ಹೊಸದಿಗಂತ ವರದಿ ಹಾವೇರಿ:
ಟ್ರ್ಯಾಕ್ಟರ್ ರೋಟೋವೇಟರ್ ಗೆ ಸಿಲುಕಿ ಯುವಕನ ದೇಹ ಛಿದ್ರ ಛಿದ್ರಗೊಂಡ ಘಟನೆ ಜಿಲ್ಲೆಯ ಹಾವೇರಿ ತಾಲೂಕಿನ ನೆಗಳೂರು ಗ್ರಾಮದಲ್ಲಿ ನಡೆದಿದೆ.
ಶಿವಾನಂದ ಹುಣಸಿಮರದ (30) ರೋಟೋವೇಟರ್ ಸಿಲುಕಿ ಮೃತಪಟ್ಟ ಯುವಕ. ಭಾನುವಾರ ರಾತ್ರಿ ಜಮೀನು ಉಳುಮೆ ತೆರಳಿದ್ದ ಯುವಕ, ಟ್ರ್ಯಾಕ್ಟರ್ ಮೂಲಕ ಜಮೀನಿನಲ್ಲಿ ಉಳುಮೆ ಮಾಡುತ್ತಿದ್ದ.
ಈ ವೇಳೆ ರೋಟೋವೇಟರ್ ಮೇಲೆ ಕುಳಿತಿದ್ದ ಶಿವಾನಂದ ದಿಢೀರನೆ ಆಯಾತಪ್ಪಿ ರೋಟೋವೇಟರ್ ಒಳಗೆ ಸಿಲುಕಿದ್ದಾನೆ. ರೋಟೋವೇಟರ್ ಗೆ ಸಿಲುಕಿದ ಶಿವಾನಂದ ಹುಣಸಿಮರದ ದೇಹ ಹೊಲದಲ್ಲಿ ಛಿದ್ರ ಛಿದ್ರವಾಗಿ ಪತ್ತೆಯಾಗಿದ್ದು, ಕಾಲು ಒಂದೆಡೆ, ದೇಹ ಒಂದೆಡೆ ಹೀಗರ ಮೃತದೇಹ ಛಿದ್ರ ಛಿದ್ರವಾಗಿದೆ.
ಈ ಕುರಿತು ಗುತ್ತಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.