ಆಪರೇಷನ್ ಸಿಂದೂರ್ ಕಾರ್ಯಾಚರಣೆ ಹೇಗಿತ್ತು ಅಂದರೆ ಪಾಕ್ ಗೆ ಇಂದಿಗೂ ನಿದ್ರಿಸಲು ಆಗ್ತಿಲ್ಲ: ಪ್ರಧಾನಿ ಮೋದಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಲೋಕಸಭೆಯಲ್ಲಿ ಭಾರತ ನಡೆಸಿದ ‘ಆಪರೇಷನ್ ಸಿಂದೂರ್’ ಕುರಿತು ಚರ್ಚೆಯ ವೇಳೆ ಪ್ರಧಾನಿ ಮೋದಿ ಗುಡುಗಿದ್ದಾರೆ.

ಭಾರತವು ಆಪರೇಷನ್​ ಸಿಂದೂರ ಮೂಲಕ ಪಾಕಿಸ್ತಾನದ ಎದೆಗೆ ನಿಖರವಾಗಿ ಹೊಡೆದಿದ್ದು, ಆ ದಾಳಿ ಹೇಗಿತ್ತು ಎಂದ್ರೆ, ಪಾಕಿಸ್ತಾನವು ಇಂದಿಗೂ ಅವರಿಗೆ ನಿದ್ರಿಸಲು ಆಗ್ತಿಲ್ಲ ಎಂದು ಮೋದಿ ಹೇಳಿದ್ದಾರೆ.

ಪಹಲ್ಗಾಮ್ ದಾಳಿಯ ನಂತರ, ಭಯೋತ್ಪಾದನೆಯ ಅಂಶಗಳನ್ನು ನಿರ್ಮೂಲನೆ ಮಾಡುವುದಾಗಿ ನಾನು ಭರವಸೆ ನೀಡಿದ್ದೆ, ಆದರಂತೆ, ಸೇನೆಗೆ ಪಹಲ್ಗಾಮ್ ದಾಳಿಗೆ ಪ್ರತಿಕಾರವಾಗಿ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದೇವು. ಅಲ್ಲಿ, ಸೈನ್ಯವು ಯಾವಾಗ, ಎಲ್ಲಿ, ಹೇಗೆ, ಯಾವ ರೀತಿಯಲ್ಲಿ ದಾಳಿ ಮಾಡಲು ನಿರ್ಧರಿಸುವಂತೆ ಹೇಳಲಾಯಿತು. ಅದರಂತೆ, ನಾವು, ಭಯೋತ್ಪಾದಕರನ್ನು ಶಿಕ್ಷಿಸಿದೆವು, ಮತ್ತು ಶಿಕ್ಷೆ ಎಷ್ಟಿತ್ತೆಂದರೆ ಇಂದಿಗೂ ಆ ದೇಶ ನಿದ್ರಿಸಲು ಸಾಧ್ಯವಾಗಿಲ್ಲ ಎಂದರು.

ಭಾರತದ ದಾಳಿ ಹೇಗಿತ್ತೆಂದರೆ, ಪಾಕಿಸ್ತಾನದ ಕೆಲವು ವಾಯುನೆಲೆಗಳು ಮತ್ತು ಸ್ವತ್ತುಗಳು ಇನ್ನೂ ಐಸಿಯುನಲ್ಲಿವೆ. ಇದರೊಂದಿಗೆ, ‘ಪರಮಾಣು ಬ್ಲ್ಯಾಕ್‌ಮೇಲಿಂಗ್ ಇನ್ನು ಮುಂದೆ ಕೆಲಸ ಮಾಡುವುದಿಲ್ಲ ಎಂದು ಭಾರತವು ಆಪರೇಷನ್​ ಸಿಂದೂರ ಮೂಲಕ ಸಾಬೀತುಪಡಿಸಿದ್ದು, ಇದರೊಂದಿಗೆ, ಈ ಪರಮಾಣು ಬ್ಲ್ಯಾಕ್‌ಮೇಲಿಂಗ್‌ಗೆ ಭಾರತವೂ ಎಂದಿಗೂ ತಲೆಬಾಗುವುದಿಲ್ಲ ಎಂದು ಗುಡುಗಿದರು.

ಏಪ್ರಿಲ್ 22 ರ ದಾಳಿಗೆ ನಾವು 22 ನಿಮಿಷಗಳಲ್ಲಿ ಸೇಡು ತೀರಿಸಿಕೊಂಡೆವು. ಇದರೊಂದಿಗೆ, ಪಾಕಿಸ್ತಾನದೊಂದಿಗೆ ಅನೇಕ ಯುದ್ಧಗಳು ನಡೆದಿವೆ, ಆದರೆ ಮೊದಲ ಬಾರಿಗೆ ನಾವು ಹಿಂದೆಂದೂ ಇಲ್ಲದ ಸ್ಥಳಗಳನ್ನು ತಲುಪಲು ಅಂತಹ ತಂತ್ರವನ್ನು ರೂಪಿಸಲಾಯಿತು. ಪಾಕಿಸ್ತಾನದ ಪ್ರತಿಯೊಂದು ಮೂಲೆಯಲ್ಲಿಯೂ ಭಯೋತ್ಪಾದಕ ನೆಲೆಗಳು ನಾಶವಾದವು ಎಂದರು.

ನಾನು ಭಾರತದ ಪರವಾಗಿ, ಭಾರತದ ಆಪರೇಷನ್​ ಸಿಂದೂರದ ಪರವಾಗಿ ಇಲ್ಲಿದೇನೆ. ಭಾರತದ ವಿರೋಧಿಗಳಿಗೆ ಸತ್ಯದ ಕನ್ನಡಿಯನ್ನು ತೋರಿಸುವ ಸಲುವಾಗಿ ಇಲ್ಲಿದೇನೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!