ಹೊಸದಿಗಂತ ಡಿಜಿಟಲ್ ಡೆಸ್ಕ್:
10 ರೂಪಾಯಿಗೋಸ್ಕರ ಸ್ನೇಹಿತನ ಜೊತೆ ಕಿತ್ತಾಡುವ ಕಾಲದಲ್ಲಿ ಸ್ನೇಹಿತನ ಜೀವದಲ್ಲೇ ಜೀವ ಇಟ್ಟ ಗೆಳೆಯರೊಬ್ಬರು ಇದ್ದಾರೆ! ಹೌದು, ಸ್ನೇಹಿತನಿಗೆ ಕೊಟ್ಟ ಮಾತಿನಂತೆ ಅಂತ್ಯಕ್ರಿಯೆ ವೇಳೆ ಕುಣಿದು ಕುಪ್ಪಳಿಸಿ ನಗುವಿನ ವಿದಾಯ ನೀಡಿದ್ದಾರೆ.
ಈ ಘಟನೆ ಮಧ್ಯಪ್ರದೇಶದ ಮಂದಸೌರ್ನಲ್ಲಿ ನಡೆದಿದೆ. ಮಂದಸೌರ್ ಜಿಲ್ಲೆಯ ಜವಾಸಿಯಾ ಗ್ರಾಮದಲ್ಲಿ ಬುಧವಾರ ನಡೆದ ಅಂತ್ಯಕ್ರಿಯೆ ಮೆರವಣಿಗೆ ವೇಳೆ ವ್ಯಕ್ತಿಯೊಬ್ಬ ಮೃತ ಸ್ನೇಹಿತನ ಕೊನೆಯ ಆಸೆಯನ್ನು ಈಡೇರಿಸಲು ನೃತ್ಯಮಾಡಿ ಕಣ್ಣಂಚಲ್ಲಿ ನೀಡಿದ್ದರೂ ಮುಖದಲ್ಲಿ ನಗು ತಂದುಕೊಂಡು ಅಂತ್ಯಕ್ರಿಯೆ ನೆರವೇರಿಸಿದ್ದಾರೆ.
ಸೋಹಲ್ ಲಾಲ್ ಜೈನ್ ಎಂಬುವವರು ಕ್ಯಾನ್ಸರ್ನಿಂದ ಬಳಲುತ್ತಿದ್ದರು, ತನ್ನ ಆತ್ಮೀಯ ಗೆಳೆಯ ಅಂಬಾಲಾಲ್ ಪ್ರಜಾಪತಿಗೆ ಪತ್ರ ಬರೆದು, ತಮ್ಮ ಅಂತ್ಯಕ್ರಿಯೆಯ ಮೆರವಣಿಗೆಯಲ್ಲಿ ನೃತ್ಯ ಮಾಡಬೇಕೆಂದು ಬಯಸಿದ್ದರು.
ನನ್ನ ಅಂತ್ಯಕ್ರಿಯೆ ನಡೆಯುವಾಗ ಆತ ಅಳು ಮೊಗದಲ್ಲಿ ಇರಬಾರದು ನಗು ನಗುತ್ತಾ ನನ್ನನ್ನು ಕಳುಹಿಸಿಕೊಡಬೇಕು ಎಂದು ಆಶಿಸಿದ್ದರು. ಕಣ್ಣೀರು ಹಾಗೂ ನಗುವಿನ ಈ ಸಂಗಮವನ್ನು ನೋಡಿ ಗ್ರಾಮಸ್ಥರು ಭಾವುಕರಾದರು. ಎಲ್ಲರೂ ಈ ವಿಶಿಷ್ಟ ಹಾಗೂ ಹೃದಯಸ್ಪರ್ಶಿ ದೃಶ್ಯವನ್ನು ನೀಡಿ ಮೆಚ್ಚಿದ್ದಾರೆ. ಇಂದಿನ ಕಾಲದಲ್ಲಿ ಇಂಥಾ ಸ್ನೇಹ ಅಪರೂಪ ಎಂದು ಜನರು ಕೊಂಡಾಡಿದರು.
अंतिम यात्रा में डांस करना कह कर गए थे सोहनलाल जैन
मन्दसौर :- जवासिया ग्राम में एक दोस्त ने दोस्त से किया वादा पूरा किया, उसकी अंतिम यात्रा में डांस करना कह कर गए थे सोहनलाल जैन, आज अंबालाल प्रजापत ने अपने दोस्त की शव यात्रा के सामने किया डांस। pic.twitter.com/Ki7IBUjnKJ
— 🇮🇳Jitendra pratap singh🇮🇳 (@jpsin1) July 31, 2025