Lip Care | ತುಟಿಗಳ ಬಣ್ಣ ಕಪ್ಪಾಗೋದು ಯಾಕೆ? ಮನೆಯಲ್ಲೇ ನೈಸರ್ಗಿಕವಾಗಿ ಗುಲಾಬಿ ಬಣ್ಣ ಪಡೆಯೋದು ಹೇಗೆ?

ಮುಖದ ಸೌಂದರ್ಯ ಹೆಚ್ಚಿಸಲು ವಿವಿಧ ಕ್ರೀಮ್, ಫೌಂಡೇಶನ್ ಬಳಸುವವರಿಗೆ ತುಟಿಗಳ ಆರೈಕೆ ಕಡೆಗಣನೆಯ ವಿಷಯವಾಗಿದೆ. ವಿಶೇಷವಾಗಿ ತುಟಿಗಳ ಬಣ್ಣ ಕಪ್ಪಾಗುವುದು ಸಾಮಾನ್ಯ ದೂರು. ಇದನ್ನು ಮರೆಮಾಚಲು ಮಹಿಳೆಯರು ಲಿಪ್‌ಸ್ಟಿಕ್‌ ಬಳಸುವಾಗ, ಗಂಡಸರು ಪ್ರಾಕೃತಿಕವಾಗಿ ಈ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಆದರೂ ಈ ಸಮಸ್ಯೆಗೆ ಲಿಪ್‌ಸ್ಟಿಕ್ ಅಥವಾ ರಾಸಾಯನಿಕ ಉತ್ಪನ್ನಗಳಿಗಿಂತಲೂ ಹೆಚ್ಚು ಪರಿಣಾಮಕಾರಿ ಪರಿಹಾರಗಳು ಮನೆಮದ್ದುಗಳಲ್ಲಿವೆ.

ತುಟಿಗಳು ಕಪ್ಪಾಗುವ ಪ್ರಮುಖ ಕಾರಣಗಳು

ಅತಿಯಾದ ಧೂಮಪಾನ, ತಂಬಾಕು ಸೇವನೆ, ಸರಿಯಾದ ನೀರಿನ ಸೇವನೆಯಿಲ್ಲದಿರುವುದು, ಬಿಸಿಲಿನ ತೀವ್ರತೆ, ವಿಟಮಿನ್‌ಗಳ ಕೊರತೆ ಹಾಗೂ ರಾಸಾಯನಿಕಗಳಿಂದ ತುಂಬಿರುವ ಲಿಪ್‌ಬಾಮ್‌ ಮತ್ತು ಟೂತ್‌ಪೇಸ್ಟ್‌ಗಳು ತುಟಿಗಳ ತ್ವಚೆಗೆ ಹಾನಿ ಮಾಡುತ್ತವೆ. ಇದು ಹೈಪರ್‌ಪಿಗ್ಮೆಂಟೇಶನ್‌ ಗೆ ಕಾರಣವಾಗುತ್ತದೆ. ತಜ್ಞರ ಅಭಿಪ್ರಾಯದಂತೆ, ಸರಿಯಾದ ಆರೋಗ್ಯದ ಜೀವನಶೈಲಿಯನ್ನು ಅನುಸರಿಸಿ, ನೈಸರ್ಗಿಕ ವಿಧಾನಗಳಲ್ಲಿ ತುಟಿಗಳ ಬಣ್ಣವನ್ನು ಮರಳಿ ಪಡೆಯಬಹುದು.

ಬೀಟ್ರೂಟ್ ಮತ್ತು ನಿಂಬೆ: ಒಂದು ಟೀಚಮಚ ಬೀಟ್ರೂಟ್ ರಸ ಮತ್ತು ಕೆಲವು ಹನಿ ನಿಂಬೆ ರಸ ಮಿಶ್ರಣವನ್ನು ಮಲಗುವ ಮುನ್ನ ತುಟಿಗೆ ಹಚ್ಚಿ, ಬೆಳಿಗ್ಗೆ ತೊಳೆಯಿರಿ.

ನಿಂಬೆ ಮತ್ತು ಜೇನುತುಪ್ಪ: ತೇವಾಂಶ ನೀಡುವ ಈ ಮಿಶ್ರಣವು ತುಟಿಗಳನ್ನು ಸಾಫ್ಟ್ ಮಾಡುತ್ತದೆ. ಪ್ರತಿದಿನ ಹಚ್ಚುವುದು ಉತ್ತಮ.

ಅಲೋವೆರಾ ಜೆಲ್: ನೈಸರ್ಗಿಕ ತೇವಾಂಶ ನೀಡುವ ಅಲೋವೆರಾ ತುಟಿಗಳನ್ನು ಮೃದುವಾಗಿ ಹಾಗೂ ಪಿಂಕ್ ಬಣ್ಣಕ್ಕೆ ತಿರುಗಿಸುತ್ತದೆ.

ತೆಂಗಿನ ಎಣ್ಣೆ ಅಥವಾ ಬಾದಾಮಿ ಎಣ್ಣೆ: ತುಟಿಗಳ ತೇವಾಂಶ ಕಾಪಾಡಿ, ಚರ್ಮವನ್ನು ನಯಗೊಳಿಸುತ್ತದೆ.

ಟೊಮೇಟೋ ಪೇಸ್ಟ್: ವಿಟಮಿನ್ ಸಿ ಮತ್ತು ಆಂಟಿಆಕ್ಸಿಡೆಂಟ್‌ನಿಂದ ತುಟಿಯ ಕಪ್ಪು ಬಣ್ಣ ಕಡಿಮೆಯಾಗುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Logged in as Ashika HD. Log out?

Please enter your comment!

error: Content is protected !!