‌ಗಳಿಗೆ ಕಾರಣವಾಗಬಹುದು.
ಪ್ಯಾಚ್ ಟೆಸ್ಟ್ ಮಾಡುವುದು ಕಡ್ಡಾಯ:
ತಮಗೆ ತೆಂಗಿನ ಎಣ್ಣೆ ಅಲರ್ಜಿಯುಂಟುಮಾಡುತ್ತದೆಯೇ ಎಂದು ಪರೀಕ್ಷಿಸಲು, ಮೊದಲು ಕೈ ಅಥವಾ ಕುತ್ತಿಗೆಯ ಹಿಂಭಾಗದಲ್ಲಿ ಎಣ್ಣೆ ಹಚ್ಚಿ ಪರೀಕ್ಷಿಸಬೇಕು. ಚರ್ಮದ ಮೇಲೆ ಕೆಂಪಾಗುವುದು, ತುರಿಕೆ ಅಥವಾ ಉರಿ ಕಾಣಿಸಿದರೆ ಬಳಸಬಾರದು.
ಮುಖದ ಮೇಲೆ ಅರ್ಧ ಗಂಟೆ ಮಾತ್ರ ಇಡಬೇಕು:
ತೆಂಗಿನ ಎಣ್ಣೆಯನ್ನು ಮುಖದ ಮೇಲೆ ಅನ್ವಯಿಸಿದಾಗ, 30-40 ನಿಮಿಷದವರೆಗೆ ಮಾತ್ರ ಇರಬೇಕು. ನಂತರ ಉಗುರು ಬೆಚ್ಚಗಿನ ನೀರಿನಿಂದ ತೊಳೆಯಬೇಕು. ಇದರಿಂದ ಚರ್ಮದಲ್ಲಿ ಉಳಿದ ಎಣ್ಣೆ ಕಡಿಮೆಯಾಗುತ್ತದೆ.
ಅರಿಶಿನದ ಜೊತೆ ಉತ್ತಮ ಮಿಶ್ರಣ:
ಒಣ ಚರ್ಮವಿರುವವರು ತೆಂಗಿನ ಎಣ್ಣೆಗೆ ಸ್ವಲ್ಪ ಅರಿಶಿನ ಬೆರೆಸಿ ಮುಖಕ್ಕೆ ಹಚ್ಚಬಹುದು. ಇದು ಚರ್ಮಕ್ಕೆ ಸಾಫ್ಟ್ನೆಸ್ ಹಾಗೂ ಹೊಳಪು ನೀಡುತ್ತದೆ. ಒಂದು ಗಂಟೆಯ ನಂತರ ಸ್ವಚ್ಛವಾಗಿ ತೊಳೆಯಬೇಕು.
ರಾತ್ರಿ ಹಚ್ಚುವುದು ಉತ್ತಮ ಸಮಯ:
ಮಲಗುವ ಮುನ್ನ ತೆಂಗಿನ ಎಣ್ಣೆ ಹಚ್ಚಿದರೆ, ಚರ್ಮ ತೇವಾಂಶವನ್ನು ಹೀರಿಕೊಳ್ಳಲು ಹೆಚ್ಚು ಸಮಯ ಸಿಗುತ್ತದೆ. ಇದರಿಂದ ಚರ್ಮ ಮೃದು, ನಯಗೊಳಿಸುವಂತಾಗುತ್ತದೆ.
ತೆಂಗಿನ ಎಣ್ಣೆ ಒಣ ಚರ್ಮಕ್ಕೆ ಅನುಕೂಲವಾದರೂ, ಎಲ್ಲರಿಗೂ ಸರಿಹೊಂದುತ್ತದೆ ಎಂಬುದಿಲ್ಲ. ಇದರ ಬಳಕೆಗೆ ಮುನ್ನ ತಮ್ಮ ಚರ್ಮದ ಬಗೆಯನ್ನೂ, ಎಣ್ಣೆಯ ಗುಣಲಕ್ಷಣವನ್ನೂ ತಿಳಿದುಕೊಳ್ಳುವುದು ಅತ್ಯವಶ್ಯಕ. (Disclaimer: ಈ ಲೇಖನವು ಸಾರ್ವಜನಿಕ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಯಾಧಾರಿತವಾಗಿದೆ.)