ವಿಟಮಿನ್ ಬಿ12 ನಮ್ಮ ದೇಹದಲ್ಲಿ ಪ್ರಮುಖವಾದ ಪೋಷಕಾಂಶ. ಇದು ಕೆಂಪು ರಕ್ತಕಣಗಳ ಉತ್ಪಾದನೆ, ಡಿಎನ್ಎ ನಿರ್ಮಾಣ ಹಾಗೂ ನರಮಂಡಲದ ಆರೋಗ್ಯಕ್ಕಾಗಿ ಅಗತ್ಯವಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಸಸ್ಯಾಹಾರಿಗಳಲ್ಲಿ ಈ ವಿಟಮಿನ್ ಕೊರತೆ ಹೆಚ್ಚಾಗುತ್ತಿದೆ. ವಿಟಮಿನ್ ಬಿ12 ಕೊರತೆಯಿಂದ ಆಯಾಸ, ಶಕ್ತಿಹೀನತೆ, ಸ್ಮರಣಶಕ್ತಿ ಹಾನಿ ಮತ್ತು ನರಗಳಿಗೆ ಸಂಬಂಧಿಸಿದ ಗಂಭೀರ ಸಮಸ್ಯೆಗಳಾಗಬಹುದು. ಮಾಂಸ, ಮೀನು, ಮೊಟ್ಟೆ ಅಥವಾ ಡೈರಿ ಉತ್ಪನ್ನಗಳಿಂದಲೇ ಸಾಮಾನ್ಯವಾಗಿ ಈ ವಿಟಮಿನ್ ಲಭ್ಯವಾಗುವುದರಿಂದ ಸಸ್ಯಾಹಾರಿಗಳಿಗೆ ಪರ್ಯಾಯ ಮಾದರಿಯ ಆಹಾರ ಅಗತ್ಯವಾಗುತ್ತದೆ.
ಆಹಾರ ತಜ್ಞರ ಪ್ರಕಾರ, ಕೆಲವು ಜ್ಯೂಸ್‌ಗಳನ್ನು ದಿನಪತ್ರಿಯಾಗಿ ಸೇವಿಸುವುದರಿಂದ ವಿಟಮಿನ್ B12 ಕೊರತೆಯನ್ನು ಕಡಿಮೆ ಮಾಡಬಹುದು. ಈ ಜ್ಯೂಸ್ ಬೀಟ್ರೂಟ್, ಪಾಲಕ್, ಸೇಬು, ಸೂರ್ಯಕಾಂತಿ ಬೀಜ, ತುಳಸಿ ಮತ್ತು ಕೊತ್ತಂಬರಿಯೊಂದಿಗೆ ತಯಾರಿಸಬಹುದು. ಇದು ನೈಸರ್ಗಿಕವಾಗಿ ಪೌಷ್ಟಿಕಾಂಶಗಳಿಂದ ಸಮೃದ್ಧವಾಗಿದ್ದು, ದೇಹಕ್ಕೆ ಅಗತ್ಯವಿರುವ ವಿಟಮಿನ್‌ಗಳನ್ನೂ ಒದಗಿಸುತ್ತದೆ.
ಬೀಟ್ರೂಟ್‌ನಲ್ಲಿ ವಿಟಮಿನ್ B12, ಕಬ್ಬಿಣ ಹಾಗೂ ಫೋಲಿಕ್ ಆಮ್ಲ ಅಧಿಕ ಪ್ರಮಾಣದಲ್ಲಿದೆ. ಇದು ರಕ್ತಹೀನತೆ ನಿವಾರಣೆಗೆ ಸಹಕಾರಿಯಾಗುತ್ತದೆ. ಪಾಲಕ್‌ನಲ್ಲಿ ಮೆಗ್ನೀಸಿಯಮ್, ಕಬ್ಬಿಣ, ಹಾಗೂ ಸ್ವಲ್ಪ ಪ್ರಮಾಣದ ವಿಟಮಿನ್ B12 ಇರುತ್ತದೆ. ಇದು ದೇಹದ ಶಕ್ತಿಯನ್ನು ಹೆಚ್ಚಿಸುತ್ತದೆ.
ಸೇಬಿನಲ್ಲಿ ವಿಟಮಿನ್ B12 ಜೊತೆಗೆ ಫೈಬರ್ ಹಾಗೂ ಆಂಟಿಆಕ್ಸಿಡೆಂಟ್ ಇರುತ್ತದೆ. ಇದು ಹೃದಯದ ಆರೋಗ್ಯವನ್ನೂ ಉತ್ತಮಗೊಳಿಸುತ್ತದೆ.
ಸೂರ್ಯಕಾಂತಿ ಬೀಜಗಳು ವಿಟಮಿನ್ B12 ಮತ್ತು ಇ ನ ಉತ್ತಮ ಮೂಲವಾಗಿದೆ. ಇವು ದೇಹದ ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುತ್ತವೆ.
ತುಳಸಿ ಹಾಗೂ ಕೊತ್ತಂಬರಿ ದೇಹವನ್ನು ಬ್ಯಾಕ್ಟೀರಿಯಾ ಮತ್ತು ಸೋಂಕುಗಳಿಂದ ರಕ್ಷಿಸುತ್ತವೆ. ಈ ಎಲ್ಲಾ ಪದಾರ್ಥಗಳಿಂದ ತಯಾರಾದ ಜ್ಯೂಸ್ ಆರೋಗ್ಯದ ಮೇಲೆ ಬಹುಪಾಲು ಹಿತಕರ ಪರಿಣಾಮ ಬೀರುತ್ತದೆ. ನಿತ್ಯ ಈ ರಸವನ್ನು ಕುಡಿಯುವುದರಿಂದ ವಿಟಮಿನ್ B12 ಕೊರತೆಯ ನಿಯಂತ್ರಣ ಸಾಧ್ಯ. (Disclaimer: ಈ ಲೇಖನವು ಸಾರ್ವಜನಿಕ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಯಾಧಾರಿತವಾಗಿದೆ. ಇದು ವೈದ್ಯಕೀಯ ಸಲಹೆಯಲ್ಲ. ಹೆಚ್ಚಿನ ಮಾಹಿತಿಗಾಗಿ ತಜ್ಞರನ್ನು ಸಂಪರ್ಕಿಸಿ.)