ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರೀ ಕುತೂಹಲ ಕೆರಳಿಸಿರುವ ಧರ್ಮಸ್ಥಳ ಆಸುಪಾಸಿನಲ್ಲಿ ನೂರಾರು ಶವಗಳನ್ನು ಹೂತಿಡಲಾಗಿದೆ ಎಂಬ ಪ್ರಕರಣ ತನಿಖೆ ಮತ್ತಷ್ಟು ತೀವ್ರಗೊಳಿಸಿರುವ ಎಸ್ ಐಟಿ, ಮೂರನೇ ದಿನವೂ ಸಮಾಧಿ ಅಗೆಯುವ ಪ್ರಕ್ರಿಯೆ ಮುಂದುವರಿಸಿದೆ.
ನೇತ್ರಾವತಿ ಪಕ್ಕದ ದಟ್ಟ ಕಾಡಿನ ಪರಿಸರದಲ್ಲಿ ಇಂದು ಪಾಯಿಂಟ್ 2, 3 ಹಾಗೂ ಪಾಯಿಂಟ್ 4 ಮೇಲೆ ಅಧಿಕಾರಿಗಳು ಗಮನ ಕೇಂದ್ರೀಕರಿಸಿದ್ದು, ದೂರುದಾರನ ಸಮ್ಮುಖದಲ್ಲಿ ಅಗೆತ ಕಾರ್ಯ ಸಾಗಿದೆ.
ಅರಣ್ಯದ ಒಳಗಡೆ ಉತ್ಕನನ ನಡೆಸಲು ಯಂತ್ರ ಬಳಸಲು ಅನುಮತಿ ಇಲ್ಲದ ಕಾರಣ ಪಂಚಾಯತ್‌ನ ಇಪ್ಪತ್ತು ಮಂದಿ ಕಾರ್ಮಿಕರಿಂದ ಶೋಧ ಕಾರ್ಯ ನಡೆದಿದೆ.
ಪುತ್ತೂರು ಉಪವಿಭಾಗಾಧಿಕಾರಿ ಸ್ಟೆಲ್ಲಾ ವರ್ಗೀಸ್ ಹಾಗೂ ಎಸ್ಐಟಿ ಎಸ್.ಪಿ ಜಿತೇಂದ್ರ ಕುಮಾರ್ ದಯಾಮ ಖುದ್ದು ಸ್ಥಳದಲ್ಲಿದ್ದಾರೆ.
ಇತರೆ ತಾಲೂಕಿನ ಮೂರು ತಹಶಿಲ್ದಾರ್, ಸರ್ಕಾರಿ ಪಂಚರು ಹಾಗೂ ಕಾರ್ಮಿಕರ ನಿಯೋಜನೆ ಮಾಡಿ ಮೂರು ತಂಡ ರಚಿಸಲಾಗಿದ್ದು, ಏಕಕಾಲದಲ್ಲಿ ಅನಾಮಿಕ ತೋರಿಸಿದ 3 ಜಾಗಗಳನ್ನ ಅಗೆಯಲು ಎಸ್ಐಟಿ ಟೀಮ್ ನಿರ್ಧರಿಸಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಇನ್ನಷ್ಟು ಮಾಹಿತಿ ನಿರೀಕ್ಷಿಸಲಾಗಿದೆ.