ಮಧ್ಯಾಹ್ನ ಊಟಕ್ಕೆ ದಕ್ಷಿಣ ಭಾರತೀಯ ಸ್ಟೈಲ್ “ಗ್ರೀನ್ ಚಿಲ್ಲಿ ಚಿಕನ್” ಮಾಡಿ ನೋಡಿ. ಕಡಿಮೆ ಸಮಯ, ಕಡಿಮೆ ಸಾಮಗ್ರಿಗಳಿಂದ ಮಾಡಬಹುದಾದ ಈ ಡಿಶ್‌ಗೆ ಮನೆಮಂದಿಯ ಮೆಚ್ಚುಗೆ ಸಿಗೋದು ಖಂಡಿತ.
ಬೇಕಾಗುವ ಸಾಮಗ್ರಿಗಳು
ಬೋನ್‍ಲೆಸ್ ಚಿಕನ್ – ಅರ್ಧ ಕೆ.ಜಿ
ಈರುಳ್ಳಿ – ಒಂದು
ಕೊತ್ತಂಬರಿ ಸೊಪ್ಪು – ಸ್ವಲ್ಪ
ಪುದಿನಾ – ಸ್ವಲ್ಪ
ಮೊಸರು – ಅರ್ಧ ಕಪ್
ಒಣಗಿದ ಮೆಂತ್ಯೆ ಎಲೆ ಪುಡಿ – ಒಂದು ಚಮಚ
ಹಸಿರು ಮೆಣಸಿನಕಾಯಿ – 10
ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 2 ಚಮಚ
ಚಕ್ಕೆ – 1
ಗರಂ ಮಸಾಲ ಪುಡಿ – 1 ಚಮಚ
ದನಿಯಾ ಪುಡಿ – 1 ಚಮಚ
ಜೀರಿಗೆ ಪುಡಿ – 1 ಚಮಚ
ಚಿಲ್ಲಿ ಪುಡಿ – ಅರ್ಧ ಚಮಚ
ಎಣ್ಣೆ -3-4 ಚಮಚ
ಉಪ್ಪು – ರುಚಿಗೆ ತಕ್ಕಷ್ಟು
ಮಾಡುವ ವಿಧಾನ:
ಮೊದಲು ಮಿಕ್ಸಿ ಜಾರಿಗೆ ಹಸಿರು ಮೆಣಸಿನಕಾಯಿ, ಪುದಿನಾ, ಕೊತ್ತಂಬರಿ ಸೊಪ್ಪು, ಮೊಸರು ಹಾಕಿ ನಯವಾಗಿ ರುಬ್ಬಿಕೊಳ್ಳಿ. ನಂತರ ಬಾಣಲೆಯಲ್ಲಿ ಎಣ್ಣೆ ಹಾಕಿ ಅದರಲ್ಲಿ ಚಕ್ಕೆ ಹಾಗೂ ಈರುಳ್ಳಿಯನ್ನು ಹುರಿಯಿರಿ. ಬೋನ್‌ಲೆಸ್ ಚಿಕನ್ ಹಾಕಿ ಗೋಲ್ಡನ್ ಬಣ್ಣ ಬರೋವರೆಗೆ ಫ್ರೈ ಮಾಡಿ.
ಇದಕ್ಕೆ ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಗರಂ ಮಸಾಲಾ, ಧನಿಯಾ, ಜೀರಿಗೆ, ಚಿಲ್ಲಿ ಪುಡಿ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಈಗ ರುಬ್ಬಿದ ಮಸಾಲಾ ಮತ್ತು ಸ್ವಲ್ಪ ನೀರು ಸೇರಿಸಿ, ಉಪ್ಪು ಹಾಕಿ 4-5 ನಿಮಿಷ ಮುಚ್ಚಿ ಬೇಯಿಸಿ. ಕೊನೆಗೆ ಒಣಗಿದ ಮೆಂತ್ಯೆ ಎಲೆ ಪುಡಿ ಹಾಕಿದರೆ ರುಚಿಕರ ಗ್ರೀನ್ ಚಿಕನ್ ಫ್ರೈ ರೆಡಿ.