ಸೌಂಡ್‌ ಮಾಡುತ್ತಲೇ ಕೋಟಿ ಕಲೆಕ್ಷನ್‌ ಮಾಡ್ತಿರುವ ಸು ಫ್ರಮ್‌ ಸೋ ಸಿನಿಮಾ ಬಗ್ಗೆ ಶೆಟ್ರು ಹೇಳಿದ್ದೇನು?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಕನ್ನಡ ಚಿತ್ರರಂಗದ ಹೊಸ ಪ್ರಯತ್ನ ಸು ಫ್ರಮ್‌ ಸೋ ಸಿನಿಮಾಗೆ ಸಿಕ್ಕಾಪಟ್ಟೆ ಯಶಸ್ಸು ಸಿಕ್ಕಿದ್ದು, ಕೋಟಿ ಕೋಟಿ ಕಮಾಯಿ ಮಾಡ್ತಿದೆ. ಈ ಸಿನಿಮಾ ನೋಡಿ ರಿಷಭ್‌ ಶೆಟ್ಟಿ ಕೂಡ ಫಿದಾ ಆಗಿದ್ದು, ಸಿನಿಮಾ ಬಗ್ಗೆ ಮಾತನಾಡಿದ್ದಾರೆ.

ನಮಸ್ಕಾರ ಕನ್ನಡ ಸಿನಿಪ್ರಿಯರೇ, ನೀವೆಲ್ಲರೂ ‘ಸು ಫ್ರಮ್ ಸೋ’ ಚಿತ್ರಕ್ಕೆ ನೀಡಿರುವ ಅದ್ಭುತ ಬೆಂಬಲ ಮತ್ತು ಪ್ರೀತಿಗೆ ಹೃತ್ತೂರ್ವಕ ಧನ್ಯವಾದಗಳು. ಈ ಸಿನಿಮಾ ನಿಜಕ್ಕೂ ಮನಸ್ಸಿಗೆ ಖುಷಿ ನೀಡಿದೆ. ರಚಿಸಿ ನಿರ್ದೇಶನ ಮಾಡಿದ ಜೆ.ಪಿ. ತುಮಿನಾಡ ಅವರಿಗೆ ಚಿತ್ರರಂಗಕ್ಕೆ ಸ್ವಾಗತ! ಅವರ ಚೊಚ್ಚಲ ಪ್ರಯತ್ನ ಅತ್ಯಂತ ಯಶಸ್ವಿಯಾಗಿದೆ. ನಿರ್ಮಾಪಕರಾದ ರಾಜ್ ಬಿ. ಶೆಟ್ಟಿ, ರವಿ ರೈ ಮತ್ತು ಶಶಿಧರ್ ಶೆಟ್ಟಿ ಬಾರೋಡ ಅವರ ಈ ಹೊಸ ಪ್ರಯತ್ನಕ್ಕೆ ನನ್ನ ಶುಭಾಶಯಗಳು. ಅವರ ಪ್ರೋತ್ಸಾಹದಿಂದ ಇಂತಹ ಉತ್ತಮ ಚಿತ್ರಗಳು ಹೊರಬರುತ್ತಿವೆ’ ಎಂದಿದ್ದಾರೆ ರಿಷಬ್.

ನಟರಾದ ಶನಿಲ್ ಗೌತಮ್, ಜೆ.ಪಿ. ತುಮಿನಾಡ್, ಸಂಧ್ಯಾ ಅರಕೆರೆ, ಪ್ರಕಾಶ್ ತುಮಿನಾಡ್, ದೀಪಕ್ ರೈ ಪನಾಜೆ, ಪುಷ್ಪರಾಜ್‌ ಬೋಳಾ‌ರ್, ಮೈಮ್ ರಾಮದಾಸ್‌ ಸೇರಿದಂತೆ ಪ್ರತಿಯೊಬ್ಬ ಕಲಾವಿದನ ಅಭಿನಯವೂ ಗಮನ ಸೆಳೆಯುತ್ತದೆ. ಎಲ್ಲರೂ ತಮ್ಮ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಒಳ್ಳೆಯ ಮನರಂಜನಾತ್ಮಕ ಚಿತ್ರವನ್ನು ನೀಡಿದ ಇಡೀ ‘ಸು ಫ್ರಮ್ ಸೋ’ ತಂಡಕ್ಕೆ ನನ್ನ ಅಭಿನಂದನೆಗಳು. ಈ ಚಿತ್ರವು ನನ್ನನ್ನು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಾಸರಗೋಡು ದಿನಗಳಿಗೆ ಕರೆದುಕೊಂಡು ಹೋಯಿತು. ಆ ಚಿತ್ರದಲ್ಲಿ ನಟಿಸಿದ್ದ ಅನೇಕ ಕಲಾವಿದರು ‘ಸು ಫ್ರಮ್ ಸೋ’ ಚಿತ್ರದಲ್ಲಿಯೂ ಇರುವುದು ಹಳೆಯ ನೆನಪುಗಳನ್ನು ಮರುಕಳಿಸುವಂತೆ ಮಾಡಿತು’ ಎಂದಿದ್ದಾರೆ ರಿಷಬ್

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!