ಮತ್ತೊಂದು ಐತಿಹಾಸಿಕ ದಾಖಲೆ ಬರೆದ ಜೋ ರೂಟ್‌: ಈ ಸಾಧನೆ ಮಾಡಿದ್ದು ಇವರೇ ಫಸ್ಟ್ ಅಂತೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಂಗ್ಲೆಂಡ್‌ನ ಶ್ರೇಷ್ಠ ಬ್ಯಾಟ್ಸ್‌ಮನ್ ಜೋ ರೂಟ್ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ (WTC) ಮಹತ್ವದ ಐತಿಹಾಸಿಕ ಸಾಧನೆ ಮಾಡಿದ್ದು, 6000 ರನ್‌ಗಳನ್ನು ಪೂರೈಸಿದ ಮೊದಲ ಆಟಗಾರರಾಗಿದ್ದಾರೆ. ಭಾರತ ವಿರುದ್ಧ ನಡೆಯುತ್ತಿರುವ ಐದನೇ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ ಈ ಮೈಲಿಗಲ್ಲು ತಲುಪಿದ ರೂಟ್‌ ಅವರು, ಕೇವಲ 25 ರನ್‌ಗಳ ವೈಯಕ್ತಿಕ ಸ್ಕೋರ್‌ನಲ್ಲಿ ಈ ದಾಖಲೆಯನ್ನು ಮುಟ್ಟಿದರು.

ಈ ಸಾಧನೆಯೊಂದಿಗೆ ರೂಟ್ WTC ಇತಿಹಾಸದಲ್ಲೇ ಅಗ್ರ ಸ್ಥಾನಕ್ಕೇರಿದ್ದಾರೆ. ಅವರ ಬಳಿಕ ಸ್ಟೀವ್ ಸ್ಮಿತ್ (4278), ಮಾರ್ನಸ್ ಲ್ಯಾಬುಶೇನ್ (4225), ಬೆನ್ ಸ್ಟೋಕ್ಸ್ (3616) ಹಾಗೂ ಟ್ರಾವಿಸ್ ಹೆಡ್ (3300) ಇದ್ದಾರೆ. ರೂಟ್ ಇದುವರೆಗೆ ಈ ಫಾರ್ಮೆಟ್ ನಲ್ಲಿ 20 ಶತಕ ಮತ್ತು 22 ಅರ್ಧಶತಕಗಳನ್ನು ದಾಖಲಿಸಿದ್ದಾರೆ ಎಂಬುದು ವಿಶೇಷ.

ಈ ಸರಣಿಯಲ್ಲೂ ರೂಟ್ ಉತ್ತಮ ಫಾರ್ಮ್ ತೋರಿಸಿದ್ದು, ಈಗಾಗಲೇ ಎರಡು ಶತಕಗಳನ್ನು ಸಿಡಿಸಿದ್ದಾರೆ. ಐದನೇ ಟೆಸ್ಟ್ ಪಂದ್ಯದಲ್ಲಿ ಅವರು ಟೀ ವಿರಾಮದ ವೇಳೆಗೆ 135 ಎಸೆತಗಳಲ್ಲಿ 98 ರನ್‌ಗಳನ್ನು ಗಳಿಸಿದ್ದರು. ಶತಕ ಸಿಡಿಸಿದರೆ ಇದು ಅವರ WTCನಲ್ಲಿ 21ನೇ ಶತಕವಾಗುತ್ತಿದ್ದು, ಭಾರತದ ವಿರುದ್ಧ ಇದು 13ನೇ ಶತಕವಾಗಲಿದೆ. ಈ ಮೂಲಕ, ಒಂದು ದೇಶದ ವಿರುದ್ಧ ಅತಿ ಹೆಚ್ಚು ಶತಕಗಳ ದಾಖಲೆಯೂ ಅವರದಾಗುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!