ಮನೆಯಲ್ಲೇ ರೆಸ್ಟೋರೆಂಟ್ ತರದ ಟೇಸ್ಟ್ ಬೇಕಾ? ಹಾಗಿದ್ರೆ ಒಮ್ಮೆ ಪ್ರಾನ್ಸ್ ಮಸಾಲ ಟ್ರೈ ಮಾಡ್ಲೆ ಬೇಕು. ಇದನ್ನು ಎಲ್ಲರು ಬಾಯಿ ಚಪ್ಪರಿಸಿಕೊಂಡು ತಿಂತಾರೆ ಅನ್ನೋದು ಪಕ್ಕ. ಇದನ್ನು ತಯಾರಿಸಲು ಅತಿ ಹೆಚ್ಚು ಸಾಮಗ್ರಿಗಳ ಅಗತ್ಯವಿಲ್ಲ. ಬಹುಶಃ ನೀವು ಮನೆಯಲ್ಲೇ ಸುಲಭವಾಗಿ ತಯಾರಿಸಬಹುದು.
ಬೇಕಾಗುವ ಪದಾರ್ಥಗಳು
ಸಿಗಡಿ
ಲಿಂಬೆ ರಸ – 3 ಚಮಚ
ರುಚಿಗೆ ತಕ್ಕಷ್ಟು ಉಪ್ಪು
ಬಿಳಿ ಕಾಳುಮೆಣಸು -1 ಚಮಚ
ಮೊಸರು – 2ಕಪ್
ಕೆಂಪು ಮೆಣಸು – 8
ದನಿಯಾ – 2ಚಮಚ
ಮೆಂತೆ ಬೀಜ – 1 ಚಮಚ
ಜೀರಿಗೆ – 1 ಚಮಚ
ಬೆಳ್ಳುಳ್ಳಿ-1
ಹುಣಸೆಹಣ್ಣು ನೀರು – ಸ್ವಲ್ಪ
ತುಪ್ಪ -2 ಚಮಚ
ಅಡುಗೆ ಎಣ್ಣೆ – 2 ಚಮಚ
ಮಾಡುವ ವಿಧಾನ
ಮೊದಲು ಸಿಗಡಿಗೆ ಉಪ್ಪು, ಕಾಳುಮೆಣಸು ಮತ್ತು ಲಿಂಬೆ ರಸವನ್ನು ಚೆನ್ನಾಗಿ ಲೇಪಿಸಿ ಒಂದೆರಡು ನಿಮಿಷ ಬಿಡಿ. ನಂತರ ಬಾಣಲೆಗೆ ಎಣ್ಣೆ ಹಾಕಿ ಈ ಸಿಗಡಿಯನ್ನು 3 ರಿಂದ 4 ನಿಮಿಷಗಳಷ್ಟು ಸ್ವಲ್ಪ ಫ್ರೈ ಮಾಡಿಕೊಳ್ಳಬೇಕು.
ಇದಾದ ನಂತರ ಮಸಾಲೆ ತಯಾರಿಸಲು ಕೆಂಪು ಮೆಣಸು, ಜೀರಿಗೆ, ಮೆಂತೆ ಬೀಜ, ದನಿಯಾ, ಬೆಳ್ಳುಳ್ಳಿ ಮತ್ತು ಹುಣಸೆಹಣ್ಣು ಸೇರಿಸಿ ರುಬ್ಬಿಕೊಳ್ಳಿ. ಈ ರುಬ್ಬಿದ ಮಸಾಲೆಯನ್ನು ಬೇರೆ ಬಾಣಲೆಗೆ ಹಾಕಿ ತುಪ್ಪದಲ್ಲಿ ಹಸಿ ಪರಿಮಳ ಹೋಗುವವರೆಗೆ ಚೆನ್ನಾಗಿ ಬೇಯಿಸಿ.
ನಂತರ ಈ ಮಸಾಲೆಗೆ ಮೊದಲು ಫ್ರೈ ಮಾಡಿದ ಸಿಗಡಿಯನ್ನು ಸೇರಿಸಿ, ಮೊಸರು ಹಾಕಿ ಎಲ್ಲವನ್ನೂ ಚೆನ್ನಾಗಿ ಮಿಶ್ರಮಾಡಿ. ಅಗತ್ಯವಿದ್ದರೆ ಸ್ವಲ್ಪ ಉಪ್ಪು ಸೇರಿಸಬಹುದು. ನಂತರ ಬಾಣಲೆಗೆ ಮುಚ್ಚಳ ಹಾಕಿ ಕಡಿಮೆ ಉರಿಯಲ್ಲಿ 10 ನಿಮಿಷಗಳ ಕಾಲ ಬೇಯಿಸಿದರೆ ರುಚಿಯಾದ ಪ್ರಾನ್ಸ್ ಮಸಾಲ ಸಿದ್ಧ.