ಹೀರೆಕಾಯಿ ಎಲ್ಲರ ಮನೆಗೆ ಸಾಮಾನ್ಯವಾಗಿ ಪಲ್ಯ ಅಥವಾ ಸಾಂಬಾರ್ ಮಾಡಲು ಬಳಕೆಯಾಗುತ್ತದೆ. ಆದರೆ ಇದೇ ಹೀರೆಕಾಯಿಯಿಂದ ಬಿಸಿಬಿಸಿ, ರುಚಿಕರವಾದ ದೋಸೆ ತಯಾರಿಸಬಹುದೆಂಬುದು ಬಹುತೇಕರಿಗೆ ಗೊತ್ತಿಲ್ಲ. ಹೌದು, ಬೆಳಗಿನ ಉಪಹಾರಕ್ಕೆ ಕೆಲವೊಮ್ಮೆ ಪೌಷ್ಟಿಕವಾಗಿರುವ ಹೀರೆಕಾಯಿ ದೋಸೆ ವಿಭಿನ್ನ ರುಚಿ ನೀಡಬಲ್ಲದು. ನೀವು ಒಮ್ಮೆ ಟ್ರೈ ಮಾಡಿ.
ಬೇಕಾಗುವ ಪದಾರ್ಥಗಳು:
ಹೀರೆಕಾಯಿ 1 ಕಪ್
ಅಕ್ಕಿ -2 ಚಮಚ
ಉದ್ದಿನ ಬೇಳೆ- 2 ಚಮಚ
ಮೆಂತ್ಯೆ – 2 ಚಮಚ
ಒಣಮೆಣಸಿನಕಾಯಿ -2
ತೆಂಗಿನಕಾಯಿ- ಅರ್ಧ ಕಪ್
ದನಿಯಾ – 1 ಚಮಚ
ಜೀರಿಗೆ – 1 ಚಮಚ
ಬೆಲ್ಲ- ಸ್ವಲ್ಪ
ಹುಣಸೆಹಣ್ಣು- ಸ್ವಲ್ಪ
ಅರಿಶಿಣ – ಅರ್ಧ ಟೀ ಸ್ಪೂನ್
ರುಚಿಗೆ ತಕ್ಕಷ್ಟು ಉಪ್ಪು
ಅಡುಗೆ ಎಣ್ಣೆ- 1 ಸ್ಪೂನ್
ಮಾಡುವ ವಿಧಾನ:
ಮೊದಲಿಗೆ ಒಂದು ದೊಡ್ಡ ಬಟ್ಟಲಿನಲ್ಲಿ ಅಕ್ಕಿ, ಉದ್ದಿನಬೇಳೆ, ಮೆಂತ್ಯೆ ಮತ್ತು ಒಣ ಮೆಣಸಿನಕಾಯಿಯನ್ನು ನಾಲ್ಕು ಗಂಟೆಗಳ ಕಾಲ ನೆನೆಸಿಡಿ. ನಂತರ ನೀರು ಬಸಿದು ಮಿಕ್ಸಿಗೆ ಹಾಕಿ. ಇದರೊಂದಿಗೆ ತೆಂಗಿನಕಾಯಿ, ಧನಿಯಾ, ಜೀರಿಗೆ, ಬೆಲ್ಲ, ಹುಣಸೆಹಣ್ಣು, ಅರಿಶಿಣ ಮತ್ತು ಉಪ್ಪು ಸೇರಿಸಿ. ಸ್ವಲ್ಪ ನೀರು ಹಾಕಿ ಈ ಮಿಶ್ರಣವನ್ನು ನಯವಾಗಿ ರುಬ್ಬಿಕೊಳ್ಳಿ. ಹೀಗೆ ತಯಾರಾದ ಹಿಟ್ಟನ್ನು ಬಟ್ಟಲಿನಲ್ಲಿ ತೆಗೆಯಿಡಿ.
ಈಗ ಹೀರೆಕಾಯಿಯನ್ನು ಚೆನ್ನಾಗಿ ತೊಳೆದು ಸಿಪ್ಪೆ ತೆಗೆದು, ಸ್ಲೈಸ್ ಆಗಿ ಕತ್ತರಿಸಿಕೊಳ್ಳಿ. ತವಾ ಮೇಲೆ ಎಣ್ಣೆ ಹಾಕಿ ಹೀರೆಕಾಯಿ ಹೋಳನ್ನು ಹಿಟ್ಟಿನಲ್ಲಿ ಮುಳುಗಿಸಿ ತವೆಯ ಮೇಲೆ ವೃತ್ತಾಕಾರವಾಗಿ ಹಾಕಿ. ಇದರ ಮೇಲೆ ಸ್ವಲ್ಪ ಎಣ್ಣೆ ಸುರಿದು ಎರಡೂ ಬದಿಯಿಂದ ಬೇಯಿಸಿಕೊಳ್ಳಿ.
ಹೀಗೆ ತಯಾರಾದ ಬಿಸಿಬಿಸಿ ಹೀರೆಕಾಯಿ ದೋಸೆ ಚಟ್ನಿ ಅಥವಾ ಹುಳಿಯೊಂದಿಗೆ ಸವಿದರೆ ಅದ್ಭುತವಾಗಿರುತ್ತದೆ.