ಇತ್ತೀಚಿನ ದಿನಗಳಲ್ಲಿ ಚಿಕ್ಕ ವಯಸ್ಸಿನಲ್ಲೇ ಕೂದಲು ಬಿಳಿಯಾಗುವುದು ಸಾಮಾನ್ಯ ಸಮಸ್ಯೆ. ಆಹಾರ ಪದ್ಧತಿ, ತೀವ್ರ ಒತ್ತಡ, ಹೊತ್ತಿಗೆ ನಿದ್ರೆ ಇಲ್ಲದಿರುವುದು, ಹಾಗೂ ರಾಸಾಯನಿಕ ಶಾಂಪೂಗಳು ಇದರ ಪ್ರಮುಖ ಕಾರಣಗಳಾಗಿವೆ. ಹಲವರು ಈ ಬಿಳಿ ಕೂದಲನ್ನು ಮರೆಮಾಚಲು ಬಣ್ಣ ಬಳಸುತ್ತಾರೆ. ಆದರೆ ಇದರಿಂದ ತಾತ್ಕಾಲಿಕ ಪರಿಹಾರ ಸಿಕ್ಕರೂ, ಮುಂದೆ ನಕಾರಾತ್ಮಕ ಪರಿಣಾಮಗಳು ಎದುರಾಗಬಹುದು.
ಈ ರೀತಿಯ ಸಮಸ್ಯೆಗೆ ನೈಸರ್ಗಿಕ ಪರಿಹಾರವಾಗಿ ಸಾಸಿವೆ ಎಣ್ಣೆ ಅತ್ಯುತ್ತಮ ಆಯ್ಕೆ. ಇದರೊಂದಿಗೆ ಮೆಂತ್ಯ ಹಾಗೂ ಒಣ ನೆಲ್ಲಿಕಾಯಿ ಮಿಶ್ರಣ ಮಾಡುವ ಮೂಲಕ ಕೂದಲಿಗೆ ಬೇಕಾದ ಪೌಷ್ಟಿಕಾಂಶವನ್ನು ಒದಗಿಸಬಹುದು. ಇದರ ಸೇವನೆಯಿಂದ ಕೂದಲು ಕೇವಲ ಕಪ್ಪಾಗುವುದಷ್ಟೇ ಅಲ್ಲ, ದಪ್ಪವಾಗಿಯೂ ಬೆಳೆಯುತ್ತದೆ.
ಎಣ್ಣೆ ತಯಾರಿಸುವ ವಿಧಾನ:
ಮೊದಲು ಒಣ ಆಮ್ಲಾ (ನೆಲ್ಲಿಕಾಯಿ) ಹಾಗೂ ಮೆಂತ್ಯ ಬೀಜಗಳನ್ನು ಪುಡಿಮಾಡಿ. ಈ ಮಿಶ್ರಣವನ್ನು ಶುದ್ಧ ಸಾಸಿವೆ ಎಣ್ಣೆಯಲ್ಲಿ ಹಾಕಿ, ಹತ್ತು ಹದಿನೈದು ದಿನಗಳ ಕಾಲ ಹಾಗೆಯೆ ಬಿಡಬೇಕು. ಬಳಿಕ ಈ ಎಣ್ಣೆಯನ್ನು ಕಬ್ಬಿಣದ ಪಾತ್ರೆಯಲ್ಲಿ ತೀವ್ರ ತಾಪದಲ್ಲಿ ಕುದಿಸಿ, ತಣ್ಣಗಾದ ಮೇಲೆ ಶುದ್ಧ ಬಾಟಲಿಯಲ್ಲಿ ಸಂಗ್ರಹಿಸಿಕೊಳ್ಳಿ.
ಬಳಕೆ ಮಾಡುವ ವಿಧಾನ:
ಈ ಎಣ್ಣೆಯನ್ನು ಪ್ರತಿದಿನ ರಾತ್ರಿ ಮಲಗುವ ಮೊದಲು ಕೂದಲಿಗೆ ಹಚ್ಚಿ, ತಲೆ ಚಚ್ಚಿ ಮಸಾಜ್ ಮಾಡಬೇಕು. ಮರುದಿನ ಬೆಳಿಗ್ಗೆ ಸೌಮ್ಯ ಶಾಂಪೂ ಬಳಸಿ ತೊಳೆಯುವುದು ಉತ್ತಮ. ಕೆಲವು ದಿನಗಳ ಬಳಸಿದ ಬಳಿಕ ಕೂದಲು ನೈಸರ್ಗಿಕವಾಗಿ ಗಟ್ಟಿಯಾಗುವುದರೊಂದಿಗೆ ಬಿಳಿತನವು ಕಡಿಮೆಯಾಗತೊಡಗುತ್ತದೆ.