ಗರ್ಭಾವಸ್ಥೆಯಲ್ಲಿರುವ ಮಹಿಳೆಯರಿಗೆ ತಿನ್ನೋದು, ಕುಡಿಯೋದು ಎರಡೂ ಬಹುಮುಖ್ಯ. ಸಾಮಾನ್ಯವಾಗಿ ಹಣ್ಣು ಹಾಗೂ ತರಕಾರಿ ಜ್ಯೂಸ್‌ಗಳು ಆರೋಗ್ಯಕರವೆಂದು ಹೇಳಲಾಗುತ್ತದೆ. ಆದರೆ ಎಲ್ಲಾ ಜ್ಯೂಸ್‌ಗಳೂ ಗರ್ಭಿಣಿಯರಿಗೆ ಅನುಕೂಲಕರವಲ್ಲ. ಕೆಲವು ಜ್ಯೂಸ್‌ಗಳು ತಾಯಿ ಮತ್ತು ಹುಟ್ಟುವ ಮಗುವಿಗೆ ಅಪಾಯ ಉಂಟುಮಾಡಬಹುದು.
ಮನೆಯ ಹೊರಗೆ ತಯಾರಿಸಲಾಗುವ ಹಸಿ ತರಕಾರಿ ಜ್ಯೂಸ್‌ಗಳು ಮೊದಲ ಅಪಾಯಕಾರಿಯಾದ ಆಯ್ಕೆ. ಬೇಟ್ರೂಟ್, ಕ್ಯಾರೆಟ್ ಹೀಗೆ ಹಲವಾರು ತರಕಾರಿ ಜ್ಯೂಸ್‌ಗಳು ಆರೋಗ್ಯಕ್ಕೆ ಒಳ್ಳೆಯದಾಗಿದ್ದರೂ, ಸರಿಯಾಗಿ ತೊಳೆಯದಿದೆ ತಯಾರಿಸಿದರೆ, ಅವುಗಳಲ್ಲಿ ಅಪಾಯಕಾರಿ ಬ್ಯಾಕ್ಟೀರಿಯಾಗಳು ಬೆಳೆಯಬಹುದು. ಗರ್ಭಿಣಿಯರ ರೋಗನಿರೋಧಕ ಶಕ್ತಿ ಕಡಿಮೆ ಇರುತ್ತದೆ, ಇದು ಅಪಾಯವನ್ನು ಇನ್ನಷ್ಟು ಹೆಚ್ಚಿಸುತ್ತದೆ.
ಪಾಶ್ಚರೀಕರಿಸದ ಜ್ಯೂಸ್‌ಗಳು ಕೂಡ ತೀವ್ರ ಅಪಾಯಕಾರಿಯಾಗಬಹುದು. ಪೋಷಕಾಂಶಗಳ್ಳಿರುವ ತಾಜಾ ಸೇಬು, ಕಿತ್ತಳೆ ರಸಗಳು ರಸ್ತೆ ಬದಿಯ ಜ್ಯೂಸ್ ಸೆಂಟರ್‌ಗಳಲ್ಲಿ ತಯಾರಾಗುವಾಗ ಇ.ಕೋಲಿ, ಸಾಲ್ಮೊನೆಲ್ಲಾ, ಲಿಸ್ಟೇರಿಯಾ ಬ್ಯಾಕ್ಟೀರಿಯಾಗಳಿಂದ ಸೋಂಕು ಹರಡಬಹುದೆಂದು ತಜ್ಞರು ಎಚ್ಚರಿಸಿದ್ದಾರೆ. ಇದು ಗರ್ಭಪಾತದವರೆಗೆ ತಲುಪಬಹುದಾದ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.
ಇದೇ ರೀತಿಯಲ್ಲಿ, ಪ್ಯಾಕ್ ಮಾಡಿದ ಜ್ಯೂಸ್‌ಗಳು ಹೆಚ್ಚಿನ ಪ್ರಮಾಣದ ಸಕ್ಕರೆ ಹಾಗೂ ಸಂರಕ್ಷಕಗಳನ್ನು ಹೊಂದಿರುತ್ತವೆ. ಇದರ ಸೇವನೆಯು ಗರ್ಭಾವಸ್ಥೆಯ ಮಧುಮೇಹ, ತೂಕದ ಹೆಚ್ಚಳ ಹಾಗೂ ಇತರ ತೊಂದರೆಗಳನ್ನುಂಟುಮಾಡಬಹುದು. ವಿಶೇಷವಾಗಿ ಕೃತಕ ಬಣ್ಣ ಮತ್ತು ಸುವಾಸನೆ ಇದ್ದರೆ, ಅವುಗಳನ್ನು ಸಂಪೂರ್ಣವಾಗಿ ತಪ್ಪಿಸುವುದು ಉತ್ತಮ.
ಅಲೋವೆರಾ, ಪಪ್ಪಾಯಿ ಹಾಗೂ ಅನಾನಸ್ ಜ್ಯೂಸ್‌ಗಳು ಗರ್ಭಾಶಯದ ಸಂಕೋಚನ ಉಂಟುಮಾಡಬಹುದು. ಅನಾನಸ್‌ನಲ್ಲಿ ಇರುವ ಬ್ರೋಮೆಲಿನ್ ಹೆರಿಗೆ ಶುರುವಾಗುವ ಸಾಧ್ಯತೆ ಹೆಚ್ಚಿಸುತ್ತವೆ. ಪಪ್ಪಾಯಿ ಕೂಡ ಮೊದಲ ತಿಂಗಳಲ್ಲಿ ಅಪಾಯಕಾರಿಯಾಗಿ ಪರಿಗಣಿಸಲಾಗಿದೆ.
ಪೋಷಕರಾಗಿ ಮಗುವಿನ ಆರೋಗ್ಯಕ್ಕಾಗಿಯೇ ತಯಾರಿ ನಡೆಯುತ್ತಿರುವುದರಿಂದ, ಮನೆಯಲ್ಲೇ ತಯಾರಿಸಿದ ಪಾಶ್ಚರೀಕರಿಸಿದ ಅಥವಾ ಚೆನ್ನಾಗಿ ತೊಳೆದ ಹಣ್ಣು ಹಾಗೂ ತರಕಾರಿ ಜ್ಯೂಸ್‌ಗಳ ಸೇವನೆಗೆ ಆದ್ಯತೆ ನೀಡಬೇಕು. ಲೇಬಲ್ ಓದುವುದು, ಹೆಚ್ಚುವರಿ ಸಕ್ಕರೆ ಇರುವುದೆ ಎಂಬುದನ್ನು ಗಮನಿಸುವುದು, ತಯಾರಿಸಿದ ತಕ್ಷಣವೇ ಕುಡಿಯುವುದು ಅತ್ಯಂತ ಸುರಕ್ಷಿತ ಮಾರ್ಗವಾಗಿದೆ. (Disclaimer: ಈ ಲೇಖನವು ಸಾರ್ವಜನಿಕ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಯಾಧಾರಿತವಾಗಿದೆ. ಇದು ವೈದ್ಯಕೀಯ ಸಲಹೆಯಲ್ಲ. ಹೆಚ್ಚಿನ ಸಮಸ್ಯೆಗಾಗಿ ತಜ್ಞರನ್ನು ಸಂಪರ್ಕಿಸಿ.)