ನಾಳೆ ನಾಗರ ಪಂಚಮಿ ಹಬ್ಬ ಅರಶಿನದ ಎಲೆಯ ಗಟ್ಟಿ ಇದ್ದೆ ಇದೆ ಅಲ್ವ. ಅದ್ರ ಜೊತೆಗೆ ಏನಾದ್ರು ಸ್ಪೆಷಲ್ ಸ್ವೀಟ್ ಬೇಕು ಅಂದ್ರೆ ಈ ಸಿಂಪಲ್ ಬಾದಾಮಿ ಹಲ್ವಾ ಟ್ರೈ ಮಾಡಿ.
ಬೇಕಾಗುವ ಸಮಗ್ರುಗಳು:
ಬಾದಾಮಿ – 1 ಕಪ್ (ರಾತ್ರಿ ನೆನೆಸಿಟ್ಟಿರಬೇಕು)
ಸಕ್ಕರೆ – 1 ಕಪ್
ಹಾಲು – 1 ಕಪ್
ತುಪ್ಪ – ಅರ್ಧ ಕಪ್
ಕೇಸರಿ – ಕೆಲವು ಎಸಳು (ಹಾಲಿನಲ್ಲಿ ನೆನೆಹಾಕಿದ್ದು)
ಮಾಡುವ ವಿಧಾನ:
ಮೊದಲಿಗೆ ನೆನೆಸಿಟ್ಟಿರುವ ಬಾದಾಮಿಗೆ ಸ್ವಲ್ಪ ಹಾಲು ಸೇರಿಸಿ ಮೃದುವಾಗಿ ರುಬ್ಬಿಕೊಂಡು ಪೇಸ್ಟ್ ತಯಾರಿಸಬೇಕು.
ಈಗ ಗಟ್ಟಿ ತಳದ ಬಾಣಲೆಗೆ ತುಪ್ಪ ಹಾಕಿ ಬಿಸಿ ಮಾಡಿ, ನಂತರ ಸಕ್ಕರೆ ಸೇರಿಸಿ ಕರಗುವವರೆಗೆ ಕಮ್ಮಿ ಉರಿಯಲ್ಲಿ ಮಿಶ್ರಣ ಮಾಡಬೇಕು. ಇದಕ್ಕೆ ಬಾದಾಮಿ ಪೇಸ್ಟ್ ಸೇರಿಸಿ, ಸತತವಾಗಿ ತಿರುಗಿಸುತ್ತಾ ಬೇಯಿಸುತ್ತಿರಬೇಕು. ಮಿಶ್ರಣವು ದಪ್ಪವಾಗುತ್ತಾ ಬರುವಾಗ, ಕೇಸರಿ ಹಾಗೂ ಬಾಕಿ ಇರುವ ತುಪ್ಪವನ್ನು ಕೂಡ ಸೇರಿಸಬೇಕು.
ಹದ ಬರಲು ಶುರುವಾದ ನಂತರ ಹಲ್ವಾ ಬಾಣಲೆಗೆ ಅಂಟಿಕೊಳ್ಳದೇ ಬೇಯತೊಡಗುತ್ತದೆ. ಆ ಸಮಯದಲ್ಲಿ ಗ್ಯಾಸ್ ಆಫ್ ಮಾಡಿ, ತಣ್ಣಗಾದ ಮೇಲೆ ಬಾದಾಮಿ ಹಲ್ವಾವನ್ನು ಪ್ಲೇಟ್‌ಗೆ ಹಾಕಿ ಸವಿಯಿರಿ.