ಮಕ್ಕಳ ಕೂದಲಿನ ಆರೋಗ್ಯ ಕಾಪಾಡುವುದು ಪೋಷಕರ ಪ್ರಮುಖ ಜವಾಬ್ದಾರಿಗಳಲ್ಲೊಂದು. ಚಳಿಗಾಲವಾಗಲಿ ಅಥವಾ ಬೇಸಿಗೆಯೇ ಆಗಿರಲಿ ಅಥವಾ ಮಳೆಗಾಲವೇ ಆಗಿರಲಿ, ಪ್ರತಿ ಋತುವಿನಲ್ಲಿ ಕೂದಲಿನ ಸರಿಯಾದ ಆರೈಕೆ ಅತ್ಯವಶ್ಯಕವಾಗಿದೆ. ತಜ್ಞರ ಪ್ರಕಾರ, ಮಕ್ಕಳ ತ್ವಚೆ ಮತ್ತು ಕೂದಲನ್ನು ಹೊಂದಿರುವುದರಿಂದ ರಾಸಾಯನಿಕಗಳುಳ್ಳ ಉತ್ಪನ್ನಗಳಿಂದ ದೂರವಿರಬೇಕು.
ಸೂಕ್ತ ಶಾಂಪೂ ಆಯ್ಕೆ ಅಗತ್ಯ
ಮಕ್ಕಳ ಕೂದಲಿಗೆ ಹೆಚ್ಚು ಪಿಹೆಚ್ ಹೊಂದಿರುವ ಶಾಂಪೂಗಳನ್ನು ಉಪಯೋಗಿಸಬಾರದು. ಇದರಿಂದ ಕೂದಲು ಒಣಗುವ ಸಾಧ್ಯತೆ ಹೆಚ್ಚು. ತಜ್ಞರು ಸೂಚಿಸುವಂತೆ, pH 4.5 ರಿಂದ 5.5 ರ ನಡುವೆ ಇರುವ ಶಾಂಪೂ ಬಳಸುವುದು ಒಳಿತು. ಜೊತೆಗೆ ಗಿಡಮೂಲಿಕೆಗಳಿಂದ ತಯಾರಾದ ಶಾಂಪೂಗಳನ್ನು ಬಳಸುವುದು ಸುರಕ್ಷಿತ.
ಮಸಾಜ್ ಮೂಲಕ ಕೇರ್
ಪ್ರತಿ ವಾರ ಎರಡು ಅಥವಾ ಮೂರೂ ಬಾರಿ ಮಕ್ಕಳ ತಲೆಚರ್ಮಕ್ಕೆ ಎಣ್ಣೆ ಹಚ್ಚಿ ಮಸಾಜ್ ಮಾಡುವ ಮೂಲಕ ಕೂದಲಿನ ಬೇರುಗಳಿಗೆ ರಕ್ತ ಸಂಚಾರ ಹೆಚ್ಚಿಸಿ. ಇದು ಕೂದಲಿನ ಬೆಳವಣಿಗೆಯಲ್ಲಿ ಸಹಾಯ ಮಾಡುತ್ತದೆ. ಬಾದಾಮಿ ಅಥವಾ ತೆಂಗಿನ ಎಣ್ಣೆ ಬಳಸಬಹುದು.
ಮಿತವಾದ ಶಾಂಪೂ ಬಳಕೆ
ತಜ್ಞರ ಅಭಿಪ್ರಾಯದಲ್ಲಿ ಪ್ರತಿದಿನ ಶಾಂಪೂ ಬಳಸುವುದು ತಪ್ಪು. ವಾರಕ್ಕೆ ಎರಡು ಅಥವಾ ಮೂರು ಬಾರಿ ಮಾತ್ರ ಕೂದಲನ್ನು ತೊಳೆಯುವುದು ಉತ್ತಮ. ಇದರಿಂದ ಕೂದಲಿನ ನೈಸರ್ಗಿಕ ಎಣ್ಣೆ ಉಳಿಯುತ್ತದೆ ಮತ್ತು ಕೂದಲು ಆರೋಗ್ಯಕರವಾಗಿರುತ್ತದೆ.
ಟ್ರಿಮ್ಮಿಂಗ್ ಕೂಡ ಮುಖ್ಯ
ಮಕ್ಕಳ ಕೂದಲನ್ನು ನಿಯಮಿತವಾಗಿ ಟ್ರಿಮ್ ಮಾಡುವ ಮೂಲಕ ಡ್ಯಾಂಜ್ರಫ್ ಸಮಸ್ಯೆ ತಪ್ಪಿಸಬಹುದು. ಹುಡುಗಿಯರ ಕೂದಲಿಗೆ ಎರಡು ತಿಂಗಳಿಗೊಮ್ಮೆ ಟ್ರಿಮ್ ಮಾಡುವ ಸಲಹೆ ಇದೆ.
ಡ್ರೈಯರ್ ಬಳಕೆ ತಪ್ಪಿಸಿ
ಒದ್ದೆಯ ಕೂದಲಿಗೆ ಡ್ರೈಯರ್ ಬಳಸದಿರಿ. ನೈಸರ್ಗಿಕವಾಗಿ ಕೂದಲನ್ನು ಒಣಗಿಸುವುದು ಉತ್ತಮ. ಅತಿಯಾಗಿ ಬೇಸಿಗೆ ಕಾಲದಲ್ಲಿ ಡ್ರೈಯರ್ ಬಳಕೆ ಕೂದಲು ಹೆಚ್ಚು ಒಣಗಿಸಿ ಹಾನಿಗೊಳಿಸಬಹುದು.