ಹೊಸದಿಗಂತ ಡಿಜಿಟಲ್ ಡೆಸ್ಕ್:
Boycott Turkey ಅಭಿಯಾನ ಯಶಸ್ವಿಯಾಗಿದ್ದು ಟರ್ಕಿಗೆ ಭೇಟಿ ನೀಡುವ ಭಾರತೀಯ ಪ್ರವಾಸಿಗರ ಸಂಖ್ಯೆ ಇಳಿಕೆಯಾಗಿದೆ.
ಆಪರೇಷನ್ ಸಿಂಧೂರ ಕಾರ್ಯಾಚರಣೆ ವೇಳೆ ಪಾಕಿಸ್ತಾನವನ್ನು ಬೆಂಬಲಿಸಿದ್ದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಬಾಯ್ಕಾಟ್ ಟರ್ಕಿ ಅಭಿಯಾನವನ್ನು ಆರಂಭಿಸಲಾಗಿದೆ. ಪರಿಣಾಮ ಜೂನ್ ತಿಂಗಳಿನಲ್ಲಿ ಟರ್ಕಿಗೆ ತೆರಳುವ ಭಾರತೀಯ ಸಂಖ್ಯೆ 37% ಕಡಿಮೆಯಾಗಿದೆ.
ಸಾಮಾನ್ಯವಾಗಿ ಜೂನ್ ತಿಂಗಳಿನಲ್ಲಿ ಟರ್ಕಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಾರತೀಯರು ಭೇಟಿ ನೀಡುತ್ತಾರೆ. ಟರ್ಕಿಯ ಅಧಿಕೃತ ಪ್ರವಾಸೋದ್ಯಮ ಅಂಕಿಅಂಶಗಳ ಪ್ರಕಾರ, ಜೂನ್‌ನಲ್ಲಿ ಕೇವಲ 24,250 ಭಾರತೀಯರು ಭೇಟಿ ನೀಡಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ 37% ಇಳಿಕೆಯಾಗಿದೆ.