ಅಗಾಧ ಪ್ರಮಾಣದಲ್ಲಿ ಪೌಷ್ಟಿಕಾಂಶಗಳು ಇರುವ ಆಹಾರಗಳಲ್ಲಿ ಮೊಟ್ಟೆ ಕೂಡ ಪ್ರಮುಖ ಸ್ಥಾನ ಪಡೆದಿದೆ. ಪ್ರೋಟೀನ್‌ನಿಂದ ಕೂಡಿದ ಈ ಆಹಾರವು ಹೃದಯದ ಆರೋಗ್ಯಕ್ಕೂ ಸಹಕಾರಿಯಾಗುತ್ತದೆ. ಆದ್ದರಿಂದ ತಜ್ಞರು ದಿನಕ್ಕೆ ಕನಿಷ್ಠ ಒಂದು ಬೇಯಿಸಿದ ಮೊಟ್ಟೆ ಸೇವನೆ ಮಾಡುವಂತೆ ಸಲಹೆ ನೀಡುತ್ತಾರೆ. ಆದರೆ, ಈ ಮೊಟ್ಟೆಗಳನ್ನು ಬೇಯಿಸುವಾಗ ಕೆಲವು ಎಚ್ಚರಿಕೆಗಳನ್ನು ಕೈಗೊಂಡರೆ ಮಾತ್ರ ಅದರ ಅಂಶಗಳು ಸರಿಯಾಗಿ ಉಳಿಯುತ್ತವೆ.
ಮೊಟ್ಟೆಗಳನ್ನು ಬಹುಪಾಲು ಜನರು ಫ್ರಿಡ್ಜ್‌ನಲ್ಲಿ ಸಂಗ್ರಹಿಸುತ್ತಾರೆ. ಆದರೆ ತಕ್ಷಣ ಫ್ರಿಡ್ಜ್‌ನಿಂದ ತೆಗೆದು ಬೇಯಿಸಲು ಹೋಗುವುದು ಸರಿಯಲ್ಲ. ಮೊಟ್ಟೆ ತಕ್ಷಣ ಕುದಿಸಲು ಇಟ್ಟರೆ ಅದರ ಸಿಪ್ಪೆ ಬಿರುಕು ಬೀಳುವ ಸಾಧ್ಯತೆ ಹೆಚ್ಚಾಗಿ, ರುಚಿಗೂ ಹಾನಿ ಉಂಟಾಗಬಹುದು. ಹೀಗಾಗಿ ಮೊಟ್ಟೆಗಳನ್ನು ಫ್ರಿಡ್ಜ್‌ನಿಂದ ತೆಗೆದ ನಂತರ ಕನಿಷ್ಠ 15-20 ನಿಮಿಷ ಸಾಮಾನ್ಯ ವಾತಾವರಣದಲ್ಲಿಯೇ ಇಡಬೇಕು.
ಮತ್ತೊಂದೆಡೆ, ಮೊಟ್ಟೆ ಬೇಯಿಸಲು ಸರಿಯಾದ ಪಾತ್ರೆ ಆಯ್ಕೆ ಮಾಡುವುದು ಕೂಡ ಮುಖ್ಯ. ಮೊಟ್ಟೆಗಳನ್ನು ಬೇಯಿಸುವಾಗ ಆಳವಿಲ್ಲದ ಪ್ಯಾನ್ ಅನ್ನು ಬಳಸಬೇಕು. ಏಕೆಂದರೆ ಮೊಟ್ಟೆಗಳನ್ನು ಸಂಪೂರ್ಣವಾಗಿ ನೀರಿನಿಂದ ಮುಚ್ಚಿ ಬೇಯಿಸಲು ಮತ್ತು ಅವು ಸ್ವತಂತ್ರವಾಗಿ ಚಲಿಸಲು ಸಾಕಷ್ಟು ಸ್ಥಳ ಬೇಕಾಗುತ್ತದೆ. ಸ್ಕ್ರಾಂಬಲ್ಡ್ ಮೊಟ್ಟೆಗಳಿಗೆ ಸಣ್ಣ ಹುರಿಯಲು ಪ್ಯಾನ್ ಅನ್ನು ಶಿಫಾರಸು ಮಾಡಲಾಗುತ್ತದೆ.
ತಾಜಾ ಮೊಟ್ಟೆಗಳನ್ನು ಬಳಸುವುದು ಕೂಡ ಆರೋಗ್ಯಕ್ಕೆ ಉತ್ತಮ. ಬಿಳಿಯಾಗಿ ಕಾಣುವ ಮೊಟ್ಟೆಗಳು ತಾಜಾ ಎನ್ನುವುದಲ್ಲ. ಪ್ಯಾಕೇಜಿಂಗ್ ದಿನಾಂಕವನ್ನು ಪರಿಶೀಲಿಸಿ ನಂತರವೇ ಖರೀದಿಸಿ. ಅದಲ್ಲದೇ ಮೊಟ್ಟೆಗಳನ್ನು 10-12 ನಿಮಿಷ ಕುದಿಸುವುದು ಸೂಕ್ತ. ತದನಂತರ ಬಿಸಿ ನೀರಿನಿಂದ ತೆಗೆದು ತಕ್ಷಣ ತಣ್ಣೀರಿನಲ್ಲಿ ಹಾಕುವುದು. ಇದರಿಂದ ಸಿಪ್ಪೆ ಸುಲಭವಾಗಿ ತೆಗೆಯಬಹುದು.