ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಕೇಸ್ನಲ್ಲಿ ಮುಂಬೈನ ಮ್ಯಾಜಿಸ್ಟ್ರೇಟ್ ಕೋರ್ಟ್, ನಟಿ ರಿಹಾ ಚಕ್ರವರ್ತಿಗೆ ನೊಟೀಸ್ ನೀಡಿದೆ. ಸಿಬಿಐ ಸಲ್ಲಿಸಿರುವ ಸುಶಾಂತ್ ಸಿಂಗ್ ಪ್ರಕರಣದ ಮುಕ್ತಾಯದ ವರದಿಯ ಬಗ್ಗೆ ಪ್ರತಿಕ್ರಿಯೆ ಸಲ್ಲಿಸುವಂತೆ ರಿಹಾ ಚಕ್ರವರ್ತಿಗೆ ಮ್ಯಾಜಿಸ್ಟ್ರೇಟ್ ಕೋರ್ಟ್ ಸೂಚಿಸಿದೆ.
ಮ್ಯಾಜಿಸ್ಟ್ರೇಟ್ ಆರ್.ಡಿ.ಚವ್ಹಾಣ್, ಒರಿಜಿನಲ್ ಮಾಹಿತಿದಾರರು, ಸಂತ್ರಸ್ತರು, ತೊಂದರೆಗೊಳಗಾದ ವ್ಯಕ್ತಿಗೆ ನೊಟೀಸ್ ಜಾರಿ ಮಾಡಲಾಗುತ್ತಿದೆ ಎಂದು ನೊಟೀಸ್ ಜಾರಿ ಮಾಡಿದ್ದರು. ಬಳಿಕ ರಿಹಾ ಚಕ್ರವರ್ತಿಗೆ ನೊಟೀಸ್ ತಲುಪಿರುವುದು ಖಚಿತ ಆಗುವವರೆಗೂ ವಿಚಾರಣೆ ಮುಂದೂಡುವುದಾಗಿ ಕೋರ್ಟ್ ಹೇಳಿದೆ. ಆಗಸ್ಟ್ 12ರೊಳಗೆ ನೊಟೀಸ್ ಗೆ ಉತ್ತರಿಸುವಂತೆ ರಿಹಾ ಚಕ್ರವರ್ತಿಗೆ ಮ್ಯಾಜಿಸ್ಟ್ರೇಟ್ ಕೋರ್ಟ್ ಸೂಚಿಸಿದೆ.
ತನಿಖಾ ಸಂಸ್ಥೆಯಾದ ಸಿಬಿಐ ಸಲ್ಲಿಸಿರುವ ಸುಶಾಂತ್ ಸಿಂಗ್ ರಜಪೂತ್ ಸಾವಿನ ಕೇಸ್ ಮುಕ್ತಾಯದ ವರದಿಗೆ ಏನಾದರೂ ಆಕ್ಷೇಪಣೆ ಇದ್ದಲ್ಲಿ, ಈ ವೇಳೆ ರಿಹಾ ಚಕ್ರವರ್ತಿಗೆ ಕೋರ್ಟ್ಗೆ ಸಲ್ಲಿಸಬಹುದು. ಸುಶಾಂತ್ ಸಿಂಗ್ ರಜಪೂತ್ ಸಾವಿನ ತನಿಖೆ ಸರಿಯಾಗಿ ನಡೆದಿಲ್ಲ ಎಂದು ಮರುತನಿಖೆಯನ್ನು ಸಹ ಕೋರಲು ಅವಕಾಶ ಇದೆ. ರಿಹಾ ಚಕ್ರವರ್ತಿ ಸಿಬಿಐ ನಡೆಸಿರುವ ತನಿಖೆಯನ್ನು ಒಪ್ಪಿಕೊಳ್ಳಲೂಬಹುದಾಗಿದೆ.
ಸಿಬಿಐ ತನ್ನ ಕೇಸ್ ಮುಕ್ತಾಯದ ವರದಿಯಲ್ಲಿ ನಟಿ ರಿಹಾ ಚಕ್ರವರ್ತಿಗೆ ಕ್ಲೀನ್ ಚಿಟ್ ನೀಡಿದೆ. ಸುಶಾಂತ್ ಸಿಂಗ್ ರಜಪೂತ್ ಸಾವಿನಲ್ಲಿ ಸುಶಾಂತ್ ಗರ್ಲ್ ಫ್ರೆಂಡ್ ಆಗಿದ್ದ ನಟಿ ರಿಹಾ ಚಕ್ರವರ್ತಿಯ ಯಾವುದೇ ಪಾತ್ರವಿಲ್ಲ ಎಂದು ಸಿಬಿಐ ಹೇಳಿದೆ.
ಸುಶಾಂತ್ ಸಿಂಗ್ ಗರ್ಲ್ ಫ್ರೆಂಡ್ ಆಗಿದ್ದ ರಿಹಾ ಚಕ್ರವರ್ತಿ ಹೇಳುವ ಪ್ರಕಾರ, ನಟ ಸುಶಾಂತ್ ಸಿಂಗ್ ರಜಪೂತ್, ಬೈಪೋಲಾರ್ ಡಿಸಾರ್ಡರ್ನಿಂದ ಬಳಲುತ್ತಿದ್ದರು. ಸುಶಾಂತ್ ಸಿಂಗ್ ರಜಪೂತ್ಗೆ ನಿರಂತರವಾಗಿ ಟ್ರೀಟ್ ಮೆಂಟ್ ಕೊಡಿಸಿರಲಿಲ್ಲ. ಆಗ್ಗಾಗ್ಗೆ ಮಾತ್ರೆಗಳನ್ನು ತೆಗೆದುಕೊಳ್ಳುವುದನ್ನು ನಿಲ್ಲಿಸುತ್ತಿದ್ದರು. ಸುಶಾಂತ್ ಸಿಂಗ್ಗೆ ಮಾನಸಿಕ ಸಮಸ್ಯೆ ಇದ್ದರೂ, ಆತನ ಸೋದರಿಯರು, ಮೊಬೈಲ್ ಮೇಸೇಜ್ ಮೂಲಕವೇ ಯಾವ ಔಷಧಿ ತೆಗೆದುಕೊಳ್ಳಬೇಕೆಂದು ಹೇಳುತ್ತಿದ್ದರು. ಮಾತ್ರೆಗಳನ್ನು ತೆಗೆದುಕೊಳ್ಳಲು ಬಳಸಿದ್ದ ಪ್ರಿಸ್ಕ್ರಿಪ್ಷನ್ ಕೂಡ ಪೋರ್ಜರಿಯಾಗಿತ್ತು ಎಂದು ನಟಿ ರಿಹಾ ಚಕ್ರವರ್ತಿ ಮುಂಬೈನ ಪೊಲೀಸರಿಗೆ ಪ್ರಾರಂಭದಲ್ಲಿ ದೂರು ನೀಡಿದ್ದರು.
ಈ ದೂರಿನ ಆಧಾರದ ಮೇಲೆ ಐಪಿಸಿ ಸೆಕ್ಷನ್ ಹಾಗೂ ಎನ್ಡಿಪಿಎಸ್ ಕಾಯಿದೆಯಡಿ ಕೇಸ್ ದಾಖಲಿಸಲಾಗಿತ್ತು. ಬಳಿಕ ಕೇಸ್ ತನಿಖೆಯನ್ನು ಸುಪ್ರೀಂಕೋರ್ಟ್ ಸಿಬಿಐಗೆ ವಹಿಸಿತ್ತು. ಬಳಿಕ ಕೇಸ್ ತನಿಖೆಯನ್ನು ಕೈಗೆತ್ತಿಕೊಂಡ ತನಿಖೆ ನಡೆಸಿದ್ದ ಸಿಬಿಐ, ಸುಶಾಂತ್ ಸಿಂಗ್ ರಜಪೂತ್ ಸೋದರಿಯರಿಗೂ ಕ್ಲೀನ್ ಚಿಟ್ ನೀಡಿದೆ. ತನಿಖೆಯಲ್ಲಿ ಯಾರ ವಿರುದ್ಧವೂ ಯಾವುದೇ ಕ್ರಿಮಿನಲ್ ಆರೋಪ ಸಾಬೀತಾಗಿಲ್ಲ ಎಂದು ಕೇಸ್ ತನಿಖೆಯನ್ನು ಮುಕ್ತಾಯಗೊಳಿಸುವ ವರದಿಯನ್ನು ಮ್ಯಾಜಿಸ್ಟ್ರೇಟ್ ಕೋರ್ಟ್ಗೆ ಸಲ್ಲಿಸಿದೆ. ಈಗ ರಿಹಾ ಚಕ್ರವರ್ತಿ, ಕೋರ್ಟ್ನ ನೋಟಿಸ್ಗೆ ಉತ್ತರಿಸಿದ ಬಳಿಕ ಕೋರ್ಟ್ನಲ್ಲಿ ಮತ್ತೆ ವಿಚಾರಣೆ ನಡೆಯಲಿದೆ.