ಮಳೆಗಾಲದಲ್ಲಿ ವಾಹನ ಚಲಾಯಿಸುವುದು ಮನಸ್ಸಿಗೆ ಹೆಚ್ಚು ಸಂತೋಷ ಲಭಿಸುತ್ತದೆ. ಲಘು ತುಂತುರು ಮಳೆ ಹಾಗೂ ತಂಪಾದ ಗಾಳಿ ಮುದ ನೀಡುತ್ತದೆ. ಆದರೆ, ಈ ಸಮಯದಲ್ಲಿ ಸ್ವಲ್ಪ ಎಚ್ಚರ ತಪ್ಪಿದರೆ, ಅಪಘಾತಗಳು ಸಂಭವಿಸುತ್ತದೆ. ಇದರಿಂದ ವಾಹನ ಚಲಾಯಿಸುವಾಗ ಪ್ರತಿಕ್ಷಣವೂ ಜಾಗರೂಕರಾಗಿರಬೇಕಾಗುತ್ತದೆ. ಸೇಫ್ಟಿ ರೂಲ್ಸ್ ಹೀಗಿದೆ..
ಕಾರು ಮತ್ತು ಇತರೆ ವಾಹನ ಚಾಲನೆ ಮಾಡುವ ಮೊದಲು ಎಲ್ಲವೂ ಸರಿಯಾಗಿ ಕಾರ್ಯನಿರ್ವಹಿಸುತ್ತಿದೆಯೇ ಅಥವಾ ಇಲ್ಲವೇ ಎಂಬುದನ್ನು ನೋಡುವುದು ಮುಖ್ಯ. ಮಳೆಯಲ್ಲಿ ಚಾಲನೆ ಮಾಡುವಾಗ ಕೆಲವು ಹೆಚ್ಚುವರಿ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು. ವಿಶೇಷವಾಗಿ ವಿಂಡ್ಶೀಲ್ಡ್ ವೈಪರ್ಗಳನ್ನು ಪರಿಶೀಲಿಸಿ ಮತ್ತು ಬ್ಲೇಡ್ಗಳು ಹಾನಿಗೊಳಗಾಗಿದ್ದರೆ, ಅವುಗಳನ್ನು ಬದಲಾಯಿಸಿ ಎಂದು ತಜ್ಞರು ತಿಳಿಸುತ್ತಾರೆ.
ವಾಹನಗಳಲ್ಲಿರುವ ವೈರ್ಗಳು ಕಾರ್ಯನಿರ್ವಹಿಸುತ್ತಿವೆಯೇ ಎಂದು ಪರಿಶೀಲಿಸಿ. ಸಂಪರ್ಕಗಳು ಹೇಗಿವೆ? ಟ್ಯಾಂಕ್ನಲ್ಲಿ ಸಾಕಷ್ಟು ಪೆಟ್ರೋಲ್-ಡೀಸೆಲ್ ಇದೆಯೇ ಅಥವಾ ಇಲ್ಲವೇ? ಇದನ್ನೆಲ್ಲ ಒಮ್ಮೆ ಪರಿಶೀಲಿಸಿ, ವಾಹನದ ಸ್ಥಿತಿ ಮತ್ತು ಇತರ ವಿಷಯಗಳನ್ನು ಪರಿಶೀಲಿಸಿದ ನಂತರವೇ ನೀವು ವಾಹನ ಓಡಿಸಬೇಕು ಎಂಬುದನ್ನು ನೆನಪಿನಲ್ಲಿಡಿ.
ವಾಹನಗಳ ಹೆಡ್ಲೈಟ್ಗಳು, ಟೈಲ್ಲೈಟ್ಗಳು, ಬ್ರೇಕ್ ಲೈಟ್ಗಳು, ಟರ್ನ್ ಇಂಡಿಕೇಟರ್ಗಳು ಮತ್ತು ತುರ್ತು ಪಾರ್ಕಿಂಗ್ ಲೈಟ್ಗಳನ್ನು ಆನ್ ಮಾಡಲು ಖಚಿತಪಡಿಸಿಕೊಳ್ಳಿ ಮತ್ತು ಬ್ಯಾಟರಿ ಮತ್ತು ಬ್ರೇಕ್ಗಳ ಸ್ಥಿತಿಯನ್ನು ಸಹ ಪರಿಶೀಲಿಸಬೇಕಾಗುತ್ತದೆ.
ವಾಹನ ಚಾಲನೆ ಮಾಡುವ ಮೊದಲು, ನಿಮ್ಮ ಟೈರ್ಗಳಲ್ಲಿನ ಗಾಳಿಯ ಒತ್ತಡವನ್ನು ಪರೀಕ್ಷಿಸಲು ಮರೆಯದಿರಿ, ಏಕೆಂದರೆ ಗಾಳಿಯ ಒತ್ತಡ ತುಂಬಾ ಹೆಚ್ಚಿದ್ದರೆ ಅಥವಾ ತುಂಬಾ ಕಡಿಮೆಯಿದ್ದರೆ ಅಪಘಾತದ ಅಪಾಯವಿದೆ.