ಹೊಸದಿಗಂತ ವರದಿ ರಾಣೇಬೆನ್ನೂರ:
ಮಹಿಳೆಯೋರ್ವಳು ಸಾವಿಗೆ ಶರಣಾಗಲು ತೀರ್ಮಾನಿಸಿ ತುಂಗಭದ್ರಾ ನದಿಗೆ ಹಾರಿ ಪ್ರಾಣಾಪಾಯಾದಿಂದ ಪಾರಾದ ಘಟನೆ ತಾಲೂಕಿನ ನಿಟಪಳ್ಳಿ ಗ್ರಾಮದಲ್ಲಿ ಗುರುವಾರ ಬೆಳಿಗ್ಗೆ ನಡೆದಿದೆ.
ಆತ್ಮಹತ್ಯೆಗೆ ಶರಣಾಗಲು ಹೋಗಿದ್ದ ಮಹಿಳೆಯನ್ನು ರಟ್ಟಿಹಳ್ಳಿ ತಾಲೂಕಿನ ರೂಪಾ(32) ಎಂದು ಗುರುತಿಸಲಾಗಿದೆ.
ಮಹಿಳೆಯು ಸಾವಿಗೆ ಶರಣಾಗಲು ತುಂಗಭದ್ರಾ ನದಿಗೆ ಹಾರಿ ಸತತವಾಗಿ 3 ಕಿ.ಮೀ ನಷ್ಟು ಈಜಿ ನದಿಯ ಮಧ್ಯಭಾಗದಲ್ಲಿ ಮರವೊಂದರ ಬಳಿ ಆಶ್ರಯವಪಡೆದಿದ್ದಾಳೆ ಮೈದುಂಬಿ ಹರಿಯುತ್ತಿರುವ ನದಿಯಲ್ಲಿ ಮಹಿಳೆಯು ಗ್ರಾಮಸ್ಥರ ಕಣ್ಣಿಗೆ ಬಿದ್ದಿದ್ದಾಳೆ ಕೂಡಲೇ ಗ್ರಾಮಸ್ಥರು ಅಗ್ನಿಶಾಮಕದಳದವರಿಗೆ ಹಾಗೂ ಪೊಲೀಸರಿಗೆ ಪೋನ್ ಮಾಡಿದ ಪರಿಣಾಮ ಅಗ್ನಿಶಾಮಕ ದಳದ ಸಿಬ್ಬಂಧಿ ನದಿಗೆ ಆಗಮಿಸಿ ಮಹಿಳೆಯನ್ನು ರಕ್ಷಿಸಿ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.