Do You Know | ಆತ್ಮಕ್ಕೂ ತೂಕವಿದೆಯಾ? ಇದ್ರೆ ಎಷ್ಟಿರುತ್ತೆ? ವೈಜ್ಞಾನಿಕ ಅಧ್ಯಯನ ಈ ಬಗ್ಗೆ ಏನ್ ಹೇಳುತ್ತೆ ಗೊತ್ತ?

ಜೀವ ಎಂದರೇನು? ಅದು ದೇಹವನ್ನು ಹೇಗೆ ಪ್ರವೇಶಿಸುತ್ತದೆ ಮತ್ತು ಹೊರಗೆ ಬರುವ ವಿಧಾನವೇನು ಎಂಬ ಪ್ರಶ್ನೆಗಳು ಇಂದಿಗೂ ವೈಜ್ಞಾನಿಕವಾಗಿ ಪೂರ್ಣ ಉತ್ತರ ಸಿಕ್ಕಿಲ್ಲ. ಆದರೆ ಕೆಲ ವಿಜ್ಞಾನಿಗಳು ಈ ವಿಷಯವನ್ನು ಗಂಭೀರವಾಗಿ ಪರಿಶೀಲಿಸಲು ಪ್ರಯತ್ನಿಸಿದ್ದಾರೆ. ತಮ್ಮ ಅಧ್ಯಯನಗಳಲ್ಲಿ ಆತ್ಮಕ್ಕೂ ತೂಕವಿದೆ ಎಂಬ ನಿರ್ಧಾರಕ್ಕೆ ಬರುತ್ತಿರುವ ವಿವರಗಳು ಇತ್ತೀಚೆಗೆ ಮತ್ತೆ ಚರ್ಚೆಗೆ ಕಾರಣವಾಗಿವೆ.

1907ರಲ್ಲಿ ಅಮೆರಿಕದ ವೈದ್ಯ ಡಂಕನ್ ಮೆಕ್‌ಡೌಗಲ್ ನೇತೃತ್ವದಲ್ಲಿ ಆಸಕ್ತಿದಾಯಕ ಪ್ರಯೋಗ ನಡೆಯಿತು. ಈ ಪ್ರಯೋಗದಲ್ಲಿ ಅವರು ಸಾಯುತ್ತಿರುವ 6 ಜನ ರೋಗಿಗಳನ್ನು ತೂಕದ ಮಾಪಕದ ಮೇಲೆ ಇಟ್ಟು, ಸಾವಿಗೆ ಮೊದಲು ಮತ್ತು ನಂತರದ ತೂಕದಲ್ಲಿ ವ್ಯತ್ಯಾಸವನ್ನು ಅಳೆಯುವ ಪ್ರಯತ್ನ ನಡೆಸಿದರು. ಈ ಪರೀಕ್ಷೆಯಲ್ಲಿ ಕಂಡುಬಂದದ್ದು ಅಚ್ಚರಿ ಮೂಡಿಸುವಂತಿತ್ತು—ಒಬ್ಬ ವ್ಯಕ್ತಿಯ ತೂಕ ಸಾವಿನ ನಂತರ ಸುಮಾರು 21 ಗ್ರಾಂ ಇಳಿಯುತ್ತಿತ್ತು.

ಡಂಕನ್ ಅವರು ಈ ವ್ಯತ್ಯಾಸವನ್ನು ಆತ್ಮ ದೇಹವನ್ನು ತೊರೆದ ಪರಿಣಾಮವೆಂದು ವ್ಯಾಖ್ಯಾನಿಸಿದರು. ಅವರು ಹೇಳುವುದಾದರೆ, ಸಾವಿನ ಕ್ಷಣದಲ್ಲಿ ಆತ್ಮ ದೇಹದಿಂದ ಹೊರ ಹೋಗುತ್ತದೆ, ಮತ್ತು ಅದು ದೇಹದಲ್ಲಿ ಇರುತ್ತಿದ್ದಾಗ 21 ಗ್ರಾಂ ತೂಕವನ್ನು ಹೊಂದಿರಬಹುದು ಎಂಬ ನಂಬಿಕೆ ಅವರಲ್ಲಿ ಬಲವಾಗಿ ಮೂಡಿತ್ತು.

ಆಧ್ಯಾತ್ಮಿಕ ದೃಷ್ಟಿಯಿಂದ ಆತ್ಮ ಶಾಶ್ವತವಾದುದು, ಮೃತ ದೇಹ ಮಾತ್ರ ನಾಶವಾಗುತ್ತದೆ ಎಂಬ ನಂಬಿಕೆ ಎಲ್ಲ ಧರ್ಮಗಳಲ್ಲಿ ಕಂಡುಬರುತ್ತದೆ. ಆದರೆ ವಿಜ್ಞಾನ ಈ ನಂಬಿಕೆಯನ್ನು ಪೂರಕಮಾಡಲು ಸಾಕಷ್ಟು ಪುರಾವೆ ಒದಗಿಸಿಲ್ಲ. ಈ ಪ್ರಯೋಗಕ್ಕೆ ಹಲವು ವೈಜ್ಞಾನಿಕ ಸಮುದಾಯಗಳಿಂದ ಆಕ್ಷೇಪಗಳೂ ಬಂದಿವೆ.

ಅದರ “ಆತ್ಮಕ್ಕೆ ತೂಕವಿದೆಯೇ?” ಎಂಬ ಪ್ರಶ್ನೆ ಇನ್ನೂ ಕುತೂಹಲಕಾರಿಯಾಗಿದೆ. 21 ಗ್ರಾಂ ಎಂಬ ಅಂಕಿ ಇಂದು ‘ಆತ್ಮದ ತೂಕ’ ಎಂಬ ಕಲ್ಪನೆಯ ಸಂಕೇತವಾಗಿದ್ದು, ಹಲವರಲ್ಲಿ ಭವಿಷ್ಯದ ಅಧ್ಯಯನಗಳಿಗೆ ಪ್ರೇರಣೆಯಾಗಿದೆ. ಆದರೆ ಇದೆ ಎಷ್ಟು ನಿಜ ಎಂಬುದು ಇನ್ನು ತಿಳಿದಿಲ್ಲ. (Disclaimer: ಈ ಲೇಖನವು ಸಾರ್ವಜನಿಕ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಯಾಧಾರಿತವಾಗಿದೆ.)

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Logged in as Ashika HD. Log out?

Please enter your comment!

error: Content is protected !!