ಮಹಿಳಾ ಚೆಸ್ ವಿಶ್ವಕಪ್ ಫೈನಲ್‌: ಕೊನೆರು ಹಂಪಿ-ದಿವ್ಯಾ ದೇಶ್‌ಮುಖ್ ನಡುವಿನ ಮೊದಲ ಗೇಮ್ ಡ್ರಾ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಫಿಡೆ ಮಹಿಳಾ ಚೆಸ್ ವಿಶ್ವಕಪ್‌ನ ಫೈನಲ್‌ನಲ್ಲಿ ಭಾರತದಿಂದ ಭಾಗವಹಿಸಿರುವ ಗ್ರ್ಯಾಂಡ್‌ಮಾಸ್ಟರ್ ಕೊನೆರು ಹಂಪಿ ಹಾಗೂ ಯುವ ಚೆಸ್ ತಾರೆ ದಿವ್ಯಾ ದೇಶ್‌ಮುಖ್ ನಡುವಿನ ಮೊದಲ ಗೇಮ್ ಶನಿವಾರ ಡ್ರಾ ಆಗಿದೆ. ಬಿಳಿ ಕಾಯಿಗಳೊಂದಿಗೆ ದಿವ್ಯಾ ಆರಂಭಿಸಿದ ಈ ಪಂದ್ಯ 41 ನಡೆಗಳ ನಂತರ ಸಮಪಾಲಾಯಿತು. ಆರಂಭದಲ್ಲಿ ದಿವ್ಯಾ ತೀವ್ರ ದಾಳಿಯಿಂದ ಮೇಲುಗೈ ಸಾಧಿಸಿದರೂ, ಹಂಪಿ ಕಠಿಣ ಪ್ರತಿರೋಧ ತೋರಿದ ಹಿನ್ನೆಲೆಯಲ್ಲಿ ಪಂದ್ಯವು ನಿರ್ಣಾಯಕಕ್ಕೆ ಬರಲಿಲ್ಲ.

ಫೈನಲ್‌ನ ಎರಡನೇ ಗೇಮ್ ಭಾನುವಾರ ನಡೆಯಲಿದ್ದು, ಅದರಲ್ಲಿ ಹಂಪಿ ಬಿಳಿ ಕಾಯಿಗಳೊಂದಿಗೆ ಆಡಲಿದ್ದಾರೆ. ಈ ಟೂರ್ನಿಯೊಳಗೆ ಹಂಪಿ ಬಿಳಿ ಕಾಯಿಗಳೊಂದಿಗೆ ಆಡಿದ ಎಲ್ಲ ಪಂದ್ಯಗಳಲ್ಲಿ ಅಜೇಯರಾಗಿದ್ದರು. ಭಾನುವಾರದ ಪಂದ್ಯವೂ ಡ್ರಾ ಆದರೆ ಸೋಮವಾರ ಟೈಬ್ರೇಕರ್ ನಿಗದಿಯಾಗಲಿದೆ. ಇದರಲ್ಲಿ ಮೊದಲಿಗೆ 10 ನಿಮಿಷಗಳ ಎರಡು ರ್ಯಾಪಿಡ್ ಗೇಮ್, ನಂತರ 5 ನಿಮಿಷಗಳ ಎರಡು ಬ್ಲಿಟ್ಜ್ ಗೇಮ್ ಹಾಗೂ ಕೊನೆಗೆ ಫಲಿತಾಂಶ ಬರುವವರೆಗೂ 3+2 ಬ್ಲಿಟ್ಜ್ ಪಂದ್ಯಗಳು ನಡೆಯುತ್ತವೆ.

ಈ ಬಾರಿಯ ವಿಶ್ವಕಪ್ ಫೈನಲ್‌ ವಿಶೇಷವಾಗಿ ಗಮನ ಸೆಳೆದಿದ್ದು, ಇದೇ ಮೊದಲ ಬಾರಿಗೆ ಭಾರತದ ಇಬ್ಬರು ಮಹಿಳಾ ಆಟಗಾರ್ತಿಯರು ಅಂತಿಮ ಹಂತ ತಲುಪಿದ್ದಾರೆ ಎಂಬುದು ಗೌರವದ ವಿಷಯವಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!