Anti Aging Foods | 40 ವರ್ಷದ ನಂತರವೂ ನೀವು ಯಂಗ್ ಆಗಿ ಕಾಣಬೇಕು ಅಂದ್ರೆ ಈ ಆಹಾರಗಳನ್ನು ಮಿಸ್ ಮಾಡ್ಬೇಡಿ!

ಮನುಷ್ಯನ ದೇಹದಲ್ಲಿ ವಯಸ್ಸು ಹೆಚ್ಚಾದಂತೆ, ಅದರ ಪರಿಣಾಮಗಳು ಚರ್ಮದಲ್ಲಿ ಸ್ಪಷ್ಟವಾಗಿ ಕಾಣಿಸಿಕೊಳ್ಳುತ್ತವೆ. 40ರ ನಂತರ ಚರ್ಮದಲ್ಲಿ ಸುಕ್ಕುಗಳು, ಮೃದುವಾದ ರೇಖೆಗಳು ಹಾಗೂ ಉಜ್ವಲತೆಯ ಕೊರತೆ ಕಾಣಿಸಿಕೊಳ್ಳುವುದು ಸಾಮಾನ್ಯ. ಈ ಸ್ಥಿತಿಯನ್ನು ಕಡಿಮೆ ಮಾಡುವುದು ಕೇವಲ ಹೊರಗಿನಿಂದ ಮಾತ್ರವಲ್ಲ, ಆಹಾರ ಶೈಲಿಯಲ್ಲಿ ಬದಲಾವಣೆ ಮಾಡುವುದು ಬಹುಮುಖ್ಯ. ಹೀಗಾಗಿ ಈ 5 ಆ್ಯಂಟಿ ಏಜಿಂಗ್ ಆಹಾರಗಳನ್ನು ನಿಮ್ಮ ದೈನಂದಿನ ಆಹಾರದಲ್ಲಿ ಸೇರಿಸಿ.

ಪಪ್ಪಾಯಿ – ಚರ್ಮದ ಸ್ಥಿತಿಸ್ಥಾಪಕತೆ ಮತ್ತು ಹೊಳೆಯಲು ಸಹಾಯ ಮಾಡುತ್ತದೆ:
ಪಪ್ಪಾಯಿಯಲ್ಲಿ ವಿಟಮಿನ್ ಎ, ಸಿ ಮತ್ತು ಇ ಹೆಚ್ಚಿದ್ದು, ಚರ್ಮದ elasticity ಉಳಿಸಲು ಸಹಾಯ ಮಾಡುತ್ತದೆ. ಇದರಲ್ಲಿರುವ ಪೆಪೈನ್ ಎಂಬ ಎಂಜೈಮ್ ಚರ್ಮದ ಮೇಲಿನ ಮೃತಕೋಶಗಳನ್ನು ತೆಗೆದುಹಾಕಿ ಹೊಸ ಚರ್ಮವನ್ನು ಉಂಟುಮಾಡಲು ಸಹಕಾರಿಯಾಗುತ್ತದೆ. ದಿನವೂ ಬೆಳಗಿನ ಉಪಾಹಾರದಲ್ಲಿ ಪಪ್ಪಾಯಿ ಸೇವಿಸಿದರೆ, ಚರ್ಮದ ಜೋತಿ ಉಳಿಯುತ್ತದೆ.

Ripe papaya fruit in a basket holding by woman hand Ripe papaya fruit in a basket holding by woman hand, Tropical fruit appaya stock pictures, royalty-free photos & images

ಬೆರಿಹಣ್ಣುಗಳು – ಶಕ್ತಿ ತುಂಬಿದ ಆಂಟಿಆಕ್ಸಿಡೆಂಟ್‌ಗಳ ತಾಣ:
ಸ್ಟ್ರಾಬೆರಿ, ಬ್ಲೂಬೆರಿ, ರಾಸ್ಪ್ಬೆರಿ ಮೊದಲಾದ ಬೆರಿಹಣ್ಣುಗಳಲ್ಲಿ ಆಂಥೋಸಯಾನಿನ್, ವಿಟಮಿನ್ ಸಿ ಮತ್ತು ಇ ಇರುತ್ತದೆ. ಈ ಫಲಗಳು ಚರ್ಮವನ್ನು ಸೂರ್ಯನ ಕಿರಣಗಳು ಹಾಗೂ ಮಾಲಿನ್ಯದಿಂದ ರಕ್ಷಿಸಿ, ಆಂಟಿಏಜಿಂಗ್ ಪರಿಣಾಮವನ್ನು ತಡೆಯುತ್ತವೆ.

different berries in bowl. Ripe sweet different berries in red bowl on rustic wooden table. Harvest Concept berries stock pictures, royalty-free photos & images

ಬ್ರೊಕೊಲಿ – ಕಾಲಜನ್ ಹೆಚ್ಚಿಸಲು ಪ್ರಮುಖ:
ಬ್ರೊಕೊಲಿ ಒಂದೇ ಸಮಯದಲ್ಲಿ ವಿಟಮಿನ್ ಸಿ, ಕೇ, ಫೈಬರ್ ಹಾಗೂ ಆಂಟಿಆಕ್ಸಿಡೆಂಟ್‌ಗಳಿಂದ ಕೂಡಿದೆ. ಈ ತರಕಾರಿಯು ದೇಹದಲ್ಲಿ ಕಾಲಜನ್ ಉತ್ಪಾದನೆಗೆ ಪ್ರೇರಣೆ ನೀಡುತ್ತದೆ, ಇದು ಚರ್ಮದ ಗಟ್ಟಿತನವನ್ನು ಉಳಿಸಲು ಬಹುಪಾಲು ಪಾತ್ರವಹಿಸುತ್ತದೆ.

Fresh raw green broccoli in bowl Fresh raw green broccoli in bowl on rustic wooden background broccoli stock pictures, royalty-free photos & images

ಪಾಲಕ್ ಸೊಪ್ಪು – ಚರ್ಮಕ್ಕೂ ಕೂದಲಿಗೂ ಉತ್ತಮ ಆಹಾರ:
ಪಾಲಕ್ ಸೊಪ್ಪಿನಲ್ಲಿ ವಿಟಮಿನ್ ಎ, ಸಿ, ಕೆ, ಮತ್ತು ಐರನ್ ಹಾಗೂ ಮೆಗ್ನೆಶಿಯಂ ಇರುತ್ತದೆ. ಇದು ಚರ್ಮವನ್ನು ತೇವವಾಗಿ, ಮೃದುವಾಗಿ ಕಾಯ್ದುಕೊಳ್ಳುತ್ತೆ. ಜೊತೆಗೆ ಕೂದಲು ಸ್ಟ್ರಾಂಗ್ ಆಗಿರಲು ಸಹಾಯ ಮಾಡುತ್ತದೆ.

A Fresh Spinach Leaves (Palak) on wooden table Close-up shot of fresh green spinach leaves, commonly known as palak in India. Ideal for food, health, and organic lifestyle themes. palak stock pictures, royalty-free photos & images

ಬಾದಾಮಿ – ವಿಟಮಿನ್ ಇಯ ಶ್ರೇಷ್ಠ ಮೂಲ:
ಪ್ರತಿದಿನ 4-5 ಬಾದಾಮಿ ತಿನ್ನುವುದರಿಂದ ವಿಟಮಿನ್ ಇ ಲಭ್ಯವಾಗುತ್ತದೆ. ಇದು ಚರ್ಮವನ್ನು ತೇವಗೊಳಿಸಲು, ಸೌಂದರ್ಯವನ್ನು ಉಳಿಸಿಕೊಳ್ಳಲು, ಹಾಗೂ ಸೂರ್ಯನ ಕಿರಣಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ.

Almond Almond. almonds stock pictures, royalty-free photos & images

ಈ ಆಹಾರಗಳ ಸೇವನೆ ದೈನಂದಿನ ಜೀವನಶೈಲಿಯಲ್ಲಿ ಕೇವಲ ಆರೋಗ್ಯವಂತರಾಗಿ ಇರಲು ಮಾತ್ರವಲ್ಲದೆ, ಯವ್ವನದಿಂದ ಕೂಡಿರುವ ಚರ್ಮವನ್ನು ಪಡೆಯಲು ಸಹ ಸಹಕಾರಿಯಾಗುತ್ತದೆ. ಹೊರಗಿನ ಕ್ರೀಮ್‌ಗಿಂತ ಒಳಗಿನ ಆಹಾರ ಕ್ರಮ ಹೆಚ್ಚು ಪರಿಣಾಮಕಾರಿಯಾಗಿದೆ ಎಂಬುದನ್ನು ಮರೆಯಬೇಡಿ.(Disclaimer: ಈ ಲೇಖನವು ಸಾರ್ವಜನಿಕ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಯಾಧಾರಿತವಾಗಿದೆ.)

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!