FOOD | ಮಧ್ಯಾಹ್ನ ಊಟಕ್ಕೆ ಫಿಶ್ ಫ್ರೈ ಇದ್ರೆ ಇನ್ನೇನು ಬೇಕು ಅಲ್ವ? ನೀವು ಒಂದ್ಸಲ ಈ ರೆಸಿಪಿ ಟ್ರೈ ಮಾಡಿ

ಫಿಶ್ ಫ್ರೈ ಎಂದರೆ ಹಲವರಿಗೆ ಬಾಯಲ್ಲಿ ನೀರು ಬರೋದು ಖಂಡಿತ. ಮೀನು ಸೇವನೆ ಆರೋಗ್ಯಕ್ಕೆ ತುಂಬಾ ಲಾಭದಾಯಕ. ಇದರಲ್ಲಿ ಒಮೆಗಾ-3 ಫ್ಯಾಟ್‌ಗಳು ಇರುವುದರಿಂದ ಮೆದುಳಿನ ಚಟುವಟಿಕೆಗಳು ಹೆಚ್ಚಾಗುತ್ತವೆ. ಹೀಗಾಗಿ ಮನೆಯಲ್ಲಿ ತಯಾರಿಸುವ ಫಿಶ್ ಫ್ರೈ ಹೆಚ್ಚು ರುಚಿಕರವಾಗಿರುತ್ತದೆ. ಇಲ್ಲಿ ಫಿಶ್ ಫ್ರೈ ಮಾಡುವ ಸರಳ ಮತ್ತು ರುಚಿಕರ ವಿಧಾನವನ್ನು ನೀಡಲಾಗಿದೆ.

ಬೇಕಾಗುವ ಸಾಮಗ್ರಿಗಳು:

ಖಾರದ ಪುಡಿ – 1 ಚಮಚ
ಕಾಳು ಮೆಣಸಿನ ಪುಡಿ – ಕಾಲು ಚಮಚ
ಅರಿಶಿಣ – ಚಿಟಿಕೆ
ಉಪ್ಪು – ರುಚಿಗೆ ತಕ್ಕಷ್ಟು
ಶುಂಠಿ ಬೆಳ್ಳುಳ್ಳಿ ಪೇಸ್ಟ್ – 1 ಚಮಚ
ನಿಂಬೆ ಹಣ್ಣು – 1
ಎಣ್ಣೆ – 4-5 ಚಮಚ
ಫಿಶ್ – 6-8 ಪೀಸ್‍ಗಳು
(ಖಾರ ಜಾಸ್ತಿ ಬೇಕಾದವರು ಖಾರದ ಪುಡಿ ಜಾಸ್ತಿ ಬಳಸಬಹುದು)

ಮಾಡುವ ವಿಧಾನ:

ಮೊದಲು ಒಂದು ಬೌಲ್‌ನಲ್ಲಿ ಖಾರದ ಪುಡಿ, ಕಾಳು ಮೆಣಸಿನ ಪುಡಿ, ಅರಿಶಿಣ, ಉಪ್ಪು, ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಗೂ ಅರ್ಧ ನಿಂಬೆಹಣ್ಣಿನ ರಸವನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಇದರೊಂದಿಗೆ 2-3 ಚಮಚ ನೀರನ್ನು ಸೇರಿಸಿ ಒಂದು ಗಾಢ ಮಸಾಲೆ ಪೇಸ್ಟ್ ತಯಾರಿಸಿ.

ಈ ಮಸಾಲೆಗೆ ತೊಳೆದ ಮೀನು ತುಂಡುಗಳನ್ನು ಹಾಕಿ ಸಲೀಸಾಗಿ ಮಿಶ್ರಣವನ್ನು ಲೇಪಿಸಿ. ಇದನ್ನು ಕನಿಷ್ಠ ಅರ್ಧ ಗಂಟೆ ಮ್ಯಾರಿನೇಟ್ ಆಗಲು ಬಿಡಿ.

ನಂತರ ಫ್ರೈಯಿಂಗ್ ಪ್ಯಾನ್‌ಗೆ ಎಣ್ಣೆ ಹಾಕಿ ಕಾದ ಬಳಿಕ, ಫಿಶ್ ತುಂಡುಗಳನ್ನು ಎರಡು ಬದಿಯಿಂದ ಚಿನ್ನದ ಬಣ್ಣ ಬರುವವರೆಗೆ ಫ್ರೈ ಮಾಡಿದರೆ ಫಿಶ್ ಫ್ರೈ ರೆಡಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Logged in as Ashika HD. Log out?

Please enter your comment!

error: Content is protected !!