ಮೇಷ.
ವೃತ್ತಿಯಲ್ಲಿ ಉನ್ನತಿ. ಪೂರಕ ಪರಿಸ್ಥಿತಿ. ಮುಖ್ಯ ಗುರಿಯೊಂದರ ಈಡೇರಿಕೆ. ಇತರರ ಆಮಿಷದ ಯೋಜನೆಗೆ ಹಣ ಹಾಕಬೇಡಿ.
ವೃಷಭ
ಪಾಲುದಾರಿಕೆಯ ಪ್ರಸ್ತಾಪ ಲಾಭ ತರಲಿದೆ. ಆದರೆ ಎಚ್ಚರದಿಂದ ಹೆಜ್ಜೆಯಿಡಿ. ಸಂಗಾತಿ ಜತೆಗಿನ ಸಂಬಂಧದಲ್ಲಿ ಒತ್ತಡ ಉಂಟಾಗಲಿದೆ.
ಮಿಥುನ
ನಿಮ್ಮ ಭಾವನೆ ಆಪ್ತರ ಸಂಗಡ ಹಂಚಿಕೊಳ್ಳಿ. ಅದರಿಂದ ಮನಸ್ಸು ನಿರಾಳ. ಒತ್ತಡ ಹೆಚ್ಚಲು ಅವಕಾಶ ಕೊಡಬೇಡಿ. ಆರ್ಥಿಕ ಸಂಕಷ್ಟ.
ಕಟಕ
ಕುಟುಂಬದಲ್ಲಿ ಭಿನ್ನಮತ ಸಂಭವ. ಹೊಂದಾಣಿಕೆ ಮುಖ್ಯ. ಹಠ ಹಿಡಿಯಬೇಡಿ. ಕೆಟ್ಟ ಆಹಾರ ಸೇವನೆಯಿಂದ ಹೊಟ್ಟೆ ಕೆಡಬಹುದು.
ಸಿಂಹ
ಭಿನ್ನಮತ ನಿವಾರಣೆಗೆ ಮುಕ್ತ ಮಾತುಕತೆ ಸುಲಭ ದಾರಿ. ಮನದಲ್ಲಿ ಕೋಪ ಇಟ್ಟುಕೊಂಡು ಮನಸು ಕೆಡಿಸಿಕೊಳ್ಳಬೇಡಿ.
ಕನ್ಯಾ
ಮನೆಯ ವಾತಾವರಣ ಬೇಸರಕ್ಕೆ ಕಾರಣವಾದೀತು. ನಿಮಗೆ ಸೂಕ್ತ ಸಹಕಾರ ಸಿಗದೆ ನಿರಾಶೆ. ಹಣದ ಬಿಕ್ಕಟ್ಟು ನೀಗುವುದು.
ತುಲಾ
ಸಣ್ಣ ಸಂಘರ್ಷ, ವಾಗ್ವಾದಗಳಿಂದ ಇಂದು ದೂರವಿರಿ. ಹೆಚ್ಚು ಹೊಣೆಯಿಂದ ಬಸವಳಿಕೆ. ಆರ್ಥಿಕ ಲಾಭ. ಆದರೆ ಖರ್ಚು ಕಡಿಮೆ ಮಾಡಿ.
ವೃಶ್ಚಿಕ
ವೃತ್ತಿಯಲ್ಲಿ ಸಫಲತೆ. ಧನಪ್ರಾಪ್ತಿ. ಆರೋಗ್ಯದಲ್ಲಿ ಏರುಪೇರು ಸಂಭವ. ಕೌಟುಂಬಿಕ ಒತ್ತಡ ಹೆಚ್ಚುವುದು. ಮಾತಿನ ಚಕಮಕಿ ನಡೆದೀತು.
ಧನು
ಕುಟುಂಬ ಸದಸ್ಯರ ಜತೆ ಹೆಚ್ಚು ಕಾಲ ಕಳೆಯುವ ಅವಕಾಶ. ವ್ಯವಹಾರದಲ್ಲಿ ಆತುರದ ತೀರ್ಮಾನ ತಾಳಬೇಡಿ. ಸಂಯಮ ಅಗತ್ಯ.
ಮಕರ
ಹಣದ ಹರಿವು ಹೆಚ್ಚಳ. ಅವಶ್ಯಕ್ಕೆ ತಕ್ಕಂತೆ ಮಾತ್ರ ಖರ್ಚು ಮಾಡಿ. ವದಂತಿಗಳಿಗೆ, ಬೆನ್ನ ಹಿಂದಿನ ಮಾತುಗಳಿಗೆ ಗಮನ ಕೊಡಬೇಡಿ.
ಕುಂಭ
ಆಂತರಿಕ ಸಮಸ್ಯೆ ಕಾಡುವುದು. ಹೊರಗೆ ಪರಿಹಾರ ಹುಡುಕದಿರಿ. ನಿಮ್ಮಲ್ಲೆ ಪರಿಹಾರವಿದೆ. ಧೋರಣೆ ಬದಲಿಸಿಕೊಳ್ಳಿ. ಸಹಕಾರ ಪಡೆಯಿರಿ.
ಮೀನ
ನಿಮ್ಮ ಉದ್ದೇಶ ಸಾ?ಸಲು ನಿರಂತರ ಪ್ರಯತ್ನ ಅವಶ್ಯ. ತಕ್ಷಣ -ಲ ಸಿಗಬೇಕೆಂದು ಆಶಿಸದಿರಿ. ಕೌಟುಂಬಿಕ ಸಂಘರ್ಷ ಸಂಭವ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ