ಇತ್ತೀಚಿನ ದಿನಗಳಲ್ಲಿ Insomnia ಸಮಸ್ಯೆ ಅನೇಕರನ್ನು ಕಾಡುತ್ತಿದೆ. ದಿನನಿತ್ಯದ ಒತ್ತಡ, ಹೊರಗಿನ ಆಹಾರ ಸೇವನೆ ಮತ್ತು ಕೆಟ್ಟ ಜೀವನಶೈಲಿ ನಿದ್ರೆಗೆ ಅಡ್ಡಿಯಾಗುತ್ತಿದೆ. ವೈದ್ಯರು ಸೂಚಿಸುವಂತೆ ನಿದ್ರೆ ಆರೋಗ್ಯದ ಮಹತ್ವದ ಅಂಶವಾಗಿದೆ. ಆ ಮೂಲಕ, ನಿದ್ರೆ ಸುಲಭವಾಗಿ ಬರಲು ಆಹಾರವನ್ನೇ ಸಹಾಯಕರವಾಗಿ ಬಳಸಬಹುದು.
ಬಾದಾಮಿ ಸೇವನೆ
ಬಾದಾಮಿಗಳಲ್ಲಿ ಮೆಲಟೋನಿನ್ ಎಂಬ ನೈಸರ್ಗಿಕ ಸಂಯುಕ್ತವಿದೆ. ಇದು ದೇಹದ ನಿದ್ರೆ ಚಕ್ರವನ್ನು ನಿಯಂತ್ರಿಸುತ್ತದೆ. ದಿನದ ಕೊನೆಗೆ ಬಾದಾಮಿ ತಿನ್ನುವುದು ದೇಹವನ್ನು ನಿದ್ರೆಗೆ ತಯಾರು ಮಾಡುತ್ತದೆ. ಇದರಲ್ಲಿರುವ ಮ್ಯಾಗ್ನೀಶಿಯಮ್ ಕೂಡ ನರವ್ಯವಸ್ಥೆಯ ಶಮನಕ್ಕೆ ಸಹಕಾರಿ.
ಕ್ಯಾಮೊಮೈಲ್ ಟೀ ನಿಂದ ಮನಸ್ಸಿಗೆ ಶಾಂತಿ:
ರಾತ್ರಿ ಮಲಗುವ ಮೊದಲು ಒಂದು ಕಪ್ ಕ್ಯಾಮೊಮೈಲ್ ಟೀ ಸೇವನೆಯಿಂದ ದೇಹ ಹಾಗೂ ಮನಸ್ಸಿಗೆ ತಂಪು ಮತ್ತು ವಿಶ್ರಾಂತಿ ಸಿಗುತ್ತದೆ. ಇದರಲ್ಲಿರುವ ಆಂಟಿಆಕ್ಸಿಡೆಂಟ್ಸ್ ಆಳವಾದ ನಿದ್ರೆಗೆ ನೆರವಾಗುತ್ತವೆ.
ಕಿವಿ ಹಣ್ಣು ನಿದ್ರೆಗೆ ಪೋಷಕ:
ಕಿವಿ ಹಣ್ಣು ಕಡಿಮೆ ಕ್ಯಾಲೊರಿಯ ಹಣ್ಣಾಗಿದ್ದು, ಜೀರ್ಣಕ್ರಿಯೆ ಸುಗಮಗೊಳಿಸುವಲ್ಲಿಯೂ ಸಹಾಯ ಮಾಡುತ್ತದೆ. ಕಿವಿಯಲ್ಲಿ ಸೆರೋಟೋನಿನ್ ಹಾಗೂ ಫೋಲೇಟ್ ಇದ್ದು, ಈ ಎರಡೂ ನಿದ್ರೆಯ ಗುಣಮಟ್ಟ ಸುಧಾರಿಸಲು ಪೂರಕವಾಗಿವೆ. ಮಲಗುವ ಒಂದು ಗಂಟೆ ಮುಂಚಿತವಾಗಿ ಕಿವಿ ಸೇವಿಸಿದರೆ ಹೆಚ್ಚು ಪರಿಣಾಮಕಾರಿ.
ಮೀನಿನ ಸೇವನೆಯಿಂದ ಶರೀರಕ್ಕೆ ವಿಶ್ರಾಂತಿ:
ಸಾಲ್ಮನ್, ಟ್ಯೂನಾ ಮಾದರಿಯ ಒಮೆಗಾ-3 ಮತ್ತು ವಿಟಮಿನ್ ಡಿ ಹೊಂದಿರುವ ಮೀನುಗಳು ನಿದ್ರೆ ಸಂಯೋಜನೆಗೆ ಅಗತ್ಯವಿರುವ ಮೆಲಟೋನಿನ್ ಮಟ್ಟವನ್ನು ಹೆಚ್ಚಿಸುತ್ತವೆ.
ವಾಲ್‌ನಟ್‌ಗಳೊಂದಿಗೆ ನಿದ್ರೆ ಸುಲಭ:
ವಾಲ್‌ನಟ್‌ನಲ್ಲಿ ಸಹ ಮೆಲಟೋನಿನ್, ಓಮೆಗಾ-3 ಹಾಗೂ ಕಬ್ಬಿಣ ಇದ್ದು, ಇವು ನಿದ್ರೆಗೆ ಉತ್ತಮ. ದಿನನಿತ್ಯದ ಡಯಟ್‌ನಲ್ಲಿ ಕೆಲವು ವಾಲ್‌ನಟ್ ಸೇರಿಸಿದರೆ, ನಿದ್ರೆಯ ಚಕ್ರ ಸುಧಾರಿಸಬಹುದು.
ಆದರೆ ಈ ಎಲ್ಲಾ ಆಹಾರಗಳೊಂದಿಗೆ ಸಮತೋಲನದ ಆಹಾರ ಹಾಗೂ ನಿತ್ಯ ವ್ಯಾಯಾಮ ಅನುಸರಿಸಿದರೆ ಮಾತ್ರ ನಿದ್ರೆ ಸುಧಾರಣೆ ಸಾಧ್ಯ. ದಿನದ ಕೊನೆಯ ಹೊತ್ತಿನಲ್ಲಿ ಲಘು ಆಹಾರ, ಕೆಫಿನ್ ತಪ್ಪಿಸುವುದು, ಯೋಗ ಅಥವಾ ಧ್ಯಾನವು ಕೂಡ ನಿದ್ರೆಗೆ ನೆರವಾಗಬಹುದು.