ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯ ಸರ್ಕಾರದ ವಿರುದ್ಧ ಸಮರ ಸಾರಿರುವ ಸಾರಿಗೆ ನೌಕರರು ಆ. 5ನೇ ತಾರೀಖು ಬಂದ್ ಮಾಡೇ ಮಾಡುತ್ತೇವೆ ಎಂದು ಪಟ್ಟು ಹಿಡಿದಿದ್ದಾರೆ, ಇತ್ತ ಸಿಎಂ ಸಿದ್ದರಾಮಯ್ಯ ರಾಹುಲ್ ಗಾಂಧಿ ಪ್ರತಿಭಟನೆ ಸಮಾವೇಶದಲ್ಲಿ ಬ್ಯುಸಿಯಾಗಿದ್ದಾರೆ.
ಈ ಮಧ್ಯೆ ಇಂದು ಮುಷ್ಕರದಿಂದ ಮನವೊಲಿಸುವ ನಿಟ್ಟಿನಲ್ಲಿ ಸಾರಿಗೆ ಮುಖಂಡರ ಜೊತೆ ಕೊನೆ ಹಂತದ ಹೈವೋಲ್ಟೇಜ್ ಸಭೆ ನಡೆಯಲಿದೆ.
ಆಗಸ್ಟ್ 4ರ ತನಕ ಸರ್ಕಾರಕ್ಕೆ ಡೆಡ್‌ಲೈನ್ ನೀಡಿದ್ದು, ಡೆಡ್‌ಲೈನ್ ಮುಕ್ತಾಯಕ್ಕೆ ಇನ್ನೆರಡೇ ದಿನ ಮಾತ್ರ ಬಾಕಿ ಇದ್ದು ಸಮಸ್ಯೆ ಸಂಬಂಧ ಸಭೆ ಕರೆದು ಸಾರಿಗೆ ಮುಖಂಡರ ಜೊತೆ ಮಾತನಾಡಬೇಕಿದ್ದ ಸಿಎಂ ರಾಹುಲ್ ಗಾಂಧಿ ಪ್ರತಿಭಟನೆಯಲ್ಲಿ ಬ್ಯುಸಿಯಾಗಿದ್ದು, ಮುಷ್ಕರ ಆರಂಭವಾಗೇ ಬಿಡುತ್ತಾ ಅನ್ನೋ ಟೆನ್ಷನ್ ಇದೀಗ ಹೆಚ್ಚಾಗಿದೆ.