ಹೊಸದಿಗಂತ ವರದಿ,ವಿಜಯಪುರ:
ಪ್ರಪಂಚದಲ್ಲಿ ಎಲ್ಲ ರಾಜ್ಯದ ನಾಯಕರು ಏನೇನು ಕೊಡುಗೆ ಕೊಟ್ಟಿದ್ದಾರಲ್ಲ, ಅದೆಲ್ಲಕ್ಕೂ ಹೆಚ್ಚು ಕೊಡುಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕೊಟ್ಟಿದ್ದಾರೆ. ದೇಶದಲ್ಲಿ, ಪ್ರಪಂಚಕ್ಕೆ ಹೆಚ್ಚು ಕೊಡುಗೆ ಕೊಟ್ಟಿದ್ದು ಸಿದ್ದರಾಮಯ್ಯ ಎಂದು ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ವ್ಯಂಗ್ಯವಾಡಿದರು.
ನಾಲ್ವಡಿ ಕೃಷ್ಣರಾಜ ಒಡೆಯರ್ ಗಿಂತಲೂ ಸಿದ್ದರಾಮಯ್ಯ ಅಭಿವೃದ್ಧಿ ಮಾಡಿದ್ದಾರೆ, ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ ನಗರದಲ್ಲಿ ಪ್ರತಿಕ್ರಿಯಿಸಿದ ಅವರು, ಯತೀಂದ್ರಗೆ ನಾ ಹೇಳುವೆ ಪ್ರಪಂಚಕ್ಕೆ ಹೆಚ್ಚು ಕೊಡುಗೆ ಕೊಟ್ಟಿದ್ದು ಸಿದ್ದರಾಮಯ್ಯ ಎಂದರು.
ಕಾಂತರಾಜ್ ವರದಿ ಬಗ್ಗೆ ಹೇಳಲಿ ನೋಡೋಣ ಯತೀಂದ್ರ. ನಾಲ್ವಡಿ ಕೃಷ್ಣರಾಜ್ ಒಡೆಯರ್ ಅವರ ಹೆಸರು ಹೇಳುವ ಯೋಗ್ಯತೆ ಆದರೂ ಅವರಿಗೆ ಇದೆಯಾ ?, ಆಧುನಿಕ ಭಗೀರಥ ಅವರು, ಅಂತಹವರ ಬಗ್ಗೆ ಕಂಪೇರ್ ಮಾಡುತ್ತಿರಲ್ಲ ಎಂದು ಹರಿಹಾಯ್ದರು.
ಒಂದಿಷ್ಟು ದಿನ ದೇವರಾಜ್ ಅರಸು ಅವರೊಂದಿಗೆ ಕಂಪೇರ ಮಾಡಿಕೊಂಡರು. ಅವರ ಬಾಲಂಗೋಚಿ ಆಂಜನೇಯ ಹೇಳಿದರೂ ದೇವರಾಜ್ ಅರಸರಿಗಿಂತಲೂ ಜಾಸ್ತಿ ಸಿದ್ದರಾಮಯ್ಯ ಎಂದು. ಇವತ್ತು ಯಂತೀಂದ್ರ ಹೇಳುತ್ತಾನೆ, ಅದರಲ್ಲಿ ಅರ್ಥವೇ ಇಲ್ಲ ಎಂದು ದೂರಿದರು.