Why So | ಟೀ ಕಾಫಿ ಕುಡಿಯೋ ಮುಂಚೆ ನೀರು ಕುಡಿಬೇಕಂತೆ ಯಾಕೆ ಗೊತ್ತ?

ಬೆಳಿಗ್ಗೆ ಎದ್ದ ತಕ್ಷಣ ಹೆಚ್ಚಿನವರು ಮೊದಲು ಟೀ ಅಥವಾ ಕಾಫಿಯನ್ನು ತೆಗೆದುಕೊಳ್ಳುವುದು ಸಾಮಾನ್ಯ. ಇದು ವರ್ಷಗಳಿಂದಲೂ ಪಾಲಿಸಲಾಗುತ್ತಿರುವ ಒಂದು ದೈನಂದಿನ ಅಭ್ಯಾಸ. ಆದರೆ ಖಾಲಿ ಹೊಟ್ಟೆಯಲ್ಲಿ ಟೀ ಅಥವಾ ಕಾಫಿ ಕುಡಿಯುವುದರಿಂದ ಆರೋಗ್ಯದ ಮೇಲೆ ಯಾವರೀತಿಯ ಪರಿಣಾಮ ಬೀರುತ್ತದೆ ಎಂಬ ಬಗ್ಗೆ ಬಹುತೆಕ ಜನರಿಗೆ ಗೊತ್ತಿಲ್ಲ.

ತಜ್ಞರ ಅಭಿಪ್ರಾಯದಂತೆ, ಟೀ ಮತ್ತು ಕಾಫಿಯು ಆಮ್ಲೀಯ ಸ್ವಭಾವ ಹೊಂದಿದ್ದು, ಖಾಲಿ ಹೊಟ್ಟೆಯಲ್ಲಿ ಇವುಗಳನ್ನು ಸೇವಿಸಿದರೆ ಅಸಿಡಿಟಿ, ಜಠರದ ಉರಿ ಮತ್ತು ಹಜಮೆ ಸಮಸ್ಯೆಗಳನ್ನು ಉಂಟುಮಾಡಬಹುದು. ಟೀ ನ ph ಮೌಲ್ಯ ಸುಮಾರು 6 ಮತ್ತು ಕಾಫಿಯದ್ದು 5ರಷ್ಟು ಇದೆ. ಇದರಿಂದ ಹಸಿವಿನ ಹೊಟ್ಟೆಗೆ ಈ ಪಾನೀಯಗಳು ತೊಂದರೆಯ ಮೂಲವಾಗಬಹುದು ಎಂದು ಆರೋಗ್ಯ ತಜ್ಞರು ಎಚ್ಚರಿಸುತ್ತಿದ್ದಾರೆ.

ಇಂತಹ ಸಮಸ್ಯೆಗಳನ್ನು ತಪ್ಪಿಸಲು ಟೀ ಅಥವಾ ಕಾಫಿ ಕುಡಿಯುವ ಮೊದಲು ಒಂದು ಲೋಟ ತಣ್ಣನೆಯ ನೀರನ್ನು ಕುಡಿಯುವುದು ಉತ್ತಮ. ನೀರು ಕುಡಿಯುವುದರಿಂದ ಹೊಟ್ಟೆಯ ಆಮ್ಲ ಮಟ್ಟ ಸಮತೋಲನದಲ್ಲಿ ಇರುತ್ತದೆ, ದೇಹವು ಹೈಡ್ರೇಟ್ ಆಗುತ್ತದೆ ಮತ್ತು ಟೀ ಅಥವಾ ಕಾಫಿಯಿಂದ ಉಂಟಾಗುವ ಅಸಿಡಿಟಿಯನ್ನು ತಡೆಯಬಹುದು.

ಅಲ್ಲದೇ, ನೀರು ದೇಹದಲ್ಲಿನ ವಿಷಕಾರಕ ದ್ರವ್ಯಗಳನ್ನು ಹೊರಹಾಕಲು ಸಹಾಯ ಮಾಡುತ್ತದೆ. ದಿನವಿಡೀ ತಾಜಾ ಆಗಿರಲು ಸಹಕಾರಿ ಆಗುತ್ತದೆ. ಟೀ ಅಥವಾ ಕಾಫಿ ದೇಹವನ್ನು ನಿರ್ಜಲೀಕರಿಸುವ ಸ್ವಭಾವ ಹೊಂದಿರುವುದರಿಂದ, ಅದರ ಮೊದಲು ನೀರು ಸೇವಿಸುವುದು ಆರೋಗ್ಯಕ್ಕೆ ಬಹಳ ಮುಖ್ಯವಾಗಿದೆ.

ಆದ್ದರಿಂದ, ಪ್ರತಿದಿನವೂ ಟೀ ಅಥವಾ ಕಾಫಿ ಕುಡಿಯುವ ಮೊದಲು ಒಂದು ಲೋಟ ನೀರನ್ನು ಸೇವಿಸುವುದನ್ನು ವಾಡಿಕೆ ಮಾಡಿಕೊಂಡರೆ ದೀರ್ಘಕಾಲದ ಆರೋಗ್ಯ ಲಾಭ ಸಿಗಬಹುದು ಎಂದು ವೈದ್ಯರು ಸಲಹೆ ನೀಡುತ್ತಾರೆ. (Disclaimer: ಈ ಲೇಖನವು ಸಾರ್ವಜನಿಕ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಯಾಧಾರಿತವಾಗಿದೆ.)

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Logged in as Ashika HD. Log out?

Please enter your comment!

error: Content is protected !!