ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟಿ ಭಾವನಾ ರಾಮಣ್ಣ ಅಮ್ಮನಾಗುತ್ತಿರುವ ಸಂತಸದಲ್ಲಿದ್ದಾರೆ. ಅವರು ಏಳು ತಿಂಗಳ ಗರ್ಭಿಣಿಯಾಗಿದ್ದು ಸೀಮಂತ ಶಾಸ್ತ್ರ ಅದ್ದೂರಿಯಾಗಿ ನಡೆದಿದೆ.
IVF ಮೂಲಕ ಗರ್ಭಿಣಿಯಾಗಿರುವ ಭಾವನಾ ಅವಳಿ ಮಕ್ಕಳಿಗೆ ಶೀಘ್ರದಲ್ಲೇ ಜನ್ಮ ನೀಡಲಿದ್ದಾರೆ. ಸೀಮಂತಕ್ಕೆ ಭಾವನಾ ಹಸಿರು ಬಣ್ಣದ ಸೀರೆ ಧರಿಸಿದ್ದರು. ಈ ಕಾರ್ಯಕ್ರಮಕ್ಕೆ ಚಿತ್ರರಂಗದ ಕೆಲವೇ ಆಪ್ತರು, ಕುಟುಂಬಸ್ಥರು ಹಾಗೂ ಸ್ನೇಹಿತೆಯರನ್ನು ಮಾತ್ರ ಆಹ್ವಾನಿಸಿದ್ದರು. ಸರಳವಾಗಿ ನಡೆದರೂ ಸಂಪ್ರದಾಯದ ಪ್ರಕಾರ ಸೀಮಂತ ನಡೆದಿದೆ. ಮತ್ತೈದೆಯರು ಭಾವನಾಗೆ ಮಡಿಲು ತುಂಬುವ ಶಾಸ್ತ್ರ ಮಾಡಿ ಸಿಹಿ ತಿನ್ನಿಸಿದ್ದಾರೆ.