ಧರ್ಮಸ್ಥಳ ಶವ ಹೂತಿಟ್ಟ ಕೇಸ್: ಸುರಿಯುವ ಮಳೆ ನಡುವೆ ಸಮಾಧಿ ಅಗೆಯುವ ಪ್ರಕ್ರಿಯೆ ಆರಂಭ

ಹೊಸದಿಗಂತ ವರದಿ ಮಂಗಳೂರು: 

ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶವ ಹೂತಿಟ್ಟ ಪ್ರಕರಣ ಮತ್ತಷ್ಟು ಕುತೂಹಲ ಹೆಚ್ಚಿಸಿದ್ದು, ಇಂದು ಸಮಾಧಿ ಅಗೆಯುವ ಕಾರ್ಯ ಆರಂಭವಾಗಿದೆ.

ದೂರುದಾರನ ಸಮ್ಮುಖದಲ್ಲಿ ಎಸ್ ಐಟಿ ಅಧಿಕಾರಿಗಳ ತಂಡ ಇಂದು ಆತ ಗುರುತಿಸಿದ ಮೊದಲ ಸ್ಥಳವನ್ನು ಅಗೆತ ನಡೆಸಿದೆ. ಈ ಸ್ಥಳದಲ್ಲಿ ಮಧ್ಯಾಹ್ನದ ಊಟದ ವಿರಾಮ‌ ತನಕ ಯಾವುದೇ ಕುರುಹು ಸಿಕ್ಕಿಲ್ಲ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

ಆರಂಭದಲ್ಲಿ ಸುಮಾರು ನಾಲ್ಕು ಅಡಿ ಆಳ ಹಾಗೂ ಆರು ಅಡಿ ಉದ್ದ ಅಗೆಯಲಾಗಿತ್ತು. ಇಲ್ಲಿ ನೀರಿನ ಒರತೆ ಕಂಡುಬಂದಿದ್ದು, ಜೊತೆಗೆ ಕುರುಹು ಪತ್ತೆಯಾಗದ ಹಿನ್ನೆಲೆಯಲ್ಲಿ ಜೆಸಿಬಿ ಯಂತ್ರ ಬಳಸಿ ಇನ್ನಷ್ಟು ಅಗೆಯಲಾಗುತ್ತಿದೆ.

ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!