ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತದಾದ್ಯಂತ ಫಾಸ್ಟ್ಸ್ಟ್ಯಾಗ್ ವಹಿವಾಟಿನಲ್ಲಿ ತಮಿಳುನಾಡು ಮುಂಚೂಣಿಯಲ್ಲಿದೆ. ಲೋಕಸಭೆಯಲ್ಲಿ ಮಂಡಿಸಿದ ಮಾಹಿತಿ ಪ್ರಕಾರ, 2022ರಿಂದ 2025ರ ಜೂನ್ ವರೆಗೆ 1.26 ಬಿಲಿಯನ್ (126 ಕೋಟಿ) ವಹಿವಾಟು ನಡೆಸುವ ಮೂಲಕ ತಮಿಳುನಾಡು ಅಗ್ರಸ್ಥಾನ ಕಾಯ್ದುಕೊಂಡಿದೆ.
ಇದೇ ಅವಧಿಯಲ್ಲಿ ಉತ್ತರ ಪ್ರದೇಶ ಮತ್ತು ಕರ್ನಾಟಕ ಕ್ರಮವಾಗಿ 1.19 ಬಿಲಿಯನ್ (119 ಕೋಟಿ) ಹಾಗೂ ಹಾಗೂ 1.12 ಬಿಲಿಯನ್ (112 ಕೋಟಿ) ವಹಿವಾಟು ದಾಖಲಾಗಿದೆ. ರಾಜಸ್ಥಾನ ಮತ್ತು ಮಹಾರಾಷ್ಟ್ರದಲ್ಲಿ ಕ್ರಮವಾಗಿ 1 ಬಿಲಿಯನ್ (100 ಕೋಟಿ) ಮತ್ತು 919 ಮಿಲಿಯನ್ (91.9 ಕೋಟಿ) ವಹಿವಾಟು ಆಗಿದೆ.
ತಮಿಳುನಾಡಿನಲ್ಲಿ ವಾರ್ಷಿಕವಾಗಿ ಅತ್ಯಧಿಕ ಮೊತ್ತದ ವಹಿವಾಟು ನಡೆದರೆ, ಉತ್ತರ ಪ್ರದೇಶ ಮತ್ತು ಕರ್ನಾಟಕ ರಾಜ್ಯಗಳಲ್ಲಿ ವೇಗದ ಬೆಳವಣಿಗೆಯಾಗಿದೆ. ಉದಾಹರಣೆಗೆ ಕರ್ನಾಟಕದಲ್ಲಿ 2022ರಿಂದ 2024ರವರೆಗಿನ ವಹಿವಾಟಿನಲ್ಲಿ ಶೇ.28.7ರಷ್ಟು ಹೆಚ್ಚಳ ಆಗಿದೆ.