ಇಂದಿನ ಬ್ಯುಸಿ ಜೀವನಶೈಲಿಯಲ್ಲಿ ಬಹಳಷ್ಟು ಜನ ದಿನವಿಡೀ ಕಂಪ್ಯೂಟರ್ ಅಥವಾ ಮೊಬೈಲ್ ಸ್ಕ್ರೀನ್ಗಳಿಗೆ ಒಡ್ಡಿಕೊಳ್ಳುವಂತೆ ಆಗಿದೆ. ಇದರ ಪರಿಣಾಮವಾಗಿ ಕಣ್ಣುಗಳಿಗೆ ತೊಂದರೆ, ದೇಹಕ್ಕೆ ಒತ್ತಡ ಹಾಗೂ ತಲೆನೋವು ಸಾಮಾನ್ಯ ಸಮಸ್ಯೆಗಳಾಗಿ ಪರಿಣಮಿಸುತ್ತಿವೆ. ಕೆಲವೊಮ್ಮೆ ಈ ತಲೆನೋವು ಸಾಮಾನ್ಯ ಎಂದು ನಿರ್ಲಕ್ಷಿಸುತ್ತಾರೆ. ಆದರೆ ಇದು ಮೈಗ್ರೇನ್ ಆಗಿರಬಹುದು ಎಂಬುದು ನಿಮಗೆ ಗೊತ್ತ.
ಮೈಗ್ರೇನ್ನ ನೋವು ಹೆಚ್ಚಾದಾಗ ಪ್ರಕಾಶಮಾನವಾದ ಬೆಳಕಿನಿಂದಾಗಿ ನೀವು ಚಡಪಡಿಕೆ, ವಾಂತಿ ಮತ್ತು ಭಯವನ್ನು ಸಹ ಅನುಭವಿಸಬಹುದು. ಈ ನೋವನ್ನು ನಿಲ್ಲಿಸಲು ಹಲವರು ಮಾತ್ರೆಗಳಿಗೆ ಅವಲಂಬಿತರಾಗುತ್ತಾರೆ. ಆದರೆ ಪ್ರತಿಸಾರಿ ಔಷಧಿಗಳಿಗೆ ಅವಲಂಬಿತವಾಗದೇ, ಕೆಲವೆಲ್ಲಾ ಮನೆಮದ್ದುಗಳನ್ನೂ ಪ್ರಯೋಗಿಸಬಹುದು.
ಶುಂಠಿ ಚಹಾ: ಸುಲಭವಾಗಿ ತಯಾರಿಸಬಹುದಾದ ಮನೆಮದ್ದುಗಳಲ್ಲೊಂದು. ಶುಂಠಿಯು ಶೀತ, ತಲೆನೋವು ನಿವಾರಣೆಗೆ ಉತ್ತಮವಾದ ನೈಸರ್ಗಿಕ ಪರ್ಯಾಯವಾಗಿದೆ. ದಿನಕ್ಕೆ ಎರಡು ಬಾರಿ ಶುಂಠಿ ಚಹಾ ಕುಡಿಯುವುದರಿಂದ ತೀವ್ರತೆಯನ್ನು ಕಡಿಮೆ ಮಾಡಬಹುದು.
ಸಾಕಷ್ಟು ನೀರು ಕುಡಿಯುವುದು: ದೇಹದಲ್ಲಿ ನೀರಿನ ಕೊರತೆಯು ಕೂಡ ಮೈಗ್ರೇನ್ಗೆ ಕಾರಣವಾಗಬಹುದು. ದಿನವಿಡೀ ಕನಿಷ್ಠ 4-5 ಲೀಟರ್ ನೀರು ಕುಡಿಯುವುದರಿಂದ ದೇಹದ ಎಲೆಕ್ಟ್ರೋಲೈಟ್ ಸಮತೋಲನ ಕಾಪಾಡಬಹುದು.
ದಾಲ್ಚಿನ್ನಿ ಪೇಸ್ಟ್: ದಾಲ್ಚಿನ್ನಿ ಪುಡಿಯನ್ನು ನೀರಿನಲ್ಲಿ ಕಲಸಿ ದಪ್ಪ ಪೇಸ್ಟ್ ತಯಾರಿಸಿ, ಅದನ್ನು ಹಣೆಗೆ ಹಚ್ಚುವುದರಿಂದ ಅರ್ಧ ಗಂಟೆಯಲ್ಲಿ ನೋವು ಇಳಿಯುತ್ತದೆ ಎಂಬ ಅಭಿಪ್ರಾಯವಿದೆ.
ತಣ್ಣನೆಯ ಪಟ್ಟಿಯನ್ನು ಇಡುವುದು: ಹಣೆಗೆ ಐಸ್ ಪ್ಯಾಕ್ ಅಥವಾ ತಣ್ಣನೆಯ ಬಟ್ಟೆ ಇಡುವುದರಿಂದ ತಲೆ ನರಗಳು ತಂಪಾಗುತ್ತವೆ ಮತ್ತು ತಾತ್ಕಾಲಿಕ ಪರಿಹಾರ ಸಿಗುತ್ತದೆ.
ಮೈಗ್ರೇನ್ ಪ್ರತಿ ವ್ಯಕ್ತಿಯಲ್ಲಿ ವಿಭಿನ್ನವಾಗಿರಬಹುದು. ಆದ್ದರಿಂದ ಈ ಹಳೆ ಕಾಲದ ಮನೆಮದ್ದುಗಳು ಪರಿಣಾಮಕಾರಿಯಾಗಿವೆ ತೀವ್ರ ಸಮಸ್ಯೆ ಇದ್ದರೆ ತಜ್ಞರ ಸಲಹೆ ಅತ್ಯವಶ್ಯಕ.(Disclaimer: ಈ ಲೇಖನವು ಸಾರ್ವಜನಿಕ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಯಾಧಾರಿತವಾಗಿದೆ. ಇದು ವೈದ್ಯಕೀಯ ಸಲಹೆಯಲ್ಲ. ಹೆಚ್ಚಿನ ಮಾಹಿತಿಗಾಗಿ ತಜ್ಞರನ್ನು ಸಂಪರ್ಕಿಸಿ.)