Gastric Problem | ನಿಮಗೆ ಗ್ಯಾಸ್ಟ್ರಿಕ್ ಸಮಸ್ಯೆ ಇದ್ಯಾ? ಹಾಗಿದ್ರೆ ಈ ಆಹಾರಗಳನ್ನು ತಿನ್ನೋದನ್ನು ಇವತ್ತೇ ಬಿಟ್ಟುಬಿಡಿ!

ಇತ್ತೀಚಿನ ದಿನಗಳಲ್ಲಿ ಗ್ಯಾಸ್ಟ್ರಿಕ್ ಅಥವಾ ಗ್ಯಾಸ್ ಸಮಸ್ಯೆ (Gastric Problem) ಜನ ಸಾಮಾನ್ಯರಲ್ಲಿ ಹೆಚ್ಚುತ್ತಿದ್ದು, ಜೀವನಶೈಲಿ ಮತ್ತು ಆಹಾರ ಅಭ್ಯಾಸಗಳು ಈ ಸಮಸ್ಯೆಗೆ ಪ್ರಮುಖ ಕಾರಣವಾಗಿವೆ. ತಜ್ಞರ ಅಭಿಪ್ರಾಯದಂತೆ, ಎಲ್ಲಾ ವಯಸ್ಸಿನ ಜನರು ಈ ಸಮಸ್ಯೆಗೆ ಒಳಗಾಗುವ ಸಾಧ್ಯತೆ ಇದೆ.

ಮೂಲತಃ ನಾವು ಸೇವಿಸುವ ಆಹಾರ, ಕುಡಿಯುವ ಪಾನೀಯ, ಹಾಗೂ ಲಾಲಾರಸದ ಮೂಲಕ ಗ್ಯಾಸ್ಟ್ರಿಕ್ ಸಮಸ್ಯೆಗೆ ಕಾರಣವಾಗುವ ಅಂಶಗಳು ದೇಹದಲ್ಲಿ ಪ್ರವೇಶಿಸುತ್ತವೆ. ಅವುಗಳಲ್ಲಿ ಕೆಲವು ಕಫದ ಮೂಲಕ ಹೊರ ಬಂದರೆ, ಉಳಿದವು ಕರುಳಿನಲ್ಲಿ ಶೇಖರವಾಗಿ ಅನಿಲದ ರೂಪದಲ್ಲಿ ಹೊರಬರುತ್ತವೆ.

ಈ ಸಮಸ್ಯೆಯನ್ನು ತಡೆಗಟ್ಟಲು ಹಲವಾರು ವಿಧಾನಗಳಿವೆ. ಆದರೆ ಪ್ರಥಮವಾಗಿ ಗ್ಯಾಸ್ಟ್ರಿಕ್ ಸಮಸ್ಯೆ ಉಂಟುಮಾಡುವ ಆಹಾರಗಳನ್ನು ನಿತ್ಯದ ಆಹಾರದಿಂದ ತ್ಯಜಿಸುವುದು ಅತ್ಯವಶ್ಯಕ. ತಜ್ಞರ ಅಭಿಪ್ರಾಯದಲ್ಲಿ, ಟೀ, ಸೋಡಾ, ತಂಪುಪಾನೀಯ, ತಂಬಾಕು, ಅತಿಮಸಾಲೆಯ ಆಹಾರ, ಬಬಲ್ ಗಮ್ ಮತ್ತು ಚಾಕೊಲೇಟ್ ಗಳಂತಹ ಆಹಾರಗಳು ಈ ಸಮಸ್ಯೆಯನ್ನು ಹೆಚ್ಚಿಸಬಹುದು.

ಇದಲ್ಲದೆ, ಕಾಳುಗಳು, ಬೀನ್ಸ್, ಅಣಬೆಗಳು, ಸೇಬು, ಮತ್ತು ಸಕ್ಕರೆ ಅಂಶವುಳ್ಳ ಆಹಾರಗಳು ದೇಹದಲ್ಲಿ ಸರಿಯಾಗಿ ಜೀರ್ಣವಾಗದೆ ಅನಿಲ ಉಂಟುಮಾಡಬಹುದು. ಹಾಗೆಯೇ, ಹಾಲು, ಚೀಸ್, ಮೊಟ್ಟೆ ಹಾಗೂ ಲ್ಯಾಕ್ಟೋಸ್ ಹೊಂದಿರುವ ಆಹಾರಗಳು ಕೆಲವರಲ್ಲಿ ಗ್ಯಾಸ್ಟ್ರಿಕ್ ಸಮಸ್ಯೆಗೆ ಕಾರಣವಾಗಬಹುದು.

ಅಲ್ಲದೆ, ಅತಿಯಾಗಿ ಕೊಬ್ಬಿರುವ ಅಥವಾ ಜೀರ್ಣಕ್ಕೆ ಹೆಚ್ಚು ಸಮಯ ತೆಗೆದುಕೊಳ್ಳುವ ಆಹಾರಗಳು, ವಿಶೇಷವಾಗಿ ಆಲೂಗೆಡ್ಡೆ, ಗೋಧಿ, ಜೋಳ, ಬ್ರೆಡ್ ಮುಂತಾದವು, ಗ್ಯಾಸ್ಟ್ರಿಕ್ ಸಮಸ್ಯೆಯನ್ನು ದುರ್ಮಟ್ಟಕ್ಕೆ ಕರೆದೊಯ್ಯಬಹುದು.

ಈ ಸಮಸ್ಯೆಯಿಂದ ದೂರವಿರಲು ಹೆಚ್ಚು ನೀರು ಕುಡಿಯುವುದು, ದ್ರವಾಹಾರದ ಸೇವನೆ ಹೆಚ್ಚಿಸುವುದು, ಮತ್ತು ನಿರ್ಜಲೀಕರಣದಿಂದ ತಪ್ಪಿಸಿಕೊಳ್ಳುವುದು ಮುಖ್ಯ. ಈ ಮೂಲಕ ಗ್ಯಾಸ್ಟ್ರಿಕ್ ಸಮಸ್ಯೆಗೆ ಶಾಶ್ವತ ಪರಿಹಾರ ಸಾಧ್ಯವಿದೆ ಎಂಬುದು ತಜ್ಞರ ಸಲಹೆ. (Disclaimer: ಈ ಲೇಖನವು ಸಾರ್ವಜನಿಕ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಯಾಧಾರಿತವಾಗಿದೆ. ಇದು ವೈದ್ಯಕೀಯ ಸಲಹೆಯಲ್ಲ. ಹೆಚ್ಚಿನ ಮಾಹಿತಿಗಾಗಿ ತಜ್ಞರನ್ನು ಸಂಪರ್ಕಿಸಿ.)

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Logged in as Ashika HD. Log out?

Please enter your comment!

error: Content is protected !!