ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿ ಒಣ ಬಾಯಿ ಅಥವಾ ಒಣ ನಾಲಿಗೆ (Dry Tongue)ಯಂತಹ ತೊಂದರೆ ಬಹುಪಾಲು ಜನರಲ್ಲಿ ಕಾಣಿಸುತ್ತಿದೆ. ಕೆಲವರಲ್ಲಿ ಮಾತ್ರವಲ್ಲ, ಮಕ್ಕಳು, ವಯಸ್ಕರು ಸೇರಿದಂತೆ ಎಲ್ಲರಿಗೂ ಈ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ. ಮುಖ್ಯವಾಗಿ ದೇಹದಲ್ಲಿ ನೀರಿನ ಕೊರತೆ, ಮಧುಮೇಹ, ತಂಬಾಕು ಸೇವನೆ, ಮದ್ಯಪಾನ, ಕೆಲವು ಔಷಧಿಗಳ ಅತಿಯಾದ ಸೇವನೆಯಿಂದಾಗಿ ಈ ತೊಂದರೆ ಉಂಟಾಗಬಹುದು. ಇದರ ಬಗ್ಗೆ ಕಾಳಜಿ ವಹಿಸದೆ ಬಿಟ್ಟರೆ ದೀರ್ಘಕಾಲದ ಸಮಸ್ಯೆಯಾಗಿ ಪರಿಣಮಿಸಬಹುದು. ಈ ಹಿನ್ನೆಲೆಯಲ್ಲಿ ಈ ತೊಂದರೆಯಿಂದ ಪೀಡಿತರಾದವರು ಮನೆಯಲ್ಲಿಯೇ ಸುಲಭವಾಗಿ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.
ಸಾಕಷ್ಟು ನೀರು ಕುಡಿಯಿರಿ
ಒಣ ಬಾಯಿ ಅಥವಾ ನಾಲಿಗೆಗಿರುವ ಪ್ರಮುಖ ಕಾರಣಗಳಲ್ಲಿ ಮುಖ್ಯವಾದುದು ದೇಹದಲ್ಲಿ ನೀರಿನ ಕೊರತೆ. ಪ್ರತಿದಿನವೂ ಕನಿಷ್ಟ 3 ಲೀಟರ್ ನೀರನ್ನು ಕುಡಿಯಲು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ. ಇದು ದೇಹದಲ್ಲಿ ಇರುವ ನಿಸರ್ಗತ ಲಾಲಾರಸ ಉತ್ಪಾದನೆಯನ್ನು ಸಹ ಸಹಜವಾಗಿಸುತ್ತದೆ.
ನಾಲಿಗೆ ಮತ್ತು ಬಾಯಿ ಸ್ವಚ್ಛವಿರಲಿ
ಒಣ ಬಾಯಿಯ ಮತ್ತೊಂದು ಪ್ರಮುಖ ಕಾರಣ ಬ್ಯಾಕ್ಟೀರಿಯಾ ಉತ್ಪತ್ತಿ. ಪ್ರತಿದಿನ ನಿಮ್ಮ ಹಲ್ಲುಗಳನ್ನು ಸರಿಯಾಗಿ ಬ್ರಷ್ ಮಾಡಿ, ನಾಲಿಗೆಗೆ ಟಂಗ್ ಕ್ಲೀನರ್ ಬಳಸಿ ಶುದ್ಧಗೊಳಿಸುವುದು ಅನಿವಾರ್ಯ. ಈ ಮೂಲಕ ಸೋಂಕುಗಳನ್ನು ತಡೆಗಟ್ಟಬಹುದು.
ಶುಂಠಿಯು ಲಾಲಾರಸ ಉತ್ಪಾದನೆಗೆ ಸಹಾಯಕ
ಶುಂಠಿಯ ತುಂಡನ್ನು ಬಾಯಿಯಲ್ಲಿ ಇಟ್ಟುಕೊಳ್ಳುವುದು ಲಾಲಾರಸ ಉತ್ಪತ್ತಿಗೆ ಉತ್ತೇಜನ ನೀಡುತ್ತದೆ. ಇದು ನೈಸರ್ಗಿಕವಾಗಿ ಬಾಯಿಯನ್ನು ತಂಪಾಗಿಸು ಹಾಗು ಒಣತನವನ್ನು ಕಡಿಮೆ ಮಾಡುತ್ತದೆ.
ದುಶ್ಚಟಗಳನ್ನು ಬಿಟ್ಟುಬಿಡಿ
ಮದ್ಯ ಸೇವನೆ, ತಂಬಾಕು ಸೇವನೆಗಳು ದೀರ್ಘಕಾಲದಲ್ಲಿ ಬಾಯಿಯ ಲಾಲಾರಸ ಗ್ರಂಥಿಗಳಿಗೆ ಹಾನಿ ಉಂಟುಮಾಡುತ್ತವೆ. ಈ ಚಟಗಳನ್ನು ನಿಲ್ಲಿಸುವುದರಿಂದ ಒಣ ಬಾಯಿ ಸಮಸ್ಯೆಯನ್ನು ನಿಯಂತ್ರಣದಲ್ಲಿಡಲು ಸಹಕಾರಿಯಾಗುತ್ತದೆ.
ಎಳನೀರು ಮತ್ತು ಹಣ್ಣಿನ ರಸ ಸೇವನೆ
ಎಳನೀರು, ನೈಸರ್ಗಿಕ ಹಣ್ಣಿನ ಜ್ಯೂಸ್ ಸೇವನೆಯು ದೇಹದಲ್ಲಿ ತಂಪು ತರಿಸುತ್ತದೆ, ಹೈಡ್ರೇಶನ್ ಸಿಗಲು ಸಹಕಾರಿಯಾಗುತ್ತದೆ. ಇದರಿಂದ ಒಣ ಬಾಯಿಯ ಸಮಸ್ಯೆಗೆ ನೈಸರ್ಗಿಕ ಪರಿಹಾರ ಸಿಗಬಹುದು.
ಮೆಡಿಕಲ್ ಸಲಹೆ ಅನಿವಾರ್ಯ:
ಈ ಮನೆಮದ್ದುಗಳ ನಂತರವೂ ಸಮಸ್ಯೆ ಮುಂದುವರಿದರೆ, ತಕ್ಷಣವೇ ನಿಮ್ಮ ಸ್ಥಳೀಯ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆ ಪಡೆಯುವುದು ಅತ್ಯವಶ್ಯಕ. (Disclaimer: ಈ ಲೇಖನವು ಸಾರ್ವಜನಿಕ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಯಾಧಾರಿತವಾಗಿದೆ. ಇದು ವೈದ್ಯಕೀಯ ಸಲಹೆಯಲ್ಲ. ಹೆಚ್ಚಿನ ಮಾಹಿತಿಗಾಗಿ ತಜ್ಞರನ್ನು ಸಂಪರ್ಕಿಸಿ.)