ಹೊಸದಿಗಂತ ಡಿಜಿಟಲ್ ಡೆಸ್ಕ್:
ರೊಮ್ಯಾಂಟಿಕ್ ಕಥೆಗಳನ್ನು ನಿಜಜೀವಂತ ಚಿತ್ರಣದಂತೆ ರೂಪಿಸುವಲ್ಲಿ ಪ್ರಖ್ಯಾತರಾದ ನಿರ್ದೇಶಕ ಮೋಹಿತ್ ಸೂರಿ, ತಮ್ಮ ಹೊಸ ಚಿತ್ರ ‘ಸೈಯಾರ’ ಮೂಲಕ ಮತ್ತೊಂದು ಯಶಸ್ಸಿನ ದಾರಿ ತೆರೆದಿದ್ದಾರೆ. ಈ ಚಿತ್ರದಿಂದ ಬಾಲಿವುಡ್‌ಗೆ ಅಹಾನ್ ಪಾಂಡೆ ಮತ್ತು ಅನಿತ್ ಪಡ್ಡ ಎಂಬ ಎರಡು ಹೊಸ ಮುಖಗಳು ಪರಿಚಿತರಾಗಿದ್ದು, ಇವರಿಬ್ಬರ ಅಭಿನಯ ಪ್ರೇಕ್ಷಕರಿಂದ ಮೆಚ್ಚುಗೆ ಗಳಿಸಿದೆ. ವಿಶೇಷವೆಂದರೆ, ಅಹಾನ್ ಪಾಂಡೆ ನಟಿ ಅನನ್ಯಾ ಪಾಂಡೆ ಅವರ ಸೋದರ ಸಂಬಂಧಿಯಾಗಿದ್ದಾರೆ.
ಚಿತ್ರ ಬಿಡುಗಡೆಗೊಂಡ ಕೆಲವೇ ದಿನಗಳಲ್ಲಿ ಪ್ರೇಕ್ಷಕರು ಚಿತ್ರಮಂದಿರಗಳಿಗೆ ಕಿಕ್ಕಿರಿದು ಬಂದಿದ್ದಾರೆ. ಮತ್ತೊಂದೆಡೆ, ಹಲವರು ಅದರ OTT ಬಿಡುಗಡೆಗಾಗಿ ಕಾಯುತ್ತಿದ್ದಾರೆ. ಈಗ ಈ ಕುರಿತು ಪ್ರಮುಖ ಮಾಹಿತಿ ಹೊರಬಿದ್ದಿದ್ದು, ‘ಸೈಯಾರ’ ಚಿತ್ರವು ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್ ಆಗಲಿದೆ ಎಂಬ ಮಾತು ಕೇಳಿಬಂದಿದೆ.
ಆದರೆ, OTTನಲ್ಲಿ ಬಿಡುಗಡೆಯಾಗುವ ಖಚಿತ ದಿನಾಂಕವನ್ನು ನಿರ್ಮಾಪಕರು ಇನ್ನೂ ಬಹಿರಂಗಪಡಿಸಿಲ್ಲ. ಹೀಗಿದ್ದರೂ, ಸಾಮಾನ್ಯವಾಗಿ ಸಿನಿಮಾ ಥಿಯೇಟರ್‌ಗಳಲ್ಲಿ ಬಿಡುಗಡೆಯಾದ ಸುಮಾರು 80 ದಿನಗಳ ನಂತರ OTTಯಲ್ಲಿ ಲಭ್ಯವಾಗುವ ಸಂಭವವಿದೆ.
ವಿತರಣಾ ವೀಕ್ಷಣೆಗೂ ಮುನ್ನವೇ ಸೈಯಾರ ಚಿತ್ರ ಬಾಕ್ಸಾಫೀಸ್‌ನಲ್ಲಿ ಭಾರೀ ದಾಖಲೆಗಳನ್ನು ಬರೆದಿದೆ. ಮೊದಲ ದಿನದಲ್ಲೇ 21 ಕೋಟಿ ರೂ. ಗಳಿಸಿದ್ದ ಈ ಚಿತ್ರ ಕೇವಲ ನಾಲ್ಕು ದಿನಗಳಲ್ಲಿ ಭಾರತದಲ್ಲಿ 100 ಕೋಟಿ ರೂ. ಗಳಿಸಿದ್ದು, ವಿಶ್ವದಾದ್ಯಾಂತ 350 ಕೋಟಿ ರೂ.ಗಳಿಗೂ ಮಿಕ್ಕಿದ ಕಲೆಕ್ಷನ್ ಕಂಡಿದೆ. ಇದು ನಿರ್ದೇಶಕ ಮೋಹಿತ್ ಸೂರಿ ಅವರ ವೃತ್ತಿಜೀವನದ ಅತಿದೊಡ್ಡ ಓಪನಿಂಗ್ ಎಂದು ಹೇಳಲಾಗುತ್ತಿದೆ.
ಸದ್ಯ, ‘ಸೈಯಾರ’ ಸಿನಿಮಾ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಚಿತ್ರದ ಕೆಲವು ದೃಶ್ಯಗಳು ವೈರಲ್ ಆಗುತ್ತಿದ್ದು, ಪ್ರೇಕ್ಷಕರಲ್ಲಿ ಚಿತ್ರಬಗ್ಗೆ ಮತ್ತಷ್ಟು ಕುತೂಹಲ ಹುಟ್ಟಿಸುತ್ತಿವೆ. ಚಿತ್ರದ ಯಶಸ್ಸಿಗೆ ಬಾಯಿ ಮಾತಿನ ಪ್ರಚಾರ ಮತ್ತು ಸಾಮಾಜಿಕ ಮಾಧ್ಯಮಗಳ ಬಲವೂ ಸಹಕಾರಿಯಾಗಿದೆ.
OTT ಪ್ಲಾಟ್‌ಫಾರ್ಮ್‌ನಲ್ಲಿ ಬಿಡುಗಡೆಗೂ ಮುನ್ನವೇ ಪ್ರೇಕ್ಷಕರನ್ನು ಸೆಳೆದ ಈ ಚಿತ್ರ, ಡಿಜಿಟಲ್‌ಲಿಯೂ ಅದೇ ಮಟ್ಟದ ಗಮನ ಸೆಳೆಯಬಹುದೆಂಬ ನಿರೀಕ್ಷೆಯಿದೆ.