ಅವೈಜ್ಞಾನಿಕ ಕಾಮಗಾರಿಯಿಂದ ಹುಟ್ಟು ಹಬ್ಬದ ದಿನದಂದೇ ಮಸಣ ಸೇರಿದ ಯುವಕ

ಹಾಸನ :

ರಾಷ್ಟ್ರೀಯ ಹೆದ್ದಾರಿ ಅವೈಜ್ಞಾನಿಕ ಕಾಮಗಾರಿಗೆ ಹುಟ್ಟುಹಬ್ಬದ ದಿನದಂದೇ ಅಪಘಾತದಲ್ಲಿ ಯುವಕ ದುರ್ಮರಣಗೊಂಡಿರುವ ಧಾರುಣ ಘಟನೆ ಜಿಲ್ಲೆಯ ಹೊಳೆನರಸೀಪುರ ಪಟ್ಟಣದಲ್ಲಿ ನಡೆದಿದೆ.

ಕೆ.ಜೆ.ಧನುಜ್ (25) ಮೃತಪಟ್ಟ ದುರ್ದೈವಿ. ಇಂದು ಧನುಜ್ ಹುಟ್ಟುಹಬ್ಬ ಹಿನ್ನಲೆ ನಿನ್ನೆ ಸ್ನೇಹಿತ ಸುಮಂತ್ ಜೊತೆ ಲಕ್ಕೂರು ಗ್ರಾಮಕ್ಕೆ ಸಂಬಂಧಿಕರಿಗೆ ಸ್ವೀಟ್ ಕೊಡಲು ತೆರಳಿದ್ದರು. ತಡರಾತ್ರಿ 1.30 ರ ಸಮಯದಲ್ಲಿ ಬೈಕ್‌ನಲ್ಲಿ ಬರುತ್ತಿದ್ದ ಧನುಜ್ ಹಾಗೂ ಸುಮಂತ್ ಪಟ್ಟಣದ ಕನಕಭವನ ಬಳಿ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಸ್ಥಳದಲ್ಲಿ ಸೂಚನಾ ಫಲಕ, ಬ್ಯಾರಿಕೇಡ್ ಅಳವಡಿಸದ ಕಾರಣ ಬೈಕ್ ಸಮೇತ ಗುಂಡಿಗೆ ಬಿದ್ದ ಇಬ್ಬರು ಯುವಕರಿಗೆ ಕಬ್ಬಿಣದ ಸರಳುಗಳು ಚುಚ್ಚಿಗೊಂಡಿವೆ. ಗಂಭೀರ ಗಾಯಗೊಂಡು ಧನುಜ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಸುಮಂತ್‌ಗೆ ಗಂಭೀರ ಗಾಯಗಳಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ವಿರುದ್ಧ ಮೃತನ‌ ಪೋಷಕರು ಹಾಗೂ ಸಾರ್ವಜನಿಕರ ಆಕ್ರೋಶ ವ್ಯಕ್ತಪಡಿಸಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ, ಪರಿಶೀಲನೆ ನಡೆಸಿದ್ದಾರೆ. ಹೊಳೆನರಸೀಪುರ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!