ವಿಚಾರಣೆಗೆಂದು ಪೊಲೀಸರು ಮನೆಗೆ ಬಂದ್ರೆ ಸೀರೆ ಬಿಚ್ಚಿ ಡ್ರಾಮಾ ಮಾಡಿದ ಮಹಿಳೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ವಿಚಾರಣೆಗಾಗಿ ಮನೆ ಬಳಿ ಬಂದ ಪೊಲೀಸ್ ಸಿಬ್ಬಂದಿ ಎದುರು ಮಹಿಳೆಯೊಬ್ಬರು ಸೀರೆ ಬಿಚ್ಚಿ ಹೈಡ್ರಾಮಾ ಮಾಡಿರುವ ಘಟನೆ ನಂಜನಗೂಡಿನಲ್ಲಿ ವರದಿಯಾಗಿದೆ.ಮಹಿಳೆ ಸೀರೆ ಬಿಚ್ಚಿ ಪೊಲೀಸರಿಗೆ ಮುಜುಗರ ತರಿಸಿದ್ದು, ವಿಚಾರಣೆ ನಡೆಸಲು ಸಹಕಾರ ನೀಡಿಲ್ಲ.

ನಂಜನಗೂಡಿನ ಶಿರಮಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ದೂರೊಂದಕ್ಕೆ ಸಂಬಂಧಿಸಿದಂತೆ ಮಾಹಿತಿ ಪಡೆಯಲು ಪೊಲೀಸ್ ಸಿಬ್ಬಂದಿ ಬಂದಿದ್ದರು. ಈ ವೇಳೆ ಸಿಬ್ಬಂದಿ ಕೇಳಿದ ಪ್ರಶ್ನೆಗೆ ಸರಿಯಾಗಿ ಉತ್ತರಿಸದ ಮಹಿಳೆ ಬದಲಿಗೆ ತಾನೇ ಸೀರೆ ಬಿಚ್ಚಿಕೊಂಡು ಹೈಡ್ರಾಮಾ ಮಾಡಿದ್ದಾರೆ. ಅಲ್ಲದೆ ತನ್ನ ಸಂಬಂಧಿಕರಿಗೆ ಈ ವಿಡಿಯೋ ಸೆರೆ ಹಿಡಿಯುವಂತೆ ಹೇಳಿದ್ದಾರೆ.

ಪೊಲೀಸ್ ಸಿಬ್ಬಂದಿ ಎದುರು ಸೀರೆ ಬಿಚ್ಚಿ ಅನುಚಿತವಾಗಿ ವರ್ತಿಸಿರುವ ಮಹಿಳೆಯನ್ನು ರತ್ನಮ್ಮ ಎಂದು ಹೇಳಲಾಗಿದೆ. ಮಹಿಳೆಯ ಈ ಆಘಾತಕಾರಿ ವರ್ತನೆ ವಿಡಿಯೋ ಇದೀಗ ವೈರಲ್ ಆಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!