ಪ್ರಜ್ವಲ್​ ರೇವಣ್ಣಗೆ ಕೊಂಚ ರಿಲೀಫ್: ತೀರ್ಪು ಮುಂದೂಡಿದ ಸ್ಪೆಷಲ್ ಕೋರ್ಟ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಅಶ್ಲೀಲ ವಿಡಿಯೋ ಹಾಗೂ ಅತ್ಯಾಚಾರ ಪ್ರಕರಣದಲ್ಲಿ ಬಂಧಿತರಾಗಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ 14 ತಿಂಗಳಿಂದ ಸೆರೆಮನೆಯಲ್ಲಿ ಬಂಧಿಯಾಗಿದ್ದಾರೆ. ಪ್ರಜ್ವಲ್ ಪ್ರಕರಣಕ್ಕೆ ಸಂಬಂಧಿಸಿದಂತೆ 26 ಸಾಕ್ಷಿಗಳ ವಿಚಾರಣೆ ನಡೆಸಿರುವ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಇಂದು ನೀಡಬೇಕಿದ್ದ ತೀರ್ಪನ್ನುಆಗಸ್ಟ್​​ 1ಕ್ಕೆ   ಮುಂದೂಡಿಕೆ ಮಾಡಿದೆ.

ಪ್ರಜ್ವಲ್​ ರೇವಣ್ಣ ಕೂಡ ಇಂದು ಕೋರ್ಟ್​ಗೆ ಹಾಜರಾಗಿದ್ದರು. ಪ್ರಜ್ವಲ್​ ರಾಜಕೀಯ ಭವಿಷ್ಯಕ್ಕೂ ತೀರ್ಪು ಮಹತ್ವದ್ದಾಗಿದೆ. ವಿಚಾರಣೆ ಆರಂಭವಾಗ್ತಿದ್ದಂತೆ ಎರಡೂ ಕಡೆ ವಕೀಲರಿಂದ ಕೆಲವು ಸ್ಪಷ್ಟನೆ ಕೇಳಿದ ನ್ಯಾಯಾಲಯ ಬಳಿಕ ಆಗಸ್ಟ್​​ 1ಕ್ಕೆ ತೀರ್ಪು ಮುಂದೂಡಿಕೆ ಮಾಡಿದೆ.

ಗೂಗಲ್ ಮ್ಯಾಪ್ ಆಧರಿಸಿ ಎರಡು ಕಡೆ ವಾದ ಮಂಡನೆ ನಡೆದಿದೆ.  ಗೂಗಲ್ ಸಂಸ್ಥೆ ಅಧಿಕೃತ ಮಾಹಿತಿ ಇಲ್ಲದೆ ದಾಖಲೆ ಪರಿಗಣಿಸಬಹುದೇ ಎಂದು ನ್ಯಾ. ಸಂತೋಷ್ ಗಜಾನನ ಭಟ್ ಪ್ರಶ್ನಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!