ಸಂಜೆಯ ಟೀಟೈಮ್‌ಗಾಗಿ ಅಥವಾ ವೀಕೆಂಡ್ ತಿನಿಸು ಬೇಕಾದಾಗ ಫಟಾಫಟ್ ಆಗಿ ಮಾಡಬಹುದಾದ ಒಂದು ಸ್ಪೈಸಿ ಮತ್ತು ಕ್ರಿಸ್ಪಿ ಸ್ನ್ಯಾಕ್ ಅಂದ್ರೆ ಅದು ಬ್ರೆಡ್ ಚಿಕನ್ ರೋಲ್ . ಮಾಡೋದು ತುಂಬಾ ಸುಲಭ.
ಬೇಕಾಗುವ ಪದಾರ್ಥಗಳು:
ಬೋನ್ ಲೆಸ್ ಚಿಕನ್ – 300 ಗ್ರಾಂ
ಮೊಸರು – ಅರ್ಧ ಕಪ್
ಬೆಳ್ಳುಳ್ಳಿ ಪೇಸ್ಟ್ – 1 ಚಮಚ
ಕೆಂಪು ಮೆಣಸಿನಕಾಯಿ ತರಿ – 1 ಚಮಚ
ತಂದೂರಿ ಮಸಾಲ ಪುಡಿ – 1 ಚಮಚ
ಹಾಲಿನ ಗಟ್ಟಿ ಕೆನೆ
ಎಣ್ಣೆ – ಕರಿಯಲು
ಉಪ್ಪು – ರುಚಿಗೆ ತಕ್ಕಷ್ಟು
ಬ್ರೆಡ್ ಸ್ಲೈಸ್ – ಬೇಕಾದಷ್ಟು
ಮೊಟ್ಟೆ – 2
ಬ್ರೆಡ್ ಕ್ರಮ್ಸ್ – ಅರ್ಧ ಕಪ್
ಮಾಡುವ ವಿಧಾನ:
ಮೊದಲಿಗೆ ಸಣ್ಣ ತುಂಡುಗಳಾಗಿ ಕತ್ತರಿಸಿದ ಬೋನ್‌ಲೆಸ್ ಚಿಕನ್‌ಗೆ ಮೊಸರು, ಬೆಳ್ಳುಳ್ಳಿ ಪೇಸ್ಟ್, ಉಪ್ಪು, ಕೆಂಪು ಮೆಣಸಿನ ತರಿ, ಮತ್ತು ತಂದೂರಿ ಮಸಾಲಾ ಸೇರಿಸಿ ಚೆನ್ನಾಗಿ ಕಲಸಿ 30 ನಿಮಿಷ ಫ್ರಿಡ್ಜ್‌ನಲ್ಲಿ ಮ್ಯಾರಿನೇಟ್ ಮಾಡಿ.
ನಂತರ ಒಂದು ಬಾಣಲೆಗೆ 2 ಚಮಚ ಎಣ್ಣೆ ಹಾಕಿ, ಮ್ಯಾರಿನೇಟ್ ಮಾಡಿದ ಚಿಕನ್ ಹಾಕಿ ಬಿಸಿ ಬಿಸಿ ಫ್ರೈ ಮಾಡಿ.
ಬ್ರೆಡ್ ಸ್ಲೈಸ್‌ಗಳ ಅಂಚನ್ನು ಕತ್ತರಿಸಿ, ಹಾಲಿನ ಗಟ್ಟಿ ಕೆನೆ ಸವರಿ, ಫ್ರೈ ಮಾಡಿದ ಚಿಕನ್‌ನ್ನು ನಡುವೆ ಇಟ್ಟು ರೋಲ್ ಮಾಡಿ. ನಂತರ ಮೊಟ್ಟೆ ಮಿಶ್ರಣದಲ್ಲಿ ರೋಲ್‌ಗಳನ್ನು ಡಿಪ್ ಮಾಡಿ, ಬ್ರೆಡ್ ಕ್ರಮ್ಸ್‌ನಲ್ಲಿ ಹೊರಳಿಸಿ ಈ ರೋಲ್‌ಗಳನ್ನು ಕಾದ ಎಣ್ಣೆಯಲ್ಲಿ ಡೀಪ್ ಫ್ರೈ ಮಾಡಿದರೆ ಬಿಸಿ ಬಿಸಿ ಬ್ರೆಡ್ ಚಿಕನ್ ರೋಲ್ ರೆಡಿ.