ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದಿನಿಂದ ಬೆಂಗಳೂರಿನಲ್ಲಿ ಪರಿಷ್ಕೃತ ಆಟೋ ಪ್ರಯಾಣ ದರ ಏರಿಕೆ ಜಾರಿ ಆಗಲಿದೆ. ಆ ಮೂಲಕ ಸಿಲಿಕಾನ್ ಸಿಟಿ ಜನರಿಗೆ ದರ ಏರಿಕೆ ಬಿಸಿ ತಟ್ಟಲಿದೆ.
ಮಿನಿಮಮ್ ಆಟೋ ಪ್ರಯಾಣ ದರ 30ರಿಂದ 36 ರೂಪಾಯಿ ಏರಿಕೆ ಆಗಿದ್ದು, ನಂತರದ ಪ್ರತಿ ಕಿ.ಮೀ.ಗೆ 18 ರೂಪಾಯಿ ನಿಗದಿ ಮಾಡಲಾಗಿದೆ. ಎರಡು ಕಿ.ಮೀ. ಮಿನಿನಮ್ ದರ 6 ರೂಪಾಯಿಗೆ ಹೆಚ್ಚಿಸಲಾಗಿದೆ.
ರಾತ್ರಿ 10 ರಿಂದ ಬೆಳಗ್ಗೆ 5ರವರೆಗೆ ಒನ್ ಆ್ಯಂಡ್ ಆಫ್ ಚಾರ್ಜ್ (ಸಾಮಾನ್ಯ ದರ+ಸಾಮಾನ್ಯ ದರದ ಅರ್ಧಪಟ್ಟು ಹೆಚ್ಚು ) ಮಾಡಲಾಗುವುದು.