ನಾಲ್ಕನೇ ದಿನಕ್ಕೆ ಸಮಾಧಿ ಶೋಧ: ಪಾಯಿಂಟ್ 6ರಲ್ಲಿ ಬಯಲಾಯ್ತಾ ‘ಮಾಸ್ಕ್ ಮ್ಯಾನ್’ ಕೊಟ್ಟಿದ್ದ ಹೇಳಿಕೆ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಭಾರೀ ಕುತೂಹಲ ಕೆರಳಿಸಿರುವ ಧರ್ಮಸ್ಥಳ ಆಸುಪಾಸಿನಲ್ಲಿ ನೂರಾರು ಶವಗಳನ್ನು ಹೂತಿಡಲಾಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿ ಸಮಾಧಿ ಅಗೆಯುವ ಕಾರ್ಯ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ.

ಈ ನಡುವೆ ಇಂದು ಪಾಯಿಂಟ್ 6 ಸಮಾಧಿ ಅಗೆಯುವ ಸಂದರ್ಭ ಎರಡು ಅಸ್ಥಿಪಂಜರಗಳ‌ ಮೂಳೆ ಅವಶೇಷಗಳು ಸಿಕ್ಜಿವೆ ಎಂಬ ದಟ್ಟ ಮಾಹಿತಿ ಹರಿದಾಡುತ್ತಿದ್ದು, ಎಸ್ ಐಟಿ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.

ನೇತ್ರಾವತಿ ಪಕ್ಕದ ದಟ್ಟ ಕಾಡಿನ ಪರಿಸರದಲ್ಲಿ ದೂರುದಾರ ಗುರುತಿಸಿರುವ ಆರನೇ ಪಾಯಿಂಟ್‌ನಲ್ಲಿ ಹಿಟಾಚಿ ಯಂತ್ರವನ್ನು ಬಳಸಿ ಉತ್ಖನನ ಕಾರ್ಯ ಮುಂದುವರಿದಿದೆ. ಈ ಸ್ಥಳದಲ್ಲಿ ಈಗಾಗಲೇ ಒಂದೂವರೆ ಗಂಟೆಗಳಿಂದ ಶೋಧ ನಡೆಸಲಾಗಿದೆ. ಇನ್ನು ಸಾಧ್ಯವಾದಲ್ಲಿ6ನೇ ಪಾಯಿಂಟ್‌ ನಂತರ 7 ಹಾಗೂ 8ನೇ ಪಾಯಿಂಟ್‌ನಲ್ಲಿ ಉತ್ಖನನ ಕಾರ್ಯ ನಡೆಸುವ ಸಾಧ್ಯತೆಗಳಿವೆ.
ಇನ್ನಷ್ಟು ಮಾಹಿತಿ ನಿರೀಕ್ಷಿಸಲಾಗುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!