ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂಗ್ಲೆಂಡ್ ನ ಓವಲ್ ನಲ್ಲಿ ನಡೆಯುತ್ತಿರುವ ಭಾರತ- ಇಂಗ್ಲೆಂಡ್ ನಡುವಿನ 5ನೇ ಟೆಸ್ಟ್ ಪಂದ್ಯದ ನಿರ್ಣಾಯಕ ದಿನವಾದ 4 ನೇ ದಿನದಲ್ಲಿ ಇಂಗ್ಲೆಂಡ್ ಗೆಲುವಿನ ಸನಿಹದಲ್ಲಿದೆ. ಇಂಗ್ಲೆಂಡ್ ಗೆ ಗೆಲುವು ಸಾಧಿಸಲು 35 ರನ್ ಗಳ ಅಗತ್ಯವಿದ್ದರೆ, ಭಾರತದ ಗೆಲುವು 4 ವಿಕೆಟ್ ಗಳನ್ನು ಕೇಳುತ್ತಿದೆ.
ಭಾರತದ 396 ರನ್ ಗಳ ಗುರಿ ಬೆನ್ನಟ್ಟಿದ ಇಂಗ್ಲೆಂಡ್ ತಂಡ 76 ಓವರ್ ಗಳಲ್ಲಿ 339 ರನ್ ಗಳಿಸಿ 6 ವಿಕೆಟ್ ಕಳೆದುಕೊಂಡಿದೆ. ಭಾರತ ಮೊದಲ ಇನ್ನಿಂಗ್ಸ್ ನಲ್ಲಿ 224 ರನ್ ಗಳಿಸಿದ್ದರೆ, ಇಂಗ್ಲೆಂಡ್ 247 ರನ್ ಗಳಿಳಿಸಿತ್ತು. ಭಾರತ ಎರಡನೇ ಇನ್ನಿಂಗ್ಸ್ ನಲ್ಲಿ 396 ಗಳಿಸಿದ್ದರೆ, ಇಂಗ್ಲೆಂಡ್ 339 ಗಳಿಸಿದೆ.
4 ನೇ ದಿನದಾಟದಲ್ಲಿ ಇಂಗ್ಲೆಂಡ್ ನ ಬ್ಯಾಟ್ಸ್ ಮನ್ ಗಳು ಭಾರತೀಯ ಬೌಲರ್ ಗಳನ್ನು ಸಮರ್ಥವಾಗಿ ಎದುರಿಸಿದ ಪರಿಣಾಮ ಇಂಗ್ಲೆಂಡ್ ಗೆಲುವಿನ ಸನಿಹಕ್ಕೆ ಬಂದಿತ್ತು. ಆದರೆ ನಾಟಕೀಯ ಬೆಳವಣಿಗೆಯಲ್ಲಿ ಭಾರತೀಯ ಬೌಲರ್ ಗಳು ಕೊನೆ ಕ್ಷಣದಲ್ಲಿ ಪಂದ್ಯದ ಮೇಲೆ ಹಿಡಿತ ಸಾಧಿಸಿದಂತೆ ತೋರಿದರೂ, ಇಂಗ್ಲೆಂಡ್ ಹಾಗೂ ಭಾರತದ ಮಹತ್ವಾಕಾಂಕ್ಷೆಗೆ ಮಳೆ ಅಡ್ಡಿಯಾಗಿದೆ. ಬೆಳಕಿನ ಅಭಾವದಿಂದ ದಿನದ ಆಟವನ್ನು ರದ್ದುಗೊಳಿಸಲಾಗಿದೆ.