ತಲೆ ಸ್ನಾನ ಮಾಡಿದ ಮೂರೂ ನಾಲ್ಕು ದಿನದ ನಂತರ ನೆತ್ತಿಯ ಮೇಲೆ ಎಣ್ಣೆಯ ಅಂಶ ಬರೋದು ಸಾಮಾನ್ಯ. ಇಂತಹ ಸಂದರ್ಭಗಳಲ್ಲಿ ತಲೆ ತೊಳೆಯಲು ಸಮಯ ಸಿಗದೇ ಹೊರಗೆ ಹೋಗಬೇಕಾದರೆ, ಆ ಜಿಡ್ಡು ಮುಖದ ಹಾಗೂ ಕೂದಲಿನ ಅಂದವನ್ನು ಹಾಳುಮಾಡುತ್ತದೆ. ಇಂತಹ ಸಂದರ್ಭದಲ್ಲಿ ತಲೆಗೆ ನೀರು ಹಾಕದೆ, ಕೂದಲು ತೊಳೆಯದೆನೇ ಎಣ್ಣೆಯ ಜಿಡ್ಡನ್ನು ಕಡಿಮೆ ಮಾಡುವ ಹಲವು ಕೈಗೆಟುಕುವ ಮಾರ್ಗಗಳು ಇವೆ.
ಬ್ಲೋ ಡ್ರೈ ಉಪಾಯ:
ಕೂದಲನ್ನು ವೇಗವಾಗಿ ಒಣಗಿಸಲು ಮತ್ತು ಜಿಡ್ಡನ್ನು ತಕ್ಷಣ ತೆಗೆದುಹಾಕಲು ಬ್ಲೋ ಡ್ರೈ ಅತ್ಯುತ್ತಮ ಮಾರ್ಗ. ಒಂದು ದುಂಡಗಿನ ಬ್ರಷ್‌ನ್ನು ಉಪಯೋಗಿಸಿ, ಕೂದಲನ್ನು ಬೇರ್ಪಡಿಸಿ ಬ್ಲೋ ಡ್ರೈ ಮಾಡಿದರೆ, ಎಣ್ಣೆಯ ಅಂಶವು ಕಡಿಮೆಯಾಗುತ್ತದೆ. ಕೂದಲಿಗೆ ಸ್ವಲ್ಪ ವಾಲ್ಯೂಮ್ ಕೂಡ ಬರುತ್ತದೆ.
ಡ್ರೈ ಶಾಂಪೂ ಬಳಕೆ:
ಡ್ರೈ ಶಾಂಪೂ ಈ ಕಾಲದ ಅತ್ಯಂತ ಜನಪ್ರಿಯ ಸೌಂದರ್ಯ ವಸ್ತು. ಇದನ್ನು ಸ್ಪ್ರೇ ರೂಪದಲ್ಲಿ ನೆತ್ತಿಯ ಬೇರುಗಳಿಗೆ ಹಚ್ಚಿದರೆ, ಕೆಲವೇ ನಿಮಿಷಗಳಲ್ಲಿ ಜಿಡ್ಡು ದೂರವಾಗುತ್ತದೆ. ಶಾಂಪೂ ಹಾಕಿದ ಬಳಿಕ ಒಂದು ನಿಮಿಷ ಕಾದು, ನಂತರ ಕೂದಲನ್ನು ಬೆರಳುಗಳಿಂದ ಚೆನ್ನಾಗಿ ಒರಸಿಕೊಂಡರೆ ಆಯಿತು.
ಬೇಬಿ ಪೌಡರ್ ಅಥವಾ ಟಾಲ್ಕಮ್ ಪೌಡರ್:
ಒಣ ಶಾಂಪೂ ಇಲ್ಲದಿದ್ದರೆ, ಮನೆಯಲ್ಲಿಯೇ ಇರುವ ಬೇಬಿ ಪೌಡರ್‌ನ್ನು ಉಪಯೋಗಿಸಬಹುದು. ತುಸು ಪೌಡರ್ ಅನ್ನು ನೆತ್ತಿಗೆ ಹಾಕಿ, ಉಜ್ಜಿದರೆ ಅದು ಜಿಡ್ಡನ್ನು ಹೀರಿಕೊಳ್ಳುತ್ತದೆ. ಚರ್ಮಕ್ಕೆ ಸುರಕ್ಷಿತವಾಗಿರುವ ಈ ವಿಧಾನ ಅತಿ ತ್ವರಿತ ಪರಿಹಾರ.
ಅಡಿಗೆ ಸೋಡಾ ಉಪಯೋಗ:
ಬಿಕಿಂಗ್ ಸೋಡಾ ಅಥವಾ ಅಡಿಗೆ ಸೋಡಾ ನೈಸರ್ಗಿಕ ಶೋಧಕವಾಗಿ ಕೆಲಸ ಮಾಡುತ್ತದೆ. ಕೂದಲಿನ ಬೇರುಗಳ ಬಳಿ ಈ ಪುಡಿಯನ್ನು ಸಿಂಪಡಿಸಿ, ಮೃದುವಾದ ಬ್ರಷ್‌ನಿಂದ ಒಜ್ಜಿದರೆ ಜಿಡ್ಡಿನ ಮಟ್ಟವು ಕಡಿಮೆಯಾಗುತ್ತದೆ ಮತ್ತು ತಾತ್ಕಾಲಿಕವಾಗಿ ತಾಜಾತನ ತರುತ್ತದೆ.