ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಇವಿಎಂ ತಿರುಚಿಲ್ಲ ಎಂಬುದು ಪರಿಶೀಲನೆಯಿಂದ ಮತ್ತೊಮ್ಮೆ ಸಾಬೀತಾಗಿದೆ ಎಂದು ಚುನಾವಣಾ ಆಯೋಗ ಪುನರುಚ್ಚರಿಸಿದೆ.
10 ಅಭ್ಯರ್ಥಿಗಳ ಅರ್ಜಿಗಳ ಆಧಾರದ ಮೇಲೆ 10 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡ ಪರಿಶೀಲನೆ (ಸಿ & ವಿ) ಪ್ರಕ್ರಿಯೆ ನಡೆಸಲಾಯಿತು. ಇವಿಎಂ ಫಲಿತಾಂಶಗಳು ಮತ್ತು ವಿವಿಪ್ಯಾಟ್ ಸ್ಲಿಪ್‌ಗಳ ನಡುವೆ ಮತ ಎಣಿಕೆಯಲ್ಲಿ ಯಾವುದೇ ಮಿಸ್‌ಮ್ಯಾಚ್ ಆಗಿಲ್ಲ ಎಂದು ಆಯೋಗ ತಿಳಿಸಿದೆ.
ಯಂತ್ರಗಳು, ಬ್ಯಾಲೆಟ್ ಯೂನಿಟ್‌ಗಳು, ನಿಯಂತ್ರಣ ಘಟಕಗಳು ಮತ್ತು ವಿವಿಪ್ಯಾಟ್‌ಗಳು ಎಲ್ಲ ರೀತಿಯ ಪರಿಶೀಲನೆಯಲ್ಲಿ ಪಾಸ್ ಆಗಿವೆ ಎಂದು ಆಯೋಗ ತಿಳಿಸಿದೆ.
2024 ರ ರಾಜ್ಯ ಚುನಾವಣೆಯಲ್ಲಿ ಸೋತಿದ್ದ ಹತ್ತು ಅರ್ಜಿದಾರರಲ್ಲಿ ಎಂಟು ಮಂದಿ ಪರಿಶೀಲನೆಗೆ ಹಾಜರಿದ್ದರು. 48 ಬ್ಯಾಲೆಟ್ ಯೂನಿಟ್‌ಗಳು, 31 ಕಂಟ್ರೋಲ್ ಯೂನಿಟ್‌ಗಳು ಮತ್ತು 31 ವಿವಿಪ್ಯಾಟ್‌ಗಳಲ್ಲಿ ಪರಿಶೀಲನೆ ನಡೆಸಲಾಯಿತು. ತಯಾರಕ ECIL (ಎಲೆಕ್ಟ್ರಾನಿಕ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್) ನ ಅಧಿಕೃತ ಎಂಜಿನಿಯರ್‌ಗಳು ಪರಿಶೀಲನೆ ನಡೆಸಿದರು.