ಹೊಸದಿಗಂತ ಮಡಿಕೇರಿ:
ಅಪರಿಚಿತ ವಾಹನ ಡಿಕ್ಕಿಯಾಗಿ ಅಪರಿಚಿತ ವ್ಯಕ್ತಿಯೊಬ್ಬರು ಸಾವಿಗೀಡಾಗಿರುವ ಘಟನೆ ಶನಿವಾರ ರಾತ್ರಿ ಪೊನ್ನಂಪೇಟೆ- ಶ್ರೀಮಂಗಲ ಮುಖ್ಯ ರಸ್ತೆಯ ತಾವಳಗೇರಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಆಂಡಮಾಡ ಅರುಣ ಅವರ ಮನೆ ಮುಂಭಾಗದಲ್ಲಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಪಾದಚಾರಿಗೆ ಯಾವುದೋ ವಾಹನ ಡಿಕ್ಕಿಪಡಿಸಿದ್ದು, ಪಾದಚಾರಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಅಪರಿಚಿತ ವ್ಯಕ್ತಿ,ಅಂದಾಜು 50 ವರ್ಷ, 5.2 ಅಡಿ ಎತ್ತರ, ಕಪ್ಪು ಬಿಳುಪು ತಲೆ ಕೂದಲು ಇದ್ದು, ಕುರುಚಲು ಗಡ್ಡ ಮೀಸೆ, ಕೋಲು ಮುಖ, ಎಣ್ಣೆಗೆಂಪು ಬಣ್ಣ, ಸಾಧಾರಣ ಮೈಕಟ್ಟು, ಎರಡು ಮೊಣಕಾಲಿನ ಬಿಳಿ ತೊನ್ನು ಮಚ್ಚೆ ಇರುತ್ತೆ. ಒಂದು ಆಕಾಶ ನೀಲಿ ಬಣ್ಣದ ತುಂಬುತೋಳಿನ ರೆಡಿಮೇಡ್ ಅಂಗಿ, ಕಾಫಿ ಬಣ್ಣದ ರೆಡಿಮೇಡ್ ಪ್ಯಾಂಟ್ ಧರಿಸಿದ್ದು, ಈ ಅಪರಿಚಿತ ವ್ಯಕ್ತಿಯ ಹೆಸರು, ವಿಳಾಸ ಗೊತ್ತಾದಲ್ಲಿ ಕೂಡಲೇ ಶ್ರೀಮಂಗಲ ಪೊಲೀಸ್ ಠಾಣೆ ಎಚ್ಎಸ್ಓ ಅವರಿಗೆ (08274246246 9480804960 +919742297638)ಮಾಹಿತಿ ನೀಡುವಂತೆ ಕೋರಲಾಗಿದೆ.