ಸುರ್ಜೇವಾಲಾ ಅಧಿಕಾರಿಗಳ ಜೊತೆಗೆ ಸಭೆ ನಡೆಸಿಲ್ಲ: ಸಚಿವ ಎಂ.ಬಿ. ಪಾಟೀಲ್

ಹೊಸದಿಗಂತ ವರದಿ,ವಿಜಯಪುರ:

ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್‌ಸಿಂಗ್ ಸುರ್ಜೇವಾಲಾ ಅವರು ಅಧಿಕಾರಿಗಳ ಜೊತೆಗೆ ಸಭೆ ಮಾಡಿಲ್ಲ. ಪಕ್ಷದ ಶಾಸಕರ, ಸಚಿವರ ಜೊತೆಗೆ ಮಾತನಾಡಿದ್ದಾರೆ. ಇದರಲ್ಲಿ ತಪ್ಪೇನು ? ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಹೇಳಿದರು.

ಅಧಿಕಾರಿಗಳ ಜೊತೆ ಸುರ್ಜೇವಾಲಾ ಸಭೆ ಮಾಡಿರುವ ಆರೋಪದ ಕುರಿತು ನಗರದಲ್ಲಿ ಪ್ರತಿಕ್ರಿಯಿಸಿ, ಬಿಜೆಪಿ ಮುಖಂಡರು ಬಂದಾಗ ಅವರು ಸಭೆ ಮಾಡುತ್ತಾರೆ ಅದು ಸಾಮಾನ್ಯ ಅಲ್ಲವೇ ಎಂದರು.

ರಾಜ್ಯದಲ್ಲಿ ರಸಗೊಬ್ಬರ ಕೊರತೆ ವಿಚಾರಕ್ಕೆ, ಈ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪತ್ರ ಬರೆದಿದ್ದಾರೆ. ಜಿಲ್ಲೆಯಲ್ಲಿ ಪೂರೈಕೆಗಿಂತ ಹೆಚ್ಚಿನ ಬೇಡಿಕೆ ಇಲ್ಲೂ ಕೇಳಿ ಬಂದಿದೆ. ಇದು ಯಾರ ವೈಫಲ್ಯ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹೋಗಿ ಕೇಳಬೇಕಲ್ಲ. ರಸಗೊಬ್ಬರ ಕೊಡಲು ನರೇಂದ್ರ ಮೋದಿ ಅವರಿಗೆ ಆಗುತ್ತಿಲ್ಲ. ಕಾಳಸಂತೆಯಲ್ಲಿ ಮಾರಾಟ, ಹೆಚ್ಚಿನ ಬೆಲೆ ತಗೆದುಕೊಂಡರೆ ಅಂತವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.

ನಾಲ್ವಡಿ ಕೃಷ್ಣರಾಜ್ ಒಡೆಯರ್ ಅವರಿಗಿಂತ ಸಿದ್ದರಾಮಯ್ಯ ಅಭಿವೃದ್ಧಿ ಮಾಡಿದ್ದಾರೆ ಎಂಬ ಯತೀಂದ್ರ ಹೇಳಿಕೆ ವಿಚಾರದ ಬಗ್ಗೆ, ನಾಲ್ವಡಿ ಕೃಷ್ಣರಾಜ್ ಒಡೆಯರ್ ಅವರು ಹಳೇ ಮೈಸೂರು ಭಾಗದಲ್ಲಿ ತಮ್ಮದೇ ಆದ ಕೊಡುಗೆ ಕೊಟ್ಟಿದ್ದಾರೆ. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೈಸೂರು ಭಾಗ ಅಷ್ಟೇ ಅಲ್ಲ ರಾಜ್ಯಕ್ಕೆ ತಮ್ಮದೇ ಆದ ಕೊಡುಗೆ ಕೊಟ್ಟಿದ್ದಾರೆ. ತುಬಚಿ ಬಬಲೇಶ್ವರ 3600 ಕೋಟಿ ಕೊಟ್ಟಿದ್ದಾರೆ. ಹಲವು ಗ್ಯಾರಂಟಿ ಕೊಟ್ಟು ತಮ್ಮದೇ ಆದ ಕೊಡುಗೆ ನೀಡಿದ್ದಾರೆ. 2013- 2018 ಈಗ ಮತ್ತೆ ಅವರು ಸೇವೆ ಮಾಡಿದ್ದಾರೆ. ನಾಲ್ವಡಿ ಕೃಷ್ಣರಾಜ್ ಒಡೆಯರ್ ಅವರು ದೊಡ್ಡ ಸೇವೆ ಮಾಡಿದ್ದಾರೆ, ಸಿದ್ದರಾಮಯ್ಯನವರು ಸಹಿತ ದೊಡ್ಡ ಸೇವೆ ಮಾಡಿದ್ದಾರೆ ಎಂದರು.

ನಕಲಿ ಮತದಾನವಾಗಿದೆ ಎಂದು ರಾಹುಲ್ ಗಾಂಧಿ ಆರೋಪಕ್ಕೆ, ಅವರಿಗೆ ಈ ವಿಚಾರದಲ್ಲಿ ಮಾಹಿತಿ ಇರಬೇಕು. ಅದಕ್ಕೆ ಅವರು ಮಾತನಾಡಿರುತ್ತಾರೆ. ಇದನ್ನು ಬಹಿರಂಗಪಡಿಸುವುದಾಗಿ ಹೇಳಿದ್ದಾರೆ, ಕಾದು ನೋಡಿ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!